Mantralaya : ಮಂತ್ರಾಲಯಕ್ಕೂ ತಟ್ಟಿದ ವಕ್ಫ್ ಬಿಸಿ, ಮಂತ್ರಾಲಯದ ಜಾದ ಆದೋನಿ ನವಾಬ್ ಕೊಟ್ಟಿದ್ದು ಎಂದ ಸಿಎಂ ಇಬ್ರಾಹಿಂ….!

Mantralaya – ಸದ್ಯ ರಾಜ್ಯಾದ್ಯಂತ ವಕ್ಫ್ ವಿವಾದ (Waqf Issue) ಕಿಡಿ ಹೊತ್ತಿಸಿದ್ದು, ರೈತರ ಜಮೀನು ದೇವಸ್ಥಾನದ ಜಾಗ, ಮಠಕ್ಕೆ ಸೇರಿದ ಭೂಮಿ ಹೀಗೆ ಹಲವು ಜಾಗಗಳಿಗೆ ವಕ್ಫ್ ನೋಟಿಸ್ ನೀಡುವ ಮೂಲಕ ವಿವಾದ ಹುಟ್ಟು ಹಾಕಿತ್ತು. ಈ ಸಂಬಂಧ ರಾಜಕೀಯ ನಾಯಕರು ಕೊಡುತ್ತಿರುವ ಹೇಳಿಕೆಗಳೂ ಸಹ ಮತಷ್ಟು ವಿವಾದಕ್ಕೆ ಕಾರಣವಾಗುತ್ತಿದೆ. ಇದೀಗ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾದ ಮಂತ್ರಾಲಯದ ರಾಯರ ಮಂದಿರಕ್ಕೂ ವಕ್ವ್ ಬಿಸಿ ತಟ್ಟಿದೆ. ಇದೀಗ ಮಾಜಿ ಸಚಿವ ಸಿಎಂ ಇಬ್ರಾಹಿಂ (CM Ibrahim) ಅವರು ಮಂತ್ರಾಲಯದ (Mantralaya) ಜಾಗ ಆದೋನಿ ನವಾಬರು ಕೊಟ್ಟಿದ್ದು ಎನ್ನುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.

CM Ibrahim comments on Mantralayam 0

ರಾಯಚೂರಿಗೆ ಭೇಟಿ ನೀಡಿದ್ದ ಮಾಜಿ ಸಚಿವ ಸಿಎಂ ಇಬ್ರಾಹಿಂ ಮಾದ್ಯಮಗಳೊಂದಿಗೆ ಮಾತನಾಡುತ್ತಾ, ಮಂತ್ರಾಲಯಕ್ಕೆ ಜಾಗ ಕೊಟ್ಟಿದ್ದು ನವಾಬರು, ಅದನ್ನು ವಕ್ಫ್ ಬೋರ್ಡ್ ಗೆ ಸೇರಿದ್ದು ಅಂತಾ ಯಾರಾದರೂ ಕೇಳಲು ಹೋಗಿದ್ರಾ? ರಾಘವೇಂದ್ರ ಸ್ವಾಮಿಗಳು ಮಂತ್ರಾಲಯಕ್ಕೆ ಬಂದಾಗ ನಮ್ಮ ಬೃಂದಾವನ ಇಲ್ಲಿ ಮಾಡುತ್ತೇವೆ ಎಂದಾಗ ಮಂತ್ರಾಲಯ ಖಾಜಿಗೆ ಕೊಟ್ಟ ಜಾಗ ಕ್ಯಾನ್ಸಲ್ ಮಾಡಿ ಆದೋನಿ ನವಾಬರು ಮಂತ್ರಾಲಯ ಸ್ವಾಮೀಜಿಗೆ ಕೊಟ್ಟರು ಈ ಕಥೆಯನ್ನು ಮಂತ್ರಾಲಯ ಸ್ವಾಮೀಜಿಗಳೇ ಹೇಳುತ್ತಾರೆ ಎಂದು ಹೇಳಿದರು. ಇನ್ನೂ ಶೃಂಗೇರಿ ಶಾರಾದ ಪೀಠದ ಕುರಿತು ಸಹ ಮಾತನಾಡಿದ್ದು, ಶೃಂಗೇರಿ ಶಾರದಾ ಪೀಠದ ಮೇಲೆ ಪೇಶಾವರು ದಾಳಿ ಮಾಡಿದಾಗ ಟಿಪ್ಪು ಸುಲ್ತಾನ್ ಸೈನ್ಯ ಕಳುಹಿಸಿ ಮತ್ತೆ ಶಾರದಾ ಪೀಠವನ್ನು ಸ್ಥಾಪನೆ ಮಾಡಿದ್ರು ಇದು ಇತಿಹಾಸ, ಇದು ನಮ್ಮ ‌ಪರಂಪರೆ, ಇದು ನಮ್ಮ ಸಂಸ್ಕೃತಿ. ಈ ಚಿಲ್ಲರೇ ಮುಂಡೆದವೂ ರಾಜಕಾರಣಕ್ಕೆ ಬಂದು, ಈ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದ ಸಿಎಂ ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು.

ಇದೇ ಸಮಯದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಯವರ ಬಗ್ಗೆ ಇತ್ತೀಚಿಗೆ ಜಮೀರ್‍ ಅಹ್ಮದ್ ಕರಿಯ ಎಂಬ ಪದ ಬಳಕೆ ಮಾಡಿರುವ ಕುರಿತು ರಿಯಾಕ್ಟ್ ಆಗಿರುವ ಸಿಎಂ ಇಬ್ರಾಹಿಂ ರವರು,  ಜಮೀರ್‍ ಅಹ್ಮದ್ ಈ ಹೇಳಿಕೆ ನೀಡಿದ್ದು ಸರಿಯಲ್ಲ. ಅವರ ಹೇಳಿಕೆ ತಪ್ಪಾಗಿದೆ. ಒಕ್ಕಲಿಗ ಸಮುದಾಯ, ಮುಸ್ಲೀಂ ಸಮುದಾಯ ಟಿಪ್ಪು ಸುಲ್ತಾನ್ ಕಾಲದಿಂದಲೂ ಕೂಡಿಕೊಂಡು ಬಂದಿದೆ. ಆ ಸಮಾಜಕ್ಕೆ ನೋವಾಗಿದೆ ನಾನೇ ಕ್ಷಮೆ ಕೇಳುತ್ತೇನೆ. ದೇವೇಗೌಡರ ವಯಸ್ಸಿಗಾದರೂ ನಾವು ಗೌರವ ಕೊಡಬೇಕು. ದೇವೇಗೌಡರು ಪುತ್ರ ವಾತ್ಸಲ್ಯದಲ್ಲಿ ಸಿಲುಕಿಕೊಂಡಿದ್ದಾರೆ ಎಂದಿದ್ದಾರೆ. ಸದ್ಯ ಮಾಜಿ ಸಚಿವ ಸಿಎಂ ಇಬ್ರಾಹಿಂ ಮಂತ್ರಾಲಯದ ಜಾಗದ ಕುರಿತು ನೀಡಿರುವ ಹೇಳಿಕೆ ಯಾವ ರೀತಿಯ ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

Next Post

Kannada Rajyostava: ಕನ್ನಡಪರ ಹಾಗೂ ರೈತಪರ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್, ಸರ್ಕಾರ ಕ್ಕೆ ಒತ್ತಾಯ ಮಾಡುತ್ತೇನೆ ಶಾಸಕ ಸುಬ್ಬಾರೆಡ್ಡಿ

Mon Nov 18 , 2024
Kannada Rajyostava – ಕನ್ನಡಪರ ಹಾಗೂ ರೈತಪರ  ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸುತ್ತೇನೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ  ತಾಲ್ಲೂಕು ಕಚೇರಿ ಮುಂದೆ ಮುಖ್ಯರಸ್ತೆಯಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗ ಹಾಗೂ ಜಯಕರ್ನಾಟಕ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ (Kannada Rajyostava) ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಭಾಷೆ, ನೆಲ, ಜಲ ರಕ್ಷಣೆಗಾಗಿ ಹೋರಾಟ ನಡೆಸಿರುವ ಕನ್ನಡ […]
Kannada Rajyostava in the name of Appu
error: Content is protected !!