ರಾಜ್ಯದಲ್ಲಿ ಆಗಸ್ಟ್ ಮಾಹೆಯಿಂದ ಕಠಿಣ ಸಂಚಾರಿ ನಿಯಮಗಳನ್ನು (Traffic Rules) ಅನುಸರಿಸಲಿದೆ ಎಂದು ಹೇಳಲಾಗಿದೆ. ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವಂತಹವ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಲು ಪೊಲೀಸರು (Traffic Rules) ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಆಗಸ್ಟ್ ಮಾಹೆಯಿಂದ ಕಠಿಣ ನಿಯಮಗಳನ್ನು (Traffic Rules) ಅನುಸರಿಸಲಿದೆ. ಹೈಬೀಮ್ ಲೈಟ್ ಹಾಗೂ ಕಣ್ಣು ಕುಕ್ಕುವಂತಹ ಎಲ್.ಇ.ಡಿ ಲೈಟ್ ಅಳವಡಿಸಿರುವ ವಾಹನಗಳ ವಿರುದ್ದ ಪ್ರಕರಣ ದಾಖಲಿಸುವುದು, ಒನ್ ವೇ, ಪುಟ್ ಪಾತ್ ಮೇಲೆ ವಾಹನ ಚಾಲನೆ (Traffic Rules) ಕುರಿತು ಕಾರ್ಯಾಚರಣೆ ಮಾಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಈ ಸಂಬಂಧ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರಿಗೆ ವಿಶೇಷ ಕಾರ್ಯಾಚರಣೆ ನಡೆಸುವಂತೆ ಸೂಚನೆ (Traffic Rules) ನೀಡಿದ್ದಾರೆ ಎನ್ನಲಾಗಿದೆ. ಈ ಸುತ್ತೋಲೆಯಲ್ಲಿ ಒನ್ ವೇ ಅಂದರೇ ವಿರುದ್ದ ದಿಕ್ಕಿನಲ್ಲಿ ವಾಹನ ಚಾಲನೆ, ಪುಟ್ ಪಾತ್ ಮೇಲೆ ವಾಹನ ಚಾಲನೆ, ಡಿಫೆಕ್ಟೀವ್ ನಂಬರ್ ಪ್ಲೇಟ್, ಹೈ ಬೀಮ್ ಲೈಟ್, ಕಣ್ಣು ಕುಕ್ಕುವಂತಹ ಎಲ್.ಇ.ಡಿ ಲೈಟ್ ಬಳಕೆ ಮಾಡುವಂತಹ ವಾಹನಗಳ ಮೇಲೆ ಆಗಸ್ಟ್ 1 ರಿಂದ ವಿಶೇಷ ಕಾರ್ಯಾಚರಣೆ ನಡೆಸಲು ಎಲ್ಲಾ ಘಟಕಗಳಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ (Traffic Rules) ನೀಡಿದ್ದಾರೆ ಎಂದು ತಿಳಿದುಬಂದಿದೆ.
https://x.com/alokkumar6994/status/1815351046719324601
ಇನ್ನೂ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ವಿರುದ್ದ ದಿಕ್ಕಿನಲ್ಲಿ ವಾಹನ ಓಡಿಸುವುದು ಜೀವಕ್ಕೆ ತುಂಬಾನೆ ಅಪಾಯಕಾರಿಯಾಗಿದೆ. (Traffic Rules) ಈ ರೀತಿ ವಾಹನ ಚಾಲನೆ ಮಾಡುವವರ ಮೆಲೆ ಬಿ.ಎನ್.ಎಸ್ 281 ಅಡಿಯಲ್ಲಿ ಮತ್ತು 184 ಐಎಂವಿ ಕಾಯ್ದೆಯಡಿ ಹಾಗೂ ಎಫ್.ಐ.ಆರ್ ದಾಖಲು ಮಾಡಬೇಕು ಎಂದು ಸೂಚನೆ ರವಾನಿಸಿದ್ದಾರೆ. (Traffic Rules) ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ವಿರುದ್ದ ದಿಕ್ಕಿನಲ್ಲಿ ವಾಹನ ಚಾಲನೆ ಹಾಗೂ ಪುತ್ ಪಾತ್ ಮೇಲೆ ವಾಹನ ಚಾಲನೆ ಮಾಡುವುದು ಸಹ ಹೆಚ್ಚಾಗಿದೆ. ಆಗಸ್ಟ್ 1 ರಿಂದ ಈ ವಿಶೇಷ ಕಾರ್ಯಚರಣೆ (Traffic Rules) ನಡೆಸಬೇಕು ಜೊತೆಗೆ ಈ ಕುರಿತು ಮುಂಚಿತವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ, ಕರಪತ್ರ, ಧ್ವನಿವರ್ಧಕಗಳ ಮೂಲಕ ಅರಿವು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ತಿಳಿಸಿದ್ದಾರೆ.
ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ರವರು ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಂಡಿದ್ದು, ವಾಹನ ಸವಾರರು ಎಚ್ಚೆತ್ತುಕೊಳ್ಳುವುದು ಸೂಕ್ತ, ನಿಯಮ ಉಲ್ಲಂಘನೆ ಮಾಡಿದ್ದೇ ಆದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.