Saturday, December 20, 2025
HomeStateರೈತರ (Farmers) ಸಮಸ್ಯೆಗಳಿಗೆ ರೈತ ಸಂಘ ನಿರಂತರ ಹೋರಾಟ ಮಾಡಲು ಸಿದ್ದ : ಹೆಚ್.ಪಿ.ರಾಮನಾಥ್

ರೈತರ (Farmers) ಸಮಸ್ಯೆಗಳಿಗೆ ರೈತ ಸಂಘ ನಿರಂತರ ಹೋರಾಟ ಮಾಡಲು ಸಿದ್ದ : ಹೆಚ್.ಪಿ.ರಾಮನಾಥ್

ರಾಜ್ಯದಾದ್ಯಂತ ರೈತರ (Farmers) ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್‍ ಬಣ) ಸದಾ ಸಿದ್ದವಾಗಿದ್ದು, ಡಿ.10 ರಂದು ವಿವಿಧ ಸಮಸ್ಯೆಗಳ ಈಡೇರಿಕೆಗಾಗಿ ಬೆಳಗಾವಿ ಚಲೋ ಚಳುವಳಿಯನ್ನು ಹಮ್ಮಿಕೊಂಡಿದೆ ಎಂದು ಸಂಘದ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ತಿಳಿಸಿದರು.

Karnataka Farmers’ Union press meet, H.P. Ramanath announcing Belagavi Chalo protest to address farmers’ issues

Farmers – ಸರ್ಕಾರಕ್ಕೆ ಚುರುಕು ಮುಟ್ಟಿಸಲು ಬೆಳಗಾವಿ ಚಲೋ

ಈ ಕುರಿತು ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದಲ್ಲಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್‍ ಬಣ)ಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸದಾ ಹೋರಾಟಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ರೈತ ಸಂಘ ಮಾಡುತ್ತಿದೆ. ಆದರೂ ಸಹ ಸರ್ಕಾರಗಳು ಮೊಂಡುತನ ಪ್ರದರ್ಶನ ಮಾಡುತ್ತಿವೆ. ಕಳೆದ ವಿಧಾನಸಭಾ ಚಳಿಗಾಲದ ಅಧಿವೇಶನದ ಸಮಯದಲ್ಲೂ ಬೆಂಬಲ ಬೆಲೆ, ಕಬ್ಬು ಬೆಳೆಗಾರರ ಸಮಸ್ಯೆ ಹೀಗೆ ಹತ್ತು ಹಲವು ಸಮಸ್ಯೆಗಳ ವಿರುದ್ದ ಹೋರಾಟ ಕೈಗೊಳ್ಳಲಾಗಿತ್ತು. ಅದರಂತೆ ಇದೀಗ ಡಿ.10 ರಂದು ಮೆಕ್ಕೇಜೋಳ ಖರೀದಿ ಸೇರಿದಂತೆ ಹಲವಾರು ರೈತ ಸಮಸ್ಯೆಗಳ ಪರಿಹಾರಕ್ಕಾಗಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು (Farmers) ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ಹಣ ಬಲದ ಕಾರಣ ಚುನಾವಣೆಯಲ್ಲಿ ಸೋಲು

ಇನ್ನೂ ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಯ ಫಲಿತಾಂಶದ ಕುರಿತು ಮಾತನಾಡಿದ ಅವರು, ಕಳೆದೆರಡು ದಿನಗಳ ಹಿಂದೆಯಷ್ಟೆ ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆ ನಡೆದಿದ್ದು, ಈ ಚುನಾವಣೆಯಲ್ಲಿ ನಮ್ಮ ಸಂಘದ ವತಿಯಿಂದ ಎಲ್ಲಾ ವರ್ಗಗಳಿಂದ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿತ್ತು. ಆದರೆ ಬೆಂಗಳೂರಿನಿಂದ ಬಂದ ರಿಯಲ್ ಎಸ್ಟೇಟ್ ಉದ್ಯಮಿಗಳು, ಸ್ಥಳೀಯರು ಸೇರಿ ಹಣದ ಹೊಳೆಯನ್ನು ಹರಿಸಿದರು. ಇದರಿಂದ (Farmers) ನಮಗೆ ಸೋಲು ಬಂತು. ಈ ಸೋಲನ್ನು ನಾವು ಸ್ವೀಕರಿಸುತ್ತೇವೆ. ರೈತರ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು. Read this also : ಗುಡಿಬಂಡೆ ಟಿಎಪಿಸಿಎಂಎಸ್ ಚುನಾವಣೆ, 10 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರ ಗೆಲುವು..!

ಅಕ್ರಮ ಗಣಿಗಾರಿಕೆ ವಿರುದ್ಧ ಸಮರ

ಇನ್ನೂ ತಾಲೂಕಿನಾದ್ಯಂತ ಹಲವು ಕಡೆ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ಸಾಗುತ್ತಿದೆ. ಸಂಜೆ ಸಮಯದಲ್ಲಿ ಅತಿಯಾಗಿ ಬ್ಲಾಸ್ಟ್ ಸಹ ಮಾಡುತ್ತಿದ್ದು, ಈ ಕುರಿತು ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಆದಷ್ಟು ಶೀಘ್ರದಲ್ಲೇ ಹೋರಾಟಕ್ಕೆ ಮುಂದಾಗುತ್ತೇವೆ. ಈ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ಸಾಗಲು ಜಿಲ್ಲಾಡಳಿತದ ಭ್ರಷ್ಟಾಚಾರವೇ ಕಾರಣವಾಗಿದೆ. ರೈತರೂ (Farmers) ಸಹ ಈ ಸಂಬಂಧ ಎಚ್ಚರಿಕೆ ವಹಿಸಿ ನಮ್ಮ ಹೋರಾಟಕ್ಕೆ ಸಾಥ್  ಕೊಡಬೇಕು ಎಂದರು.

Karnataka Farmers’ Union press meet, H.P. Ramanath announcing Belagavi Chalo protest to address farmers’ issues

ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದವರು

ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್‍ ಬಣ)ಯ ತಾಲೂಕು ಅಧ್ಯಕ್ಷ ಸೋಮಶೇಖರ್‍, ಉಪಾಧ್ಯಕ್ಷ ರವಿಂದ್ರರೆಡ್ಡಿ, ಮುಖಂಡರಾದ ಆದಿನಾರಾಯಣಪ್ಪ, ಚೌಡರೆಡ್ಡಿ, ಶ್ರೀನಿವಾಸ್, ಸುದರ್ಶನ್, ರಾಮರೆಡ್ಡಿ, ಲಕ್ಷ್ಮೀನಾರಾಯಣಪ್ಪ, ನರಸಿಂಹರೆಡ್ಡಿ ಸೇರಿದಂತೆ ಹಲವರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular