Thursday, February 5, 2026
HomeNationalCCTV Video : ಹೆತ್ತ ತಾಯಿಯನ್ನೇ ಮೃಗೀಯವಾಗಿ ಥಳಿಸಿದ ಪಾಪಿ ಮಗ: ಸಿಸಿಟಿವಿಯಲ್ಲಿ ಸೆರೆಯಾಯ್ತು ಮಗನ...

CCTV Video : ಹೆತ್ತ ತಾಯಿಯನ್ನೇ ಮೃಗೀಯವಾಗಿ ಥಳಿಸಿದ ಪಾಪಿ ಮಗ: ಸಿಸಿಟಿವಿಯಲ್ಲಿ ಸೆರೆಯಾಯ್ತು ಮಗನ ಅಸಲಿ ಕ್ರೌರ್ಯ!

ನಮ್ಮ ಸಮಾಜದಲ್ಲಿ ‘ಮಾತೃ ದೇವೋ ಭವ’ ಎಂಬ ಮಾತಿದೆ. ಹೆತ್ತ ತಾಯಿಯನ್ನು ದೇವರೆಂದು ಪೂಜಿಸುವ ನಾಡು ನಮ್ಮದು. ಆದರೆ, ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಈ ಘಟನೆ ಮಾತ್ರ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ. ವಯೋಸಹಜ (CCTV Video) ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ 70 ವರ್ಷದ ವೃದ್ಧ ತಾಯಿಯ ಮೇಲೆ ಆಕೆಯ ಮಗನೇ ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ಈಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

A disturbing CCTV video from Ghaziabad shows a son assaulting his bedridden elderly mother, leading to public outrage and police action.

CCTV Video – ಮಗನ ಅಸಲಿ ಮುಖ ಬಯಲು ಮಾಡಿದ್ದು ಅಕ್ಕ ಅಳವಡಿಸಿದ್ದ ಸಿಸಿಟಿವಿ!

ಈ ಘಟನೆ ನಡೆದಿರುವುದು ಗಾಜಿಯಾಬಾದ್‌ನ ಸಂಜಯ್ ನಗರದ ಸೆಕ್ಟರ್ 23ರಲ್ಲಿ. ಆರೋಪಿಯನ್ನು 44 ವರ್ಷದ ನಿಶಾಂತ್ ಠಾಕೂರ್ ಎಂದು ಗುರುತಿಸಲಾಗಿದೆ. ಈತ ತನ್ನ ವೃದ್ಧ ತಾಯಿಯೊಂದಿಗೆ ವಾಸವಿದ್ದನು. ನಿಶಾಂತ್‌ನ ಸೋದರಿ ನಿಶಾ ಎಂಬುವವರು ಅಮೆರಿಕಾದಲ್ಲಿ ವಾಸವಾಗಿದ್ದು, ದೂರದ ಊರಿನಲ್ಲಿದ್ದರೂ ತಾಯಿಯ ಕ್ಷೇಮ ನೋಡಿಕೊಳ್ಳಲೆಂದು ಮನೆಯಲ್ಲಿ ಸಿಸಿಟಿವಿ (CCTV) ಕ್ಯಾಮೆರಾ ಅಳವಡಿಸಿದ್ದರು.

ಇತ್ತೀಚೆಗೆ ಮಗನ ವರ್ತನೆಯಲ್ಲಿ ಅನುಮಾನ ಕಂಡ ನಿಶಾ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅವರ ಕಾಲ ಕೆಳಗಿನ ಭೂಮಿ ಕುಸಿದಂತಾಗಿದೆ. ರಕ್ಷಣೆ ನೀಡಬೇಕಾದ ಮಗನೇ ಅಸಹಾಯಕ ತಾಯಿಯ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿರುವುದು ಕಂಡುಬಂದಿದೆ. Read this also : ಹೈದರಾಬಾದ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ: ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟ ಸಾಫ್ಟ್‌ವೇರ್ ಎಂಜಿನಿಯರ್ ತಾಯಿ!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಆಕ್ರೋಶ

ನೇರವಾಗಿ ಮಧ್ಯಪ್ರವೇಶಿಸಲು ಸಾಧ್ಯವಾಗದ ನಿಶಾ, ಕೂಡಲೇ ಈ ವಿಡಿಯೋವನ್ನು ಸ್ಥಳೀಯ ಹೌಸಿಂಗ್ ಸೊಸೈಟಿಯವರೊಂದಿಗೆ ಹಂಚಿಕೊಂಡಿದ್ದಾರೆ. (CCTV Video) ಬೆಂಕಿಯಂತೆ ಹಬ್ಬಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಆರೋಪಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

A disturbing CCTV video from Ghaziabad shows a son assaulting his bedridden elderly mother, leading to public outrage and police action.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here 
ಪೊಲೀಸರಿಂದ ಆರೋಪಿಯ ಬಂಧನ

ಜನವರಿ 31ರಂದು ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪಾಪಿ ಮಗ ನಿಶಾಂತ್‌ನನ್ನು ಬಂಧಿಸಿದ್ದಾರೆ. “70 ವರ್ಷದ ತಾಯಿಯ ಮೇಲೆ ಹಲ್ಲೆ (CCTV Video) ಮಾಡಿದ ಆರೋಪದ ಮೇಲೆ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular