ಇತ್ತೀಚಿಗೆ ಆಟೋಮೊಬೈಲ್ ಕ್ಷೇತ್ರದಲ್ಲಿ EV ಬೈಕ್ ಗಳ ಹವಾ ಜೋರಾಗಿಯೇ ಇದೆ. ಬಹುತೇಕ ಎಲ್ಲಾ ಕಂಪನಿಗಳು ತಮ್ಮ EV ಬೈಕ್ ಗಳನ್ನು ಪರಿಚಯಿಸುತ್ತಿವೆ. ಈ ಸಾಲಿಗೆ ಖ್ಯಾತ ರಾಯಲ್ ಎನ್ ಫೀಲ್ಡ್ (Royal Enfield) ಸಹ ಸೇರಲಿದೆ. ರಾಯಲ್ ಎನ್‌ಫೀಲ್ಡ್ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಫ್ಲೈಯಿಂಗ್ ಫ್ಲೀ C6 (Royal Enfield Flying Flea C6) ಅನ್ನ ಇಟಲಿ ದೇಶದ ಮಿಲನ್‌ನಲ್ಲಿ ಅನಾವರಣಗೊಳಿಸಿದೆ. ಮಾರ್ಚ್ 2026ರಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ತಿಳಿದುಬಂದಿದೆ. ಇನ್ನೂ ಈ ಬೈಕ್ ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬ ವಿಚಾರಕ್ಕೆ ಬಂದರೇ,
ರಾಯಲ್ ಎನ್‌ಫೀಲ್ಡ್ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಫ್ಲೈಯಿಂಗ್ ಫ್ಲೀ C6 ಅನ್ನ ಇಟಲಿಯ ಮಿಲನ್‌ನಲ್ಲಿ ಅನಾವರಣಗೊಳಿಸಿದ್ದು, ಮಾರ್ಚ್ 2026ರಲ್ಲಿ ಈ ಬೈಕ್ ಮಾರುಕಟ್ಟೆಗೆ ಬರಲಿದೆ. ಎರಡನೇ ಮಹಾಯುದ್ಧದಲ್ಲಿ ರಾಯಲ್ ಎನ್‌ಫೀಲ್ಡ್ ತಯಾರಿಸಿದ್ದ ಮೋಟಾರ್ ಸೈಕಲ್ ಮಾದರಿಯಲ್ಲೇ ಫ್ಲೈಯಿಂಗ್ ಫ್ಲೀ C6 ವಿನ್ಯಾಸಗೊಂಡಿದೆ. ಲೋ-ಸ್ಲಂಗ್ ಬಾಬರ್ ಸ್ಟೈಲ್‌ನಲ್ಲಿದ್ದು, ರ್ಯಾಕ್-ಔಟ್ ಮತ್ತು ಗಾರ್ಡರ್-ಸ್ಟೈಲ್ ಫೋರ್ಕ್ ಹೊಂದಿದೆ. ಇದನ್ನು ಬ್ರಿಟಿಷ್ ಪ್ಯಾರಾಟ್ರೂಪರ್‌ಗಳು ಮತ್ತು ಸೈನಿಕರು ಬಳಸುತ್ತಿದ್ದರು. ಕಾಂಪ್ಯಾಕ್ಟ್ ಮತ್ತು ಫೋಲ್ಡಬಲ್ ಬೈಕು ಆಗಿರುವುದರಿಂದ, ಸೇನಾ ಹೆಲಿಕಾಪ್ಟರ್ ಅದನ್ನು ಪ್ಯಾರಾಚೂಟ್ ಬಳಸಿ ಡ್ರಾಪ್ ಮಾಡುತ್ತಿತ್ತು, ಇದನ್ನು ಸೈನಿಕರು ಕೆಲವೇ ಸೆಕೆಂಡುಗಳಲ್ಲಿ ಬಿಚ್ಚಿಟ್ಟರು ಮತ್ತು ಅದು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಸಣ್ಣ ಬೈಕ್ ಆಗುತ್ತಿತ್ತು ಎಂದು ಹೇಳಲಾಗಿದೆ.
ಈ ಬೈಕ್ ನಲ್ಲಿ ವೃತ್ತಾಕಾರದ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದ್ದು, ಅದು ಬೈಕಿನ ವೇಗ, ದೂರ, ಬ್ಯಾಟರಿ, ರೇಂಜ್ ಮೊದಲಾದ ಮಾಹಿತಿಯನ್ನು ನೀಡುತ್ತದೆ. ಬ್ಲೂಟೂತ್ ಕನೆಕ್ವಿವಿಟಿ ಜೊತೆಗೆ ನ್ಯಾವಿಗೇಷನ್ ಡಿಸ್ ಪ್ಲೇ ಕೂಡ ಇರಲಿದೆ ಎಂದು ತಿಳಿದುಬಂದಿದೆ. ರಾಯಲ್ ಎನ್ ಫೀಲ್ಡ್ ನ ಈ EV ಬೈಕ್ ನಲ್ಲಿ ಫ್ಲೈಯಿಂಗ್ ಫ್ಲೀ C6 ಅಲ್ಯೂಮಿನಿಯಂ ಫ್ರೇಮ್ ಹೊಂದಿದೆ. ಇದರೊಳಗೆ ಮೆಗ್ನೀಸಿಯಮ್ ಬ್ಯಾಟರಿ ಕವರ್ ಇದೆ. ರಾಯಲ್ ಎನ್‌ಫೀಲ್ಡ್ ನೂತನ ಫ್ಲೈಯಿಂಗ್ ಫ್ಲಿಯಾ ಸಿ6 ಎಲೆಕ್ಟ್ರಿಕ್ ಬೈಕ್‌ನ ಬ್ಯಾಟರಿ ಪ್ಯಾಕ್, ರೇಂಜ್ (ಮೈಲೇಜ್) ಹಾಗೂ ಮೋಟಾರ್ ಕುರಿತಂತೆ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಹೊಸ ಬೈಕ್ 2026 ರಲ್ಲಿ ಬಿಡುಗಡೆಯಾಗಲಿದ್ದು, ಆ ಸಮಯದಲ್ಲಿ ಬೈಕ್ ನ ಬೆಲೆಯೂ ಘೋಷಣೆಯಾಗಲಿದ್ದು, ನಂತರದಲ್ಲಿ ಬುಕ್ಕಿಂಗ್ ಪ್ರಾರಂಭವಾಗುವ ನಿರೀಕ್ಷೆಯಿದೆ.