Bagepalli News: ಹಮಾಲಿ ಕಾರ್ಮಿಕರ ಸಂಘದ ನೂತನ ಸಮಿತಿ ರಚನೆ

ಬಾಗೇಪಲ್ಲಿ: ಪಟ್ಟಣದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಬೆಂಗಳೂರಿನ ಭೋಜರಾಜು ರವರ ಅಧ್ಯಕ್ಷೆತೆಯಲ್ಲಿ ನಡೆದ  ಎ.ಪಿ.ಎಂ.ಸಿ  ತರಕಾರಿ ಮಾರುಕಟ್ಟೆ ಹಮಾಲಿ ಕಾರ್ಮಿಕರ ಸಭೆಯಲ್ಲಿ  ಬಾಗೇಪಲ್ಲಿ ಎ.ಪಿ.ಎಂ.ಸಿ ತರಕಾರಿ ಮಾರುಕಟ್ಟೆ ಹಮಾಲಿ ಕಾರ್ಮಿಕರ ಸಂಘದ ನೂತನ ಸಮಿತಿಯನ್ನು ರಚಿಸಲಾಯಿತು.

ಈ ಸಂದರ್ಬದಲ್ಲಿ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದ  ಭೋಜರಾಜು   ಹಮಾಲಿ ಕಾರ್ಮಿಕರು ಕಾನೂನು ಬದ್ದ ಹಕ್ಕುಗಳನ್ನು ಪಡೆಯಲು ಜಾಗೃತಗೊಳ್ಳಬೇಕು ಎಂದು ಕರೆ ನೀಡಿದರು. ಹಮಾಲಿ ಕಾರ್ಮಿಕರ ಮುಖಂಡ ಕೆ.ವಿ.ರಾಮಚಂದ್ರ ಮಾತನಾಡಿ, ಕಾರ್ಮಿಕರ ವಿರೋಧಿ ಪ್ಯಾಸಿಸ್ಟ್ ವ್ಯವಸ್ಥೆ ವಿರುದ್ದ  ಕಾರ್ಮಿಕರು ಒಗ್ಗೂಡಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ  ಮೌಲ್ಯಗಳನ್ನು ಉಳಿಸಲು ಹೋರಾಟಕ್ಕೆ ಮುಂದಾಗಬೇಕೆಂದ ಅವರು ಹಮಾಲಿ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಸಂಘ ಮತ್ತು ಕಾರ್ಮಿಕರ ಸರ್ವತೋಮುಖ ಅಭಿವೃದ್ದಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದರು.

ಎ.ಪಿ.ಎಂ.ಸಿ ತರಕಾರಿ ಮಾರುಕಟೆ ಹಮಾಲಿ ಕಾರ್ಮಿಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ: ಸಂಘದ  ಗೌರವಾಧ್ಯಕ್ಷರನ್ನಾಗಿ  ಬಸವಲಿಂಗಪ್ಪ, ಅಧ್ಯಕ್ಷರಾಗಿ ರಘು, ಉಪಾಧ್ಯಕ್ಷರನ್ನಾಗಿ  ಆಧಿಶೇಷು, ನಾರಾಯಣಪ್ಪ, ಪಿ.ಆರ್.ರೀನಿವಾಸ್, ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಬಿಕ್ರಾಸ್ ಆರ್.ಎಂ.ಚಲಪತಿ, ಖಜಾಂಚಿ ಕೆ.ವಿ.ವೆಂಕಟೇಶ್, ಜಂಟಿಕಾರ್ಯದರ್ಶಿ ಆರ್ ಕಾರ್ತಿಕ್, ಸಹಕಾರ್ಯದರ್ಶಿ ವೈ.ಎ.ನಾಗೇಶ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Leave a Comment

Your email address will not be published. Required fields are marked *

Scroll to Top