HomeNationalSnake : ಮೈಮೇಲೆ ಹಾವನ್ನು ಬಿಟ್ಟುಕೊಂಡು ಕುಡಿದ ಅಮಲಿನಲ್ಲಿ ಹುಚ್ಚಾಟ ಮಾಡಿದ ತಾತಪ್ಪ..!

Snake : ಮೈಮೇಲೆ ಹಾವನ್ನು ಬಿಟ್ಟುಕೊಂಡು ಕುಡಿದ ಅಮಲಿನಲ್ಲಿ ಹುಚ್ಚಾಟ ಮಾಡಿದ ತಾತಪ್ಪ..!

Snake – ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಮುಮ್ಮಿದಿವರಂನಲ್ಲಿ ತಾತಪ್ಪನೋರ್ವ ಕುಡಿದ ಮತ್ತಿನಲ್ಲಿ ಹಾವು ಹಿಡಿದುಕೊಂಡು ಮಾಡಿದ ಆಟಕ್ಕೆ ಹಾವಿನಿಂದ ಎರಡು ಬಾರಿ ಕಡಿಸಿಕೊಂಡ ಘಟನೆ ನಡೆದಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Drunk man in Andhra Pradesh wraps snake around his neck, bitten twice – viral video from Konaseema

ಹೌದು, ಗೋಲ್ಲಪಲ್ಲಿ ಕೊಂಡ ಎಂಬ ವ್ಯಕ್ತಿ ತನ್ನ ಕೋಳಿ ಗೂಡಿನ ಬಳಿ ಅಡಗಿದ್ದ ಹಾವನ್ನು ನೋಡಿ ಅದನ್ನು ಹಿಡಿದು, ಅದನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡು ಗ್ರಾಮದ ರಸ್ತೆಯಲ್ಲಿ ಓಡಾಡಿ ಜನರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Snake – ಪ್ರಾಣ ಕಳೆದುಕೊಳ್ಳುವ ಹುಚ್ಚಾಟ

ವಿಡಿಯೋದಲ್ಲಿ ಕಂಡುಬರುವಂತೆ, ಆ ವ್ಯಕ್ತಿ ಹಾವನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡು “ನೀನು ನನ್ನ ಕಚ್ಚುತ್ತೀಯಾ?” ಎಂದು ಜೋರಾಗಿ ಕೂಗುತ್ತಾ ರಸ್ತೆಯಲ್ಲಿ ಜನರ ಮೇಲೆ ಹಾವನ್ನು ಬಿಸಾಕಲು ಪ್ರಯತ್ನಿಸಿದ್ದಾನೆ. ಆ ಕುಡುಕನ ಈ ಹುಚ್ಚಾಟದಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read this also : ಈತನಿಗೆ ಹಾವನ್ನು ಕಂಡ್ರೆ ಕಿಂಚಿತ್ತು ಭಯ ಇಲ್ಲ ಅನ್ಸುತ್ತೆ, ಬರೀಗೈಲಿ ಹಾವು ಹಿಡಿದ ಬಾಲಕ, ವಿಡಿಯೋ ವೈರಲ್…!

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here

Drunk man in Andhra Pradesh wraps snake around his neck, bitten twice – viral video from Konaseema

Snake – ರಕ್ಷಿಸಲು ಬಂದವರಿಗೇ ಹಾವಿನ ಬೆದರಿಕೆ!

ಆ ವ್ಯಕ್ತಿ ಪ್ರಾಣ ತೆಗೆಯುವಂತಹ ಈ ಸಾಹಸ ಮಾಡುತ್ತಿರುವಾಗಲೇ ಹಾವು ಆತನನ್ನು ಮತ್ತೊಮ್ಮೆ ಕಚ್ಚಿದೆ. ಆ ನಂತರ, ಗ್ರಾಮಸ್ಥರು ಹಾವನ್ನು ಆತನಿಂದ ಕಿತ್ತುಕೊಂಡು ಕೊಂದು, ಆ ಕುಡುಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವರದಿಯಾಗಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular