Har Ghar Triranga – ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡ ಆರ್.ಮಿಥುನ್ ರೆಡ್ಡಿ, ಎಲ್ಲರೂ ತಮ್ಮ ಡಿಪಿ ಬದಲಿಸುವಂತೆ ಮನವಿ….!

Har Ghar Triranga-ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದಾದ್ಯಂತ ‘ಹರ್ ಘರ್ ತಿರಂಗಾ’ (Har Ghar Triranga) ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಸಾಮಾಜಿಕ ಜಾಲತಾಣ ಖಾತೆಗಳ ಪ್ರೊಫೈಲ್ ಚಿತ್ರಗಳಲ್ಲಿ ತ್ರಿವರ್ಣ ಧ್ವಜ ಹಾಕುವಂತೆ ಮನವಿ ಮಾಡಿದ್ದು ಈ ಅಭಿಯಾನದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯುವ ಮುಖಂಡರಾದ ಆರ್.ಮಿಥುನ್ ರೆಡ್ಡಿ ಅವರು ಭಾಗವಹಿಸಿದ್ದಾರೆ.

Mithun Reddy independence Day statement 0

ಸಾಮಾಜಿಕ ಜಾಲತಾಣ ಪೋಸ್ಟ್ ಮಾಡಿರುವ ಅವರು, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ (Har Ghar Triranga)ಹತ್ತಿರ ಬರುತ್ತಿದ್ದು, ಮತ್ತೊಮ್ಮೆ (Har Ghar Triranga)ಹರ್ ಘರ್ ತಿರಂಗಾವನ್ನು ಸಾಮೂಹಿಕ ಅಭಿಯಾನವನ್ನಾಗಿ ಮಾಡೋಣ ಎಂದು ಹೇಳಿದರು.  ನಾನು ನನ್ನ ಫೇಸ್ ಬುಕ್ ಪ್ರೊಫೈಲ್ ಚಿತ್ರವನ್ನು ಬದಲಾಯಿಸುತ್ತಿದ್ದೇನೆ. ನೀವೂ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಡಿಪಿಗಳನ್ನು ಬದಲಾಯಿಸುವ ಮೂಲಕ ದೇಶದ ಪ್ರಧಾನಿಗಳ ಜೊತೆಗೆ ಕೈ ಜೋಡಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು (Har Ghar Triranga) ಆಚರಿಸೋಣ ಎಂದು ಮನವಿ ಮಾಡಿದರು.

Leave a Comment

Your email address will not be published. Required fields are marked *

Scroll to Top