Friday, November 22, 2024

Farmers Protest : ಪ್ಯಾಕ್ ಹೌಸ್ ಕಾಮಗಾರಿಗೆ ಬಿಲ್ ಮಾಡಿಕೊಡದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ವಿರುದ್ದ ಪ್ರತಿಭಟನೆ

Farmers Protest – 2022-23ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಆಯ್ಕೆಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗಂಧಂನಾಗೇನಹಳ್ಳಿ ಗ್ರಾಮದ ಜಿ.ಸಿ.ವೆಂಕಟೇಶಪ್ಪ ರವರಿಗೆ ಪ್ಯಾಕ್ ಹೌಸ್ ಕಾಮಗಾರಿ ಮಂಜೂರಾಗಿದ್ದು, (Farmers Protest) ಈ ಕಾಮಗಾರಿಯ ಬಿಲ್ ಮಾಡದೇ ಅಧಿಕಾರಿಗಳು ಕಾಮಗಾರಿಯ ಹಣ ಪಾವತಿ ಮಾಡದೇ ವಿಳಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್‍) ವತಿಯಿಂದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ವಿರುದ್ದ (Farmers Protest) ಪ್ರತಿಭಟನೆ ನಡೆಸಿದರು.

ಈ ವೇಳೆ ರೈತ (Farmers Protest) ಸಂಘದ ಜಿಲ್ಲಾಧ್ಯಕ್ಷ ಹೆ.ಪಿ.ರಾಮನಾಥ್ ಮಾತನಾಡಿ, ತಾಲೂಕಿನ ಗಂಧಂನಾಗೇನಹಳ್ಳಿ ಗ್ರಾಮದ ಜಿ.ಸಿ.ವೆಂಕಟೇಶಪ್ಪರವರಿಗೆ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ (Farmers Protest) ಪ್ಯಾಕ್ ಹೌಸ್ ನಿರ್ಮಾಣಕ್ಕೆ ಆಯ್ಕೆಯಾಗಿದ್ದು, ಅದರಂತೆ ತೋಟಗಾರಿಕೆ ಇಲಾಖೆಯಿಂದ ಕಾರ್ಯಾದೇಶ ನೀಡಲಾಗಿತ್ತು. ಅರ್ಜಿ ಆಹ್ವಾನಿಸಿದಾಗ ಹಾಗೂ ಫಲಾನುಭವಿ ಆಯ್ಕೆಯಾದಾಗ ಜಂಟಿ ಪಹಣಿ ಇದ್ದರೇ ಒಪ್ಪಿಗೆ ಪತ್ರ ನೀಡಿ ಅಂತಾ ಹೇಳಿರಲಿಲ್ಲ. (Farmers Protest) ಕಾಮಗಾರಿ ಆರಂಭವಾಗಿ ಅರ್ಧ ಮುಗಿದಿದೆ. ಈ ಸಮಯದಲ್ಲಿ ತಕರಾರು ಬಂದಿದೆ ಎಂದು ಕಾಮಗಾರಿಯ ಬಿಲ್ ಮಾಡುತ್ತಿಲ್ಲ. ಇದರಿಂದ ಸಾಲ ಮಾಡಿಕೊಂಡು ಕಾಮಗಾರಿಯನ್ನು ಮಾಡುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ಜಿ.ಸಿ.ವೆಂಕಟೇಶಪ್ಪ (Farmers Protest) ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. (Farmers Protest) ತಕರಾರು ಅರ್ಜಿಯ ಬಗ್ಗೆ ಸಂಬಂಧಪಟ್ಟ ರೈತರಿಗೂ ಸರಿಯಾಗಿ ಮಾಹಿತಿ ನೀಡದೇ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಇತ್ತೀಚಿಗೆ ತೋಟಗಾರಿಕೆ ಇಲಾಖೆ ಒಂದು ಮಾದರಿಯಲ್ಲಿ ಲಕ್ಕಿ ಇಲಾಖೆಯಾಗಿದೆ. (Farmers Protest) ಅಂದರೇ ಇಲ್ಲಿ ಬರುವ ಯೋಜನೆಗಳೆಲ್ಲಾ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಇದೀಗ ಲಾಟರಿ ಮೂಲಕ ಆಯ್ಕೆಯಾದರೂ ಕಾಮಗಾರಿಯ ಬಿಲ್ ಪಡೆದುಕೊಳ್ಳಲು ನೂರಾರು ಸಮಸ್ಯೆಗಳು ಎದುರಾಗುತ್ತಿದೆ ಎಂದರು.

Farmers protest in Gudibande 0

ತೋಟಗಾರಿಕೆ ಇಲಾಖೆಯಲ್ಲಿ ಕೆಲವೊಂದು (Farmers Protest) ಅಸಂಬಧ್ದ ಹಾಗೂ ಅವೈಜ್ಞಾನಿ ಕಾನೂನುಗಳಿವೆ. ಆ ಕಾನೂನುಗಳಿಂದಲೇ ಈ ರೀತಿಯ ಸಮಸ್ಯೆಗಳು ಉದ್ಬವಿಸುತ್ತಿವೆ. ಪ್ಯಾಕ್ ಹೌಸ್ ಮಾಡಿಕೊಂಡ (Farmers Protest) ರೈತನಿಗೆ ಮೊದಲೇ ಜಂಟಿ ಪಹಣಿಯಿದೆ, ಒಪ್ಪಿಗೆ ಪತ್ರ ಬೇಕು ಎಂಬ ಮಾಹಿತಿ ನೀಡಿಲ್ಲ. (Farmers Protest) ಇದರಿಂದಾಗಿ ಆತ ಸಹ ಪ್ಯಾಕ್ ಹೌಸ್ ನಿರ್ಮಾಣಕ್ಕೆ ಮುಂದಾಗಿದ್ದಾನೆ. ಇದೀಗ ಶೇ.50 ರಷ್ಟು ಕಾಮಗಾರಿ ಮುಗಿದಿದ್ದು, (Farmers Protest) ಈಗ ಒಪ್ಪಿಗೆ ಪತ್ರ ಬೇಕು ಅಂತಾ ಹೇಳ್ತಾ ಇರೋದು ಎಷ್ಟರ ಮಟ್ಟಿಗೆ ಸರಿ. (Farmers Protest) ಆದ್ದರಿಂದ ಜಿಲ್ಲಾ ತೋಟಗಾರಿಕೆ ಇಲಾಖೆಯ ನಿರ್ದೇಶಕರು ಬಂದು ಸಮಸ್ಯೆ ಬಗೆಹರಿಸುವ ತನಕ ಪ್ರತಿಭಟನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.

ಇನ್ನೂ ಈ ಕುರಿತು ತೋಟಗಾರಿಕೆ ಇಲಾಖೆಯ (Farmers Protest) ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ದಾಖಲೆಗಳು ಎಲ್ಲವೂ ಸರಿಯಿದ್ದರೇ ಬಿಲ್ ಮಾಡಲು ನಮಗೇನು ಅಭ್ಯಂತರವಿಲ್ಲ. (Farmers Protest) ಸದರಿ ರೈತರಿಗೆ ಕಾಮಗಾರಿ ಮಂಜೂರಾದ ಸಮಯದಿಂದ ಎಲ್ಲಾ ಮಾರ್ಗಸೂಚಿಗಳನ್ನು ನೀಡಿ ಮನವರಿಕೆ ಮಾಡಿದ್ದೆವು. ನಮ್ಮ ಇಲಾಖೆಯ ಅಧಿಕಾರಿಗಳೂ ಸಹ ಹಂತ ಹಂತವಾಗಿ ಮಾರ್ಗದರ್ಶನ ಮಾಹಿತಿ ನೀಡುತ್ತಿದ್ದೇವು. ಸದ್ಯ ಶೇ.50 ರಷ್ಟು ಕಾಮಗಾರಿ ಮಾತ್ರ ನಡೆದಿದೆ. (Farmers Protest) ಜೊತೆಗೆ ರೈತರ ಪಹಣಿ ಜಂಟಿಯಲ್ಲಿರುವ ಕಾರಣ ಮತ್ತೋರ್ವ ಜಂಟಿ ಖಾತೆದಾರರ ಒಪ್ಪಿಗೆ ಪತ್ರ ಕೇಳಿದ್ದೇವೆ. ಅಗತ್ಯ ದಾಖಲೆಗಳು ಹಾಗೂ ಜಂಟಿ ಖಾತೆದಾರರ ಒಪ್ಪಿಗೆ ಪತ್ರ ನೀಡಿದ ಬಳಿಕ ಹಾಗೂ ಕಾಮಗಾರಿ ಸಂಪೂರ್ಣವಾಗಿ (Farmers Protest) ಮುಕ್ತಾಯಗೊಳಿಸಿದ ಬಳಿಕ ಇಲಾಖೆಯ ಮಾರ್ಗಸೂಚಿಯಂತೆ ಬಿಲ್ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!