Sunday, June 29, 2025
HomeNationalPF Withdrawal : ಪಿಎಫ್ ಖಾತೆದಾರರಿಗೆ ಗುಡ್ ನ್ಯೂಸ್: 72 ಗಂಟೆಯಲ್ಲೇ ₹5 ಲಕ್ಷ ಹಣ...

PF Withdrawal : ಪಿಎಫ್ ಖಾತೆದಾರರಿಗೆ ಗುಡ್ ನ್ಯೂಸ್: 72 ಗಂಟೆಯಲ್ಲೇ ₹5 ಲಕ್ಷ ಹಣ ವಿತ್‌ಡ್ರಾ! ಬಂತು ಹೊಸ ಆಟೋ ಸೆಟಲ್‌ಮೆಂಟ್ ಸೌಲಭ್ಯ..!

PF Withdrawal – ನಿಮ್ಮ PF ಖಾತೆಯಲ್ಲಿರುವ ಹಣ ತುರ್ತು ಸಂದರ್ಭದಲ್ಲಿ ಕೈಗೆ ಸಿಗದೆ ಪರದಾಡುತ್ತಿದ್ದೀರಾ? ಹಾಗಿದ್ರೆ, ನಿಮಗೊಂದು ಭರ್ಜರಿ ಸಿಹಿಸುದ್ದಿ ಇದೆ! ಇನ್ಮುಂದೆ ತುರ್ತು ಪರಿಸ್ಥಿತಿ ಅಥವಾ ಅಗತ್ಯವಿದ್ದಾಗ, ಕೇವಲ 72 ಗಂಟೆಗಳ ಒಳಗಡೆ ನಿಮ್ಮ ಪಿಎಫ್ ಖಾತೆಯಿಂದ ಬರೋಬ್ಬರಿ ₹5 ಲಕ್ಷದವರೆಗೆ ಹಣವನ್ನು ಹಿಂಪಡೆಯಬಹುದು. ಇದು ಈ ಹಿಂದೆ ಇದ್ದ ₹1 ಲಕ್ಷದ ಮಿತಿಗಿಂತ ಐದು ಪಟ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕೋಟ್ಯಂತರ ಉದ್ಯೋಗಿಗಳಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

EPFO new rules allow up to ₹5 lakh PF withdrawal within 3 days through auto settlement

PF Withdrawal – ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ: ಲಕ್ಷಾಂತರ ಉದ್ಯೋಗಿಗಳಿಗೆ ನೆಮ್ಮದಿ

ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರು ಜೂನ್ 24 ರಂದು ಈ ಮಹತ್ವದ ಮಾಹಿತಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಇದರ ಹಿಂದಿನ ಪ್ರಕ್ರಿಯೆ ಈಗಾಗಲೇ ಶುರುವಾಗಿತ್ತು. ಮಾರ್ಚ್ 28 ರಂದು ಶ್ರೀನಗರದಲ್ಲಿ ನಡೆದ ಇಪಿಎಫ್‌ಒ ಕಾರ್ಯನಿರ್ವಾಹಕ ಸಮಿತಿಯ (ಇಸಿ) 113 ನೇ ಸಭೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ಈ ಪ್ರಸ್ತಾವನೆಯನ್ನು ಅಂಗೀಕರಿಸಿದ್ದರು. ಇದು ಉದ್ಯೋಗಿಗಳ (PF Withdrawal) ಬಹುದಿನಗಳ ಬೇಡಿಕೆಯಾಗಿತ್ತು.

PF Withdrawal – ಹಣ ವಿತ್ಡ್ರಾ ಈಗ ಮತ್ತಷ್ಟು ಸುಲಭ: ‘ಆಟೋ ಸೆಟಲ್ಮೆಂಟ್ಪ್ರಕ್ರಿಯೆ!

ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲು ಮತ್ತು ವೇಗಗೊಳಿಸಲು ಆಟೋ ಸೆಟಲ್‌ಮೆಂಟ್ ವ್ಯವಸ್ಥೆ ಜಾರಿಗೆ ಬಂದಿದೆ.

ಆಟೋ ಸೆಟಲ್ಮೆಂಟ್ ಹೇಗೆ ಕೆಲಸ ಮಾಡುತ್ತದೆ?

  • ಸ್ವಯಂಚಾಲಿತ ಪ್ರಕ್ರಿಯೆ: ಆಟೋ ಸೆಟಲ್‌ಮೆಂಟ್‌ನಲ್ಲಿ, ಪಿಎಫ್ ಹಿಂಪಡೆಯುವಿಕೆ (PF Withdrawal)  ಕ್ಲೈಮ್ ಅನ್ನು ಸಿಸ್ಟಮ್ ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸುತ್ತದೆ. ಇಲ್ಲಿ ಮಾನವ ಹಸ್ತಕ್ಷೇಪ ತುಂಬಾ ಕಡಿಮೆ ಇರುತ್ತದೆ.
  • ತ್ವರಿತ ಪರಿಶೀಲನೆ: ನಿಮ್ಮ ಯುಎಎನ್ (ಯೂನಿವರ್ಸಲ್ ಅಕೌಂಟ್ ನಂಬರ್) ಆಧಾರ್, ಪ್ಯಾನ್ ಮತ್ತು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದ್ದರೆ ಮತ್ತು ನಿಮ್ಮ ಕೆವೈಸಿ (KYC) ಸಂಪೂರ್ಣವಾಗಿ ಅಪ್‌ಡೇಟ್ ಆಗಿದ್ದರೆ, ಸಿಸ್ಟಮ್ ನಿಮ್ಮ ಕ್ಲೈಮ್ ಅನ್ನು ಅತಿ ವೇಗವಾಗಿ ಪರಿಶೀಲಿಸುತ್ತದೆ.
  • ಕೇವಲ 3-4 ದಿನಗಳಲ್ಲಿ ಹಣ: ಈ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್ ಆಧಾರಿತವಾಗಿರುವುದರಿಂದ, ನಿಮ್ಮ ಕ್ಲೈಮ್ ಕೇವಲ 3-4 ದಿನಗಳಲ್ಲಿ ಪ್ರಕ್ರಿಯೆಯಾಗಿ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.
  • ಯಾವ ಕ್ಲೈಮ್ಗಳಿಗೆ ಆಟೋ ಸೆಟಲ್ಮೆಂಟ್? ಇಪಿಎಫ್‌ಒ ಕೆಲವು ನಿರ್ದಿಷ್ಟ ರೀತಿಯ ಕ್ಲೈಮ್‌ಗಳಿಗೆ (ಉದಾಹರಣೆಗೆ, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ಮದುವೆ ಅಥವಾ ವಸತಿ ಖರೀದಿ ಇತ್ಯಾದಿ) ಆಟೋ ಸೆಟಲ್‌ಮೆಂಟ್ ಸೌಲಭ್ಯವನ್ನು ಪರಿಚಯಿಸಿದೆ.

ಮ್ಯಾನುಯೆಲ್ ಸೆಟಲ್ಮೆಂಟ್: ಏಕೆ ವಿಳಂಬ?

ಈ ಹಿಂದೆ ಇದ್ದ ಮ್ಯಾನುಯೆಲ್ ಸೆಟಲ್‌ಮೆಂಟ್ ಪ್ರಕ್ರಿಯೆಯಲ್ಲಿ ಪಿಎಫ್ ಕ್ಲೇಮ್‌ಗಳನ್ನು ಇಪಿಎಫ್‌ಒ ನೌಕರರು ಇತ್ಯರ್ಥಪಡಿಸುತ್ತಾರೆ. ಈ ಪ್ರಕ್ರಿಯೆಗೆ 15-30 ದಿನಗಳು ಬೇಕಾಗುತ್ತಿತ್ತು.

EPFO new rules allow up to ₹5 lakh PF withdrawal within 3 days through auto settlement

ಮ್ಯಾನುಯೆಲ್ ಸೆಟಲ್ಮೆಂಟ್ ವಿಳಂಬಕ್ಕೆ ಕಾರಣಗಳು:

  • ಫಾರ್ಮ್ ಭರ್ತಿ: ಆನ್‌ಲೈನ್ ಅಥವಾ ಆಫ್‌ಲೈನ್ ಫಾರ್ಮ್‌ಗಳನ್ನು (ಫಾರ್ಮ್ 19, 31, 10C ನಂತಹ) ಭರ್ತಿ ಮಾಡಬೇಕಿತ್ತು.
  • ಪರಿಶೀಲನೆ: ಇಪಿಎಫ್‌ಒ ಉದ್ಯೋಗಿಗಳು ನಿಮ್ಮ ದಾಖಲೆಗಳು, ಕೆವೈಸಿ ಮತ್ತು ಅರ್ಹತೆಯನ್ನು ಹಸ್ತಚಾಲಿತವಾಗಿ ಪರಿಶೀಲಿಸುತ್ತಿದ್ದರು.
  • ಅಪೂರ್ಣ ದಾಖಲೆಗಳು: ನಿಮ್ಮ ಎಕ್ಸಿಟ್ಡೇಟ್ ಅಪ್ಡೇಟ್ (PF Withdrawal)  ಮಾಡದೇ ಇದ್ದರೆ ಅಥವಾ ಯಾವುದೇ ದಾಖಲೆ ಕಾಣೆಯಾಗಿದ್ದರೆ, ಕ್ಲೇಮ್ ವಿಳಂಬವಾಗುತ್ತಿತ್ತು.
  • ಸಂಕೀರ್ಣ ಕ್ಲೈಮ್ಗಳು: ನಿವೃತ್ತಿ ಅಥವಾ ಅಂತಿಮ ಇತ್ಯರ್ಥಗಳಂತಹ ದೊಡ್ಡ ಅಥವಾ ಸಂಕೀರ್ಣ ಕ್ಲೈಮ್‌ಗಳು ಸಾಮಾನ್ಯವಾಗಿ ಮ್ಯಾನ್ಯುಯೆಲ್ ತನಿಖೆಯನ್ನು ಒಳಗೊಂಡಿರುತ್ತವೆ.

ಭವಿಷ್ಯದಲ್ಲಿ ಪಿಎಫ್ ಹಣ ಹಿಂಪಡೆಯುವಿಕೆ ಇನ್ನಷ್ಟು ಸುಲಭ! UPI-ATM ಸೌಲಭ್ಯ?

ಮಾಧ್ಯಮ ವರದಿಗಳ ಪ್ರಕಾರ, ಇಪಿಎಫ್‌ಒ 3.0 ರ ಕರಡಿನ ಅಡಿಯಲ್ಲಿ, ಉದ್ಯೋಗಿಗಳು ಶೀಘ್ರದಲ್ಲೇ ATM ಮತ್ತು UPI ಮೂಲಕ ನೇರವಾಗಿ ಪಿಎಫ್ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಪಡೆಯುವ ಸಾಧ್ಯತೆ ಇದೆ!

Read this also : EPF ಖಾತೆಯಿದ್ದವರಿಗೆ ಅವಶ್ಯಕ ಮಾಹಿತಿ, ಹಾಗಿದ್ರೆ EPFO 3.0 ಬಗ್ಗೆ ತಿಳಿಯಲೇಬೇಕು! ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ಹೊಸ ಸೌಲಭ್ಯಗಳು ಏನಿರಬಹುದು?

  • ವಿತ್ಡ್ರಾ ಕಾರ್ಡ್ಗಳು: ಪಿಎಫ್ ಖಾತೆದಾರರಿಗೆ ಬ್ಯಾಂಕ್ ಎಟಿಎಂ ಕಾರ್ಡ್‌ನಂತೆ ವಿತ್‌ಡ್ರಾ ಕಾರ್ಡ್‌ಗಳನ್ನು ನೀಡಲಾಗುವುದು.
  • ನಿಗದಿತ ಮೊತ್ತದ ಮಿತಿ: ಈ ಹೊಸ ಸೌಲಭ್ಯದ ಅಡಿಯಲ್ಲಿ, ಒಂದು ನಿಗದಿತ ಮೊತ್ತವನ್ನು ಮಾತ್ರ ಹಿಂಪಡೆಯಲು ಸಾಧ್ಯವಾಗುತ್ತದೆ.
  • UPI ಲಿಂಕ್: ಯುಪಿಐ ಮೂಲಕ ಹಣವನ್ನು ಹಿಂಪಡೆಯಲು, ನಿಮ್ಮ ಪಿಎಫ್ ಖಾತೆಯನ್ನು ಯುಪಿಐಗೆ ಲಿಂಕ್ ಮಾಡಬೇಕು. ಇದರ ನಂತರ, ಬಳಕೆದಾರರು ತಮ್ಮ ಬ್ಯಾಂಕ್ ಖಾತೆಗೆ ಪಿಎಫ್ ಹಣವನ್ನು ಸುಲಭವಾಗಿ ವರ್ಗಾಯಿಸಲು ಸಾಧ್ಯವಾಗುತ್ತದೆ.

PF Withdrawal – ಕೆಲಸ ಕಳೆದುಕೊಂಡರೆ, ಪಿಎಫ್ ಹಣ ನಿಮ್ಮ ಕೈಹಿಡಿಯುತ್ತದೆ!

ದುರದೃಷ್ಟವಶಾತ್ ನೀವು ಕೆಲಸ ಕಳೆದುಕೊಂಡರೆ ಆತಂಕ ಪಡುವ ಅಗತ್ಯವಿಲ್ಲ. ಇಪಿಎಫ್ ಸದಸ್ಯರು ಕೆಲಸ ಕಳೆದುಕೊಂಡರೆ, ಆರ್ಥಿಕ ಸಂಕಷ್ಟವನ್ನು ಎದುರಿಸಲು ಅವರ ಪಿಎಫ್ ಹಣ ಕೈಹಿಡಿಯುತ್ತದೆ. ಕೆಲಸ ಕಳೆದುಕೊಂಡ ಒಂದು ತಿಂಗಳ ನಂತರ, ನಿಮ್ಮ ಪಿಎಫ್ ಖಾತೆಯಿಂದ ಶೇ. 75ರಷ್ಟು ಹಣವನ್ನು ಹಿಂಪಡೆಯಬಹುದು. ಇದು ನಿಮ್ಮ ನಿರುದ್ಯೋಗದ ಅವಧಿಯಲ್ಲಿ ದೈನಂದಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಹಾಗೆಯೇ, ಉಳಿದ ಶೇ. 25ರಷ್ಟು ಮೊತ್ತವನ್ನು ಕೆಲಸ ಕಳೆದುಕೊಂಡ ಎರಡು ತಿಂಗಳ ನಂತರ ಹಿಂಪಡೆಯುವ ಅವಕಾಶವಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular