DYFI Protest ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಅಧಿಕಾರಕ್ಕೆ ಬಂದು, ಅಧಿಕಾರಕ್ಕೆ ಬಂದ ಬಳಿಕ ನಿರುದ್ಯೋಗಿಗಳ ಸಮಸ್ಯೆಗಳನ್ನು ಬಗೆಹರಿಸದೇ ಅವರನ್ನು ಮತಷ್ಟು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು (DYFI Protest) ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಡಿ.ವೈ.ಎಫ್.ಐ (DYFI Protest) ಸಂಘಟನೆಯ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಾವು ಲಕ್ಷಗಟ್ಟಲೇ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಅವರು ಮಾಡೋದೋ ಬೇರೆಯಾಗಿರುತ್ತದೆ. ಅದೇ ರೀತಿ ರಾಜ್ಯ ಕಾಂಗ್ರೇಸ್ ಸರ್ಕಾರ ಯುವನಿಧಿ ಹೆಸರಿನಲ್ಲಿ ನಿರುದ್ಯೋಗಿಗಳ ಮತ ಪಡೆದುಕೊಂಡಿದೆ. ಅನೇಕರು ಯುವ ನಿಧಿಯಿಂದ ಕೊಂಚ ಸುಧಾರಣೆಯಾಗುತ್ತದೆ ಎಂದು ಭಾವಿಸಿದ್ದರು. ಆದರೆ ಕಾಂಗ್ರೇಸ್ ಸರ್ಕಾರ ಅವೈಜ್ಞಾನಿಕವಾದ ಅಂಶಗಳನ್ನು ಇಟ್ಟು ಯುವ ನಿಧಿ ಸಿಗದಂತೆ ಮಾಡಿದ್ದಾರೆ. ಆದ್ದರಿಂದ ಎಲ್ಲಾ ನಿರುದ್ಯೋಗಿಗಳಿಗೂ ರಾಜ್ಯ ಸರ್ಕಾರ ಯುವ ನಿಧಿಯಡಿ ನಿರುದ್ಯೋಗ ಭತ್ಯೆ ನೀಡಬೇಕು, ಜೊತೆಗೆ ನಿರುದ್ಯೋಗ ಭತ್ಯೆಯನ್ನು ಸಹ ಹೆಚ್ಚಿಸಬೇಕೆಂದು (DYFI Protest) ಒತ್ತಾಯಿಸಿದರು.
ಬಳಿಕ (DYFI Protest) ಜಿಲ್ಲಾ ಉಪಾಧ್ಯಕ್ಷ ದೇವರಾಜು ಮಾತನಾಡಿ, ರಾಜ್ಯ ಸರ್ಕಾರ ಇತ್ತೀಚಿಗೆ ಕೆಲವು ಸೆಕ್ಟರ್ ಗಳಲ್ಲಿ 14 ಗಂಟೆಗಳ ಕಾಲ ಕೆಲಸ ಮಾಡುವಂತಹ ನಿಯಮ ತರುತ್ತಿದೆ. ಇದರಿಂದ ಕಡಿಮೆ ಸಂಬಳಕ್ಕೆ ಕೆಲಸ ಮಾಡುವಂತಹ ಉದ್ಯೋಗಿಗಳ ಮೇಲೆ ಪ್ರತಿಕೂಲಕರ ಪರಿಣಾಮ ಬೀರುತ್ತದೆ. ಗುಡಿಬಂಡೆ ತಾಲೂಕಿನಲ್ಲಿಯೇ ನೂರಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿವೆ. ಹೀಗೆ ರಾಜ್ಯದಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿಯಿದೆ. ಸರ್ಕಾರ ಮಾತ್ರ ಉದ್ಯೋಗಗಳನ್ನು ಭರ್ತಿ ಮಾಡುವಲ್ಲಿ ಕಾಳಜಿ ತೋರಿಸುತ್ತಿಲ್ಲ. ಗುಡಿಬಂಡೆ ತಾಲೂಕಿನ ಬಹುತೇಕ ಎಲ್ಲಾ ಕಚೇರಿಗಳಲ್ಲಿ ನಿಯೋಜನೆ ಮೇರೆಗೆ ಕೆಲಸ ಮಾಡುವಂತಹ ಅಧಿಕಾರಿಗಳೇ ಹೆಚ್ಚಾಗಿದ್ದಾರೆ. ಆದ್ದರಿಂದ ಸರ್ಕಾರಗಳು ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ ನಿರುದ್ಯೋಗಿಗಳ ಸಹಾಯಕ್ಕೆ (DYFI Protest) ಬರಬೇಕೆಂದರು.
ಪ್ರಮುಖ ಬೇಡಿಕೆಗಳು: (DYFI Protest) ಚಿಕ್ಕಬಳ್ಳಾಫುರ ಜಿಲ್ಲೆಯಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದು, ಖಾಸಗಿ ವಲಯದ ನೇಮಕಾತಿಯಲ್ಲಿ ಮೀಸಲಾತಿ ಹೆಚ್ಚಳ ಮಾಡುವುದು, ಯುವನಿಧಿಯನ್ನು ಹೆಚ್ಚಳ ಮಾಡುವುದು, ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದು ಅಥವಾ ನಿರುದ್ಯೋಗ ಭತ್ಯೆ ನೀಡುವುದು, ಖಾಲಿಯಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದು, ಜಿಲ್ಲೆಯ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ದಿ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ತಹಸೀಲ್ದಾರರ ಮೂಲಕ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.
ಈ ವೇಳೆ (DYFI Protest) ಡಿ.ವೈ.ಎಫ್.ಐ ಸಂಘಟನೆಯ ಸಹಕಾರ್ಯದರ್ಶಿ ವೆಂಕಟರಮಣ, ಸದಸ್ಯರಾದ ಸೋಮಶೇಖರ್ ರೆಡ್ಡಿ, ಗಂಗರಾಜು, ಹರಿಕೃಷ್ಣ, ರಾಮಾಂಜಿ, ವೆಂಕಟೇಶ್, ಗಂಗಾಧರ, ಅಶೋಕ್, ತಿರುಮಲೇಶ್, ನರೇಂದ್ರ, ಶಿವಕುಮಾರ್, ಕೆ.ಪಿ.ಆರ್.ಎಸ್ ನ ಆದಿನಾರಾಯಣಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.