ಪ್ರೀತಿಗೆ ವಯಸ್ಸಿಲ್ಲ ಅನ್ನೋ ಮಾತಿದೆ. ಅದಕ್ಕೆ ಸಾಕ್ಷಿ ಈ ಮುದ್ದಾದ ವೃದ್ಧ ದಂಪತಿ! ಸಾಮಾನ್ಯವಾಗಿ ಹೆಣ್ಣು ತನ್ನ ಕೊನೆಯುಸಿರಿನವರೆಗೂ ಗಂಡ ತನ್ನನ್ನು ಕಣ್ಣರೆಪ್ಪೆಯಂತೆ ನೋಡಿಕೊಳ್ಳಬೇಕು ಎಂದು ಬಯಸುತ್ತಾಳೆ. ಅಂತಹ ಸಂಗಾತಿ ಸಿಕ್ಕರೆ ಆಕೆಗಿಂತ ಅದೃಷ್ಟವಂತೆ ಬೇರೆ ಯಾರಿಲ್ಲ. ಆದರೆ ಈ ಹೃದಯಸ್ಪರ್ಶಿ (Pure Love) ದೃಶ್ಯ ನೋಡಿದಾಗ ಈ ವೃದ್ಧ ದಂಪತಿಯು ಇಂದಿನ ಯುವ ಜೋಡಿಗಳಿಗೂ ಮಾದರಿ ಅನಿಸದೇ ಇರದು.

ವೃದ್ಧರೊಬ್ಬರು ತಮ್ಮ ಪತ್ನಿಯನ್ನು ಸಂತೋಷವಾಗಿರಿಸಲು ಮಾಡಿದ ಸಣ್ಣ ಪ್ರಯತ್ನ ಈಗ ಎಲ್ಲೆಡೆ ವೈರಲ್ ಆಗಿದೆ. ತಮ್ಮ ಪತ್ನಿಯ ಹುಟ್ಟುಹಬ್ಬಕ್ಕೆ ಆ ವೃದ್ಧ ವ್ಯಕ್ತಿ ಕೊಟ್ಟ ಸರ್ಪ್ರೈಸ್ ನಿಜಕ್ಕೂ ಅದ್ಭುತ. ಈ ಭಾವುಕ ಕ್ಷಣದ ವಿಡಿಯೋವನ್ನು ನೆಟ್ಟಿಗರು ಕಣ್ತುಂಬಿಕೊಂಡಿದ್ದಾರೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Pure Love – ವಿಡಿಯೋದಲ್ಲಿ ಏನಿದೆ?
‘Little Letters Linked’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ, ವೃದ್ಧ ವ್ಯಕ್ತಿಯೊಬ್ಬರು ತಮ್ಮ ಮಡದಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡುತ್ತಿರುವುದನ್ನು ನೋಡಬಹುದು. ಪುಟ್ಟ ಕೇಕ್ ಮೇಲೆ ಕ್ಯಾಂಡಲ್ ಇಟ್ಟುಕೊಂಡು ಮೆಲ್ಲನೆ ನಡೆದು ಬಂದು ಪತ್ನಿಯ ಮುಂದೆ ಇರಿಸುತ್ತಾರೆ. ಇದನ್ನು ನೋಡುತ್ತಿದ್ದಂತೆ ವೃದ್ಧೆಯ ಮುಖದಲ್ಲಿ ಸಂತೋಷ ಅರಳುತ್ತದೆ. ಕೈ ಮುಗಿದು ಕ್ಯಾಂಡಲ್ ಆರಿಸಿ, ಕೇಕ್ ಕತ್ತರಿಸಿ ಪತಿಗೂ ಕೇಕ್ ತಿನ್ನಿಸುತ್ತಾರೆ. Read this also : ಮೊದಲ ಬಾರಿಗೆ ಸಮುದ್ರ ನೋಡಿದ ಅಜ್ಜ-ಅಜ್ಜಿ! ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ವಿಡಿಯೋ…!
ಅದೇ ಸಮಯದಲ್ಲಿ, ಪತಿ ತಮ್ಮ ಮಡದಿಗಾಗಿ ಒಂದು ವಿಶೇಷ ಉಡುಗೊರೆಯನ್ನು ನೀಡುತ್ತಾರೆ. ಉಡುಗೊರೆ ಬಾಕ್ಸ್ ತೆರೆಯುತ್ತಿದ್ದಂತೆ ಅದರಲ್ಲಿ ಮೇಕಪ್ ಕಿಟ್ ಇರುವುದನ್ನು ನೋಡಿ ವೃದ್ಧೆಯ ಸಂತೋಷಕ್ಕೆ (Pure Love) ಪಾರವೇ ಇರುವುದಿಲ್ಲ. ಅವರ ಮುಖದಲ್ಲಿದ್ದ ಖುಷಿಯೇ ಎಲ್ಲವನ್ನೂ ಹೇಳುತ್ತದೆ!

ನೆಟ್ಟಿಗರ ಪ್ರತಿಕ್ರಿಯೆ
ಈ ವಿಡಿಯೋ ಈಗಾಗಲೇ ನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದನ್ನು ನೋಡಿದ ಅನೇಕರು ಭಾವುಕರಾಗಿದ್ದಾರೆ. ಒಬ್ಬ ಬಳಕೆದಾರರು “ಆದರ್ಶ ದಂಪತಿಗಳು” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ಇಂತಹ ಮಾದರಿ ಜೋಡಿಗಳು ಕಾಣಸಿಗುವುದೇ ವಿರಳ” ಎಂದು ಹೇಳಿದ್ದಾರೆ. ಮತ್ತೊಬ್ಬರು “ಮತ್ತೆ ಮತ್ತೆ ನೋಡಬೇಕೆನಿಸುವ (Pure Love) ವಿಡಿಯೋ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ : Click Here
ಈ ವಿಡಿಯೋ ನಿಜಕ್ಕೂ ಪ್ರೀತಿ ಮತ್ತು ಸಲುಗೆಯ ಮಹತ್ವವನ್ನು ತಿಳಿಸುತ್ತದೆ. ವಯಸ್ಸಾದ ಮೇಲೂ ಒಬ್ಬರನ್ನೊಬ್ಬರು ಪ್ರೀತಿಸುವ ಮತ್ತು ಪರಸ್ಪರ ಸಂತೋಷಪಡಿಸುವ ಈ ದಂಪತಿ ಇಡೀ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದಾರೆ. ನಿಜವಾದ ಪ್ರೀತಿ ಅಂದರೆ ಇದೇ ಅಲ್ವಾ?
