Thursday, November 21, 2024

ಮರದ ನೆರಳನ್ನು ದುಡ್ಡು ಕೊಟ್ಟು ಖರೀದಿಸುವ ಕಾಲ ಬರಬಹುದು: ಗುಂಪು ಮರದ ಆನಂದ್

ಗುಡಿಬಂಡೆ: ಮನುಷ್ಯನ ದುರಾಸೆಯ ಕಾರಣದಿಂದ ದಿನೇ ದಿನೇ ಪರಿಸರ ನಾಶವಾಗುತ್ತಿದೆ. ಪರಿಸರ ನಾಶದಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿ ಜೀವರಾಶಿಗಳು ಸಂಕಷ್ಟ ಎದುರಿಸುತ್ತಿವೆ. ಮರಗಳನ್ನು ನಾವು ಬೆಳೆಸದೇ ಇದ್ದರೇ ಮುಂದಿನ ದಿನಗಳಲ್ಲಿ ಮರದ ನೆರಳನ್ನು ನಾವು ದುಡ್ಡು ಕೊಟ್ಟು ಖರೀದಿಸುವ ಕಾಲ ಬರಬಹುದು ಎಂದು ರಾಜ್ಯ ಪ್ರಶಸ್ತಿ ವಿಜೇತ ಗುಂಪು ಮರದ ಆನಂದ್ ತಿಳಿಸಿದರು.

ಪಟ್ಟಣದ ರಸ್ತೆ ಬದಿಯಲ್ಲಿ, ವಿಭಜಕಗಳಲ್ಲಿ ನೆಟ್ಟಂತಹ ಗಿಡಗಳಿಗೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ನೀರು ಹಾಕುತ್ತಿದ್ದು, ಈ ಸಮಯದಲ್ಲಿ ಸಾರ್ವಜನಿಕ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಅವರು, ಸದ್ಯ ದೇಶದಾದ್ಯಂತ ಸುಡುವ ಬಿಸಿಲು ಜನಜೀವನ ಅಸ್ತವ್ಯಸ್ಥಗೊಳ್ಳುವಂತೆ ಮಾಡಿದೆ. ಸುಡು ಬಿಸಿಲಿಗೆ ಕೆಲವು ಕಡೆ ಪ್ರಾಣಗಳೂ ಸಹ ಹೋಗಿದೆ. ಮಳೆಯಿಲ್ಲದೇ ರೈತರ ಸಂಕಷ್ಟ ಹೇಳತೀರದ್ದಾಗಿದೆ. ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಕುಡಿಯುವ ನೀರಿಗೂ ಹಾಹಾಕಾರ ಉದ್ಬವಿಸಿದೆ. ಇದಕ್ಕೆಲ್ಲ ಮುಖ್ಯ ಕಾರಣ ಪರಿಸರದ ನಾಶ. ಮಾನವರ ದುರಾಸೆಯ ಕಾರಣದಿಂದ ದಿನೇ ದಿನೇ ಪರಿಸರ ನಾಶವಾಗುತ್ತಿದೆ. ನಗರೀಕರಣದ ಹೆಸರಿನಲ್ಲಿ ಕಾಡು ನಾಶವಾಗುತ್ತಿದೆ. ವಾಹನಗಳ ದಟ್ಟಣೆಯಿಂದ ವಾಯು ಮಾಲಿನ್ಯವಾಗುತ್ತಿದೆ. ಆದರೆ ಪರಿಸರವನ್ನು ಉಳಿಸುವ ಕೆಲಸ ಯಾರೂ ಮಾಡುತ್ತಿಲ್ಲ ಎಂದರು.

water to trees 1

ಇನ್ನೂ ಈಗಾಗಲೇ ನೀರು ಅಭಾವ ಸೃಷ್ಟಿಯಾಗಿದೆ. ಅನೇಕ ವರ್ಷಗಳಿಂದ ಶುದ್ದ ಕುಡಿಯುವ ನೀರನ್ನು ನಾವು ಹಣ ಕೊಟ್ಟು ಖರೀದಿ ಮಾಡುತ್ತಿದ್ದೇವೆ. ಅದೇ ಮಾದರಿಯಲ್ಲಿ ಇನ್ನು ಮುಂದೆ ನಾವು ಮರದ ನೆರಳನ್ನು ಸಹ ದುಡ್ಡು ಕೊಟ್ಟು ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾದರೂ ಆಗಬಹುದು. ಈ ಕಾರಣದಿಂದಲೇ ಪರಿಸರ ವೇದಿಕೆ, ಗ್ರೀನ್ ವಾರಿಯರ್ಸ್ ಹಾಗೂ ಪರಿಸರ ಪ್ರೇಮಿಗಳ ಸಹಕಾರದೊಂದಿಗೆ ಗುಡಿಬಂಡೆ ತಾಲೂಕಿನಾದ್ಯಂತ ವಿಶೇಷ ದಿನಗಳಂದು ಸಸಿಗಳನ್ನು ನೆಡುವಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಕೆಲವರು ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಅಂತಹ ಆರೋಪಗಳಿಗೆ ನಾವು ಕಿವಿಗೊಡುವುದಿಲ್ಲ. ನಮ್ಮ ಉದ್ದೇಶ ಗಿಡ-ಮರಗಳನ್ನು ಬೆಳೆಸುವುದಾಗಿದೆ ಎಂದರು.

ಇನ್ನೂ ಇದೇ ವೇಳೆ ಕೆಲ ಸಾರ್ವಜನಿಕರು ಪ.ಪಂ ಅಧಿಕಾರಿಗಳ ವಿರುದ್ದ ಆಕ್ರೋಷ ಹೊರಹಾಕಿದರು. ಗುಡಿಬಂಡೆ ಪಟ್ಟಣದ ರಸ್ತೆಯ ವಿಭಜಕಗಳಲ್ಲಿ ಈ ಹಿಂದೆ ಸಸಿಗಳನ್ನು ನೆಡಲಾಗಿದೆ. ಆದರೆ ಅವುಗಳ ನಿರ್ವಹಣೆಯನ್ನು ಮಾಡುವುದು ಪ,ಪಂ ಮರೆತಿದೆ. ಸಸಿಗಳು ನೀರಿಲ್ಲದೇ ಒಣಗುತ್ತಿವೆ. ಆದರೆ ಪ.ಪಂ. ಅಧಿಕಾರಿಗಳು ಮಾತ್ರ ಸಸಿಗಳಿಗೆ ನೀರು ಹಾಕುವ ಕೆಲಸ ಮಾಡುತ್ತಿಲ್ಲ. ಇನ್ನು ಮುಂದೆಯಾದರು ಸಸಿಗಳು ಒಣಗದಂತೆ ನೀರು ಹಾಕುವ ಮೂಲಕ ಸಸಿಗಳನ್ನು ಕಾಪಾಡಬೇಕೆಂದರು. ಈ ವೇಳೆ ಪರಿಸರವಾದಿಗಳಾದ ಅಸ್ಮಾಂಪಾಷ, ಅನ್ವರ್‍, ದಾದುಲ್ಲ, ಪ್ರಕಾಶ್, ಗಂಗಪ್ಪ, ಮುನಿಯಪ್ಪ ಸೇರಿದಂತೆ ಹಲವರು ಸಸಿಗಳಿಗೆ ಸ್ವಯಂ ಪ್ರೇರಿತವಾಗಿ ನೀರು ಹಾಕುವ ಕಾರ್ಯ ಹಮ್ಮಿಕೊಂಡಿದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!