ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಅದರಲ್ಲಿಯೂ ಮುಖ್ಯವಾಗಿ ಪ್ರಾಣಿ ಹಾಗೂ ಹಾವಿನ ವಿಡಿಯೋಗಳಿಗಂತೂ ನೆಟ್ಟಿಗರು ಫಿದಾ ಆಗ್ತಾರೆ. ಸದ್ಯ ಅಂತಹದ್ದೇ ಒಂದು ಮೈ ಜುಮ್ ಎನಿಸುವ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಸಾಮಾನ್ಯವಾಗಿ ಮನೆಯಲ್ಲಿ ಸಣ್ಣ ಹಲ್ಲಿ ಕಂಡರೇನೇ ಎಷ್ಟೋ ಜನ ಹೆದರಿ ಓಡಿಹೋಗ್ತಾರೆ. ಅಂಥದ್ದರಲ್ಲಿ ಎಸಿ (AC) ಒಳಗಡೆ ಅಡಗಿ ಕುಳಿತಿದ್ದ ಬೃಹತ್ ಹಾವನ್ನು ಯುವತಿಯೊಬ್ಬಳು (Female Snake Catcher) ಅದೆಷ್ಟು ಸಲೀಸಾಗಿ ಹಿಡಿದಿದ್ದಾಳೆ ಗೊತ್ತಾ? ಈ ವಿಡಿಯೋ ನೋಡಿದ್ರೆ ನೀವು ಖಂಡಿತ ‘ಅಬ್ಬಾ.. ಏನ್ ಧೈರ್ಯ ಮಾರಾಯ್ತಿ!’ ಅನ್ನೋದು ಗ್ಯಾರಂಟಿ.

Female Snake Catcher – ಮಳೆಗಾಲ ಬಂದ್ರೆ ಸಾಕು.. ಮನೆಗೆ ಬರ್ತಾರೆ ಅತಿಥಿಗಳು!
ಮಳೆಗಾಲ ಆರಂಭವಾಯಿತೆಂದರೆ ಸಾಕು, ಗ್ರಾಮೀಣ ಹಾಗೂ ಅರೆ ಪಟ್ಟಣ ಪ್ರದೇಶಗಳಲ್ಲಿ ಹಾವಿನ ಕಾಟ ಹೆಚ್ಚಾಗುತ್ತದೆ. ಹಾವಿನ ಬಿಲಗಳಿಗೆ ಮಳೆ ನೀರು ನುಗ್ಗುವುದರಿಂದ, ಅವು ಬೇರೆ ದಾರಿಯಿಲ್ಲದೆ ಸುರಕ್ಷಿತ ಜಾಗ ಹುಡುಕುತ್ತಾ ವಸತಿ ಪ್ರದೇಶಗಳಿಗೆ, ಅಂದರೆ ಜನರ ಮನೆಗಳ ಕಡೆಗೆ ಮುಖ ಮಾಡುತ್ತವೆ. ಇದೇ ರೀತಿ ಇಲ್ಲೊಂದು ಮನೆಯೊಳಗೆ ನುಗ್ಗಿದ ಬೃಹತ್ ಹಾವೊಂದು ನೇರವಾಗಿ ಹೋಗಿ ಎಸಿ (Air Conditioner) ಒಳಗಡೆ ಅವಿತು ಕುಳಿತುಕೊಂಡಿದೆ. ಎಸಿ ಆನ್ ಮಾಡಲು ಹೋದ ಮನೆಯವರಿಗೆ ಒಳಗಿದ್ದ ಹಾವನ್ನು ನೋಡಿ ಒಮ್ಮೆಲೇ ಎದೆನಡುಕ ಶುರುವಾಗಿದೆ. ಇಡೀ ಕುಟುಂಬವೇ ಭಯದಿಂದ ಬೆಚ್ಚಿಬಿದ್ದಿದೆ.
ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?
ಮನೆಯ ಎಸಿ ಒಳಗಡೆ ಹಾವು ಇರುವುದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ‘ಶ್ವೇತಾ’ ಎಂಬ ಹೆಸರಿನ ಧೈರ್ಯಶಾಲಿ ಮಹಿಳಾ ಉರಗ ತಜ್ಞೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆಯೇ ಸ್ಪಾಟ್‌ಗೆ ಬಂದ ಶ್ವೇತಾ, ಎಸಿ ಒಳಗಡೆ ಅಡಗಿದ್ದ ಹಾವನ್ನು ಹಿಡಿಯಲು ಮುಂದಾಗಿದ್ದಾರೆ.
ಮೊದಲ ಪ್ರಯತ್ನದಲ್ಲಿ ಆ ಬೃಹತ್ ಹಾವು ಆಕೆಯ ಕೈಗೆ ಸಿಗದೆ ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೂ ಧೃತಿಗೆಡದ ಶ್ವೇತಾ, ಕಿಂಚಿತ್ತೂ ಭಯವಿಲ್ಲದೆ ಮುಗುಳ್ನಗುತ್ತಲೇ ಆ ದೈತ್ಯ ಹಾವನ್ನು ಅತ್ಯಂತ ಸಲೀಸಾಗಿ ಹ್ಯಾಂಡಲ್ (Female Snake Catcher) ಮಾಡಿದ್ದಾರೆ. ಕೊನೆಗೆ ಅದನ್ನು ಸುರಕ್ಷಿತವಾಗಿ ಪ್ಲಾಸ್ಟಿಕ್ ಪೈಪ್ ಒಂದರೊಳಗೆ ಸೇರಿಸಿ, ಲಾಕ್ ಮಾಡಿದ್ದಾರೆ. ನಂತರ ಆ ಹಾವನ್ನು ಯಾರಿಗೂ ತೊಂದರೆಯಾಗದಂತೆ ದೂರದ ಕಾಡಿಗೆ ತರಳಿ ಬಿಟ್ಟಿದ್ದಾರೆ. ಆಕೆ ಹಾವು ಹಿಡಿದ ಮೇಲಷ್ಟೇ ಆ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ. Read this also : ಬರಿಗೈಯಲ್ಲಿಯೇ ಹೆಡೆಬಿಚ್ಚಿದ ನಾಗರಹಾವನ್ನು ಹಿಡಿದ ಬ್ಯೂಟಿ, ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡಿದ ವಿಡಿಯೋ..!
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್: ನೆಟ್ಟಿಗರು ಫುಲ್ ಫಿದಾ!
ಶ್ವೇತಾ ಅವರ ಈ ಅದ್ಭುತ ಧೈರ್ಯವನ್ನು (Female Snake Catcher) ನೋಡಿ ಅಲ್ಲಿದ್ದವರೆಲ್ಲಾ ಆಶ್ಚರ್ಯಚಕಿತರಾಗಿದ್ದಾರೆ. ಆಕೆ ಹಾವು ಹಿಡಿಯುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.
ವಿಡಿಯೋ (Video Link Here) ನೋಡಿದ ನೆಟ್ಟಿಗರು ಶ್ವೇತಾ ಅವರ ಧೈರ್ಯಕ್ಕೆ ಹ್ಯಾಂಡ್ಸ್ ಆಫ್ ಹೇಳುತ್ತಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಪ್ರಶಂಸೆಗಳ ಸುರಿಮಳೆಯೇ ಹರಿದುಬರುತ್ತಿದೆ.

- ಒಬ್ಬ ಯೂಸರ್, “ಒಬ್ಬ ಹೆಣ್ಣುಮಗಳಾಗಿ ಇಷ್ಟೊಂದು ಧೈರ್ಯವಾಗಿ ಹಾವು ಹಿಡಿಯುತ್ತಾಳಲ್ಲ, ಗ್ರೇಟ್!” ಎಂದು ಕಮೆಂಟ್ ಮಾಡಿದ್ದಾರೆ.
- ಇನ್ನೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ, “ಈಕೆ ಬರೀ ಹೆಣ್ಣುಮಗಳಲ್ಲ.. ಸಾಕ್ಷಾತ್ ಹೆಣ್ಣು ಹುಲಿ!” ಎಂದು ಶ್ಲಾಘಿಸಿದ್ದಾರೆ.
ನಿಮಗೂ ಈ ವಿಡಿಯೋ ನೋಡಬೇಕಾ? ಹಾಗಿದ್ರೆ ಸೋಶಿಯಲ್ ಮೀಡಿಯಾದಲ್ಲಿ ಒಮ್ಮೆ ಕಣ್ಣಾಡಿಸಿ! ಮತ್ತು ಮಳೆಗಾಲದಲ್ಲಿ ನಿಮ್ಮ ಮನೆಯ ಎಸಿ, ಕೂಲರ್ ಅಥವಾ ಮೂಲೆ ಮುಡುಕುಗಳನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದನ್ನು ಮರೆಯಬೇಡಿ!
