ED Raid – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೇಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ರವರ ಮೇಲೆ ನಿನ್ನೆಯಷ್ಟೆ ಇಡಿ ದಾಳಿ ನಡೆಸಿದ್ದು, ಈ ಸಂಬಂಧ ಶಾಸಕ ಸುಬ್ಬಾರೆಡ್ಡಿ ಬಾಗೇಪಲ್ಲಿಯಲ್ಲಿರುವ ಗೃಹದಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಡಿ ಸ್ವತಂತ್ರ ಸಂಸ್ಥೆಯಾಗಿದ್ದು, ತನಿಖೆ ನಡೆಸೋದ್ರಲ್ಲಿ ತಪ್ಪಿಲ್ಲ, ಈ ಸಂಬಂಧ ಇಡಿ ಕಚೇರಿಗೆ ಬರಲು ತಿಳಿಸಿದ್ದು, ಕಚೇರಿಗೆ ಭೇಟಿ ನೀಡಿ ನನ್ನಲ್ಲಿರುವ ಮಾಹಿತಿಯನ್ನು ತಿಳಿಸುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.
ED Raid – ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮೇಲೆ ಇಡಿ ದಾಳಿಯ ಪ್ರತಿಕ್ರಿಯೆ
ನಿನ್ನೆಯಷ್ಟೆ ಜಾರಿ ನಿರ್ದೇಶನಾಲಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೇಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ಬೆಂಗಳೂರಿನ ನಿವಾಸ, ಕಚೇರಿಗಳು ಮತ್ತು ಅವರ ವ್ಯಾಪಾರ ಪಾಲುದಾರರ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿದ್ದರು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಈ ಪರಿಶೀಲನೆ ನಡೆಸಲಾಗಿತ್ತು. ಈ ಸಂಬಂಧ ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಜೋರು ಪ್ರತಿಭಟನೆ ನಡೆದಿತ್ತು. ಇದೀಗ ಶಾಸಕ ಸುಬ್ಬಾರೆಡ್ಡಿ ಇಡಿ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ED Raid – ನಾನು ಎಲ್ಲದಕ್ಕೂ ಸಿದ್ದನಿದ್ದೇನೆ, ಯಾರೂ ಬೇಕಾದರೂ ತನಿಖೆ ನಡೆಸಲಿ
ಬಾಗೇಪಲ್ಲಿಯಲ್ಲಿರುವ ಶಾಸಕರ ಸ್ವಗೃಹದಲ್ಲಿ ಏರ್ಪಡಿಸಿದ್ದ ಜನತಾ ದರ್ಶನದ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ನಾಲ್ಕು ಜಾಗಗಳಲ್ಲಿ ತಪಾಸಣೆ ನಡೆಸಿದ್ದು, ಅವರ ತಪಾಸಣೆಯ ವೇಳೆ ವಿದೇಶಿ ವ್ಯವಹಾರವಾಗಲೀ ಅಥವಾ ನಮ್ಮ ಸಂಸ್ಥೆಯಲ್ಲಿನ ನಿಯಮ ಬಾಹಿರವಾದಂತಹ ವ್ಯವಹಾರಗಳು ನಡೆದಿರುವ ಬಗ್ಗೆ ದಾಖಲೆ ಸಿಕ್ಕಿಲ್ಲ. ಅಧಿಕಾರಿಗಳಿಗೆ ಅನುಮಾನವಿರುವಂತಹ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದು, 14ನೇ ತಾರೀಖಿನಂದು ಇಡಿ ಕಚೇರಿಗೆ ಬರಲು ತಿಳಿಸಿದ್ದು. ನಾನು ಅಂದು ಇಡಿ ಕಚೇರಿಗೆ ಹೋಗಿ ನನ್ನಲ್ಲಿರುವ ಸತ್ಯಾಂಶವನ್ನು ಅವರ ಮುಂದೆ ಇಡುತ್ತೇನೆ.
ನಾನು ಬೇರೆಯವರಂತೆ ಬಿಜೆಪಿಯವರೇ ಮಾಡಿಸಿದ್ದಾರೆ ಎಂದು ಹೇಳೊಲ್ಲ. ಇಡಿ ತನಿಖಾ ಸಂಸ್ಥೆ ತನಿಖೆ ಮಾಡಿದರೇ ಏನು ತಪ್ಪು. ನಾನು ನಿಷ್ಟಾವಂತನಾಗಿದ್ದೇನೆ. ಯಾರೂ ಬೇಕಾದರೂ ತನಿಖೆ ಮಾಡಬಹುದು. ನಾನು ಎಲ್ಲದಕ್ಕೂ ಸಿದ್ದನಿದ್ದೇನೆ. ಜೊತೆಗೆ ನಾನು ಒಂದು ರೂಪಾಯಿ ವಿದೇಶದಲ್ಲಿ ಹೂಡಿಕೆ ಮಾಡಿದ್ದೇನೆ ಎಂದು ಸಾಬೀತಾದರೇ ನನ್ನ ಇಡೀ ಆಸ್ತಿ ನಿಮ್ಮ ಸರ್ಕಾರಕ್ಕೆ ಬಿಡುತ್ತೇನೆ ಎಂದು ಇಡಿ ಅಧಿಕಾರಿಗಳಿಗೆ ಸವಾಲಾಕಿದ್ದೇನೆ ಎಂದು ಮಾದ್ಯಮಗಳಿಗೆ ಉತ್ತರಿಸಿದರು.
Read this also : ಕಾಂಗ್ರೇಸ್ ಶಾಸಕ ಸುಬ್ಬಾರೆಡ್ಡಿ ಮೇಲೆ ಇಡಿ ದಾಳಿ, ಈ ದಾಳಿ ರಾಜಕೀಯ ಪ್ರೇರಿತ, ಕಾಂಗ್ರೇಸ್ ಮುಖಂಡರ ಪ್ರತಿಭಟನೆ…!
ED Raid – ಬಿಜೆಪಿ ಗೆ ಸೇರಲಿಲ್ಲ ಎಂಬ ಕಾರಣಕ್ಕೆ ದಾಳಿ ನಡೆಯಿತಾ?
ಆಪರೇಷನ್ ಕಮಲದ ವೇಳೆ ಬಿಜೆಪಿಗೆ ಶಾಸಕ ಸುಬ್ಬಾರೆಡ್ಡಿ ಸೇರಲಿಲ್ಲ ಎಂಬ ಕಾರಣದಿಂದ ಈ ದಾಳಿ ನಡೆದಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಸದ್ಯ ಇಡಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ನಾನು ಅವರ ಬಳಿ ಹೋದಾಗ ನನ್ನ ವಿರುದ್ದ ಉದ್ದೇಶಪೂರ್ವಕವಾಗಿ ದಾಳಿ ನಡೆಸಿದ್ದಾರೆಯೇ ಅಥವಾ ಬಿಜೆಪಿಗೆ ಸೇರಲಿಲ್ಲ ಎಂಬ ಕಾರಣಕ್ಕಾಗಿ ದಾಳಿ ನಡೆದಿದೆಯೇ ಎಂಬುದು ತಿಳಿಯುತ್ತದೆ. ನನಗೆ ಏನಾದರೂ ಮೋಸ ಆಗಿದ್ದರೇ ಅಂದು ಮಾದ್ಯಮಗಳೊಂದಿಗೆ ನನ್ನ ನೋವನ್ನು ಹಂಚಿಕೋಳ್ಳುತ್ತೇನೆ.
ED Raid – ಜನರು ನನ್ನ ಮೇಲಿಟ್ಟ ವಿಶ್ವಾಸ ಕಳೆದುಕೊಳ್ಳುವುದಿಲ್ಲ
ಇನ್ನೂ ನನ್ನನ್ನು ಗೆಲ್ಲಿಸಿದಂತಹ ಜನರ ವಿಶ್ವಾಸಕ್ಕೆ ನಾನು ಮೋಸ ಮಾಡುವ ಕೆಲಸ ಮಾಡುವುದಿಲ್ಲ. ಜನರ ವಿಶ್ವಾಸಕ್ಕೆ ದಕ್ಕೆ ತರುವಂತಹ ಕೆಲಸ ಮಾಡೋಲ್ಲ. ನಿಮ್ಮ ಶಾಸಕ ಸದಾ ಜನರಿಗಾಗಿ ಕೆಲಸ ಮಾಡುತ್ತೇನೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ರವರೂ ಸಹ ಪೋನ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ. ಏನೇ ಆಗಲಿ ಸರ್ಕಾರ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಿದ್ದಾರೆ ಎಂದರು.