ಭಾರತದ ಅಖಂಡತೆಗಾಗಿ ಮತ್ತು ಕಾಶ್ಮೀರದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಮಹಾನ್ ಚೇತನ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ (Dr Shyama Prasad Mukherjee) ಅವರ ತ್ಯಾಗ ಮತ್ತು ಬಲಿದಾನ ಇಂದಿನ ಯುವ ಪೀಳಿಗೆಗೆ ದೇಶಪ್ರೇಮದ ಸ್ಫೂರ್ತಿಯಾಗಿದೆ, ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು ಅವರು ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಬಿಜೆಪಿ ತಾಲೂಕು ಘಟಕ ಹಾಗೂ ಮಾನವ ವಿಕಾಸ ಸಮಿತಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಜನಸಂಘದ ಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Dr Shyama Prasad Mukherjee- ಕಾಶ್ಮೀರ ಉಳಿಸಿದ ಕೀರ್ತಿ ಮುಖರ್ಜಿ ಅವರಿಗೆ ಸಲ್ಲುತ್ತದೆ
ಕೈಜಾರಿ ಹೋಗುತ್ತಿದ್ದ ಕಾಶ್ಮೀರವನ್ನು ರಕ್ಷಿಸಿದ ಕೀರ್ತಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಸಲ್ಲುತ್ತದೆ. 1950ರ ದಶಕದಲ್ಲಿ ಕಾಶ್ಮೀರ ರಕ್ಷಣಾ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಅವರು, ಒಂದೇ ದೇಶದಲ್ಲಿ ಎರಡು ಸಂವಿಧಾನ ಮತ್ತು ಎರಡು ಧ್ವಜಗಳು ಇರಲು ಸಾಧ್ಯವಿಲ್ಲ” ಎಂದು ಸಾರುತ್ತಾ (Dr Shyama Prasad Mukherjee) ಅಂದಿನ 370ನೇ ವಿಧಿಯನ್ನು ಧಿಕ್ಕರಿಸಿ ಕಾಶ್ಮೀರ ಪ್ರವೇಶಿಸಿದರು.
ದೇಶದ ಅಖಂಡತೆ ಮತ್ತು ಪ್ರಗತಿಗಾಗಿ ತಮ್ಮ ಜೀವನವನ್ನೇ ಸವೆಸಿದ ಮುಖರ್ಜಿ ಅವರು, ಇಂದಿನ ಯುವ ಸಮೂಹದಲ್ಲಿ ರಾಷ್ಟ್ರಪ್ರೇಮದ ಕಿಚ್ಚನ್ನು ಹಚ್ಚುವಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವವಾಗಿದ್ದಾರೆ. ಬಂಗಾಳ ವಿಭಜನೆ ಸಂದರ್ಭದಲ್ಲೂ ಭಾರತದ ಹಕ್ಕು ಮತ್ತು ಹಿತಾಸಕ್ತಿ ಪರ ಯಶಸ್ವಿ (Dr Shyama Prasad Mukherjee) ಹೋರಾಟ ನಡೆಸಿದ್ದರು. ಸ್ವಾತಂತ್ರ್ಯಾನಂತರದಲ್ಲೂ ಭಾರತೀಯರ ಮೇಲೆ ಆಮದು ಸಿದ್ಧಾಂತ ಮತ್ತು ತತ್ವಗಳನ್ನು ಹೇರುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವುದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ತುಷ್ಟೀಕರಣ ರಾಜಕಾರಣದ ವಿರುದ್ಧ ವಾಗ್ದಾಳಿ
ಇಂದು ಅವರ ಹಾದಿಯಲ್ಲಿ ನಮ್ಮ ನರೇಂದ್ರ ಮೋದಿ ಹಾಗೂ ಅಮಿತ್ ಷಾ ರವರು ಸೇರಿದಂತೆ ನಮ್ಮ ಎನ್.ಡಿ.ಎ ಕೂಟ ದೇಶವನ್ನು ಉತ್ತಮ ರೀತಿಯಲ್ಲಿ ಮುನ್ನೆಡೆಸುತ್ತಿದ್ದಾರೆ. ಇಂದಿಗೂ ಸಹ ಅನೇಕರು ಹಿಂದುತ್ವವನ್ನು ಒಡೆಯಲು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. (Dr Shyama Prasad Mukherjee) ಅದರಲ್ಲೂ ಕಾಂಗ್ರೇಸ್ ಪಕ್ಷ ಇತರೆ ಸಮುದಾಯಗಳಿಗೆ ಕೊಡುವಷ್ಟು ಪ್ರಾಮುಖ್ಯತೆ ಹಿಂದೂ ಸಮಾಜಕ್ಕೆ ಕೊಡುವುದಿಲ್ಲ. ಕಾಂಗ್ರೇಸ್ಸಿನ ಮುಸ್ಲಿಂ ತುಷ್ಟೀಕರಣವನ್ನು ವಿರೋಧಿಸಿದ್ದ ಶ್ಯಾಮ ಪ್ರಸಾದ್ ಮುಖರ್ಜಿ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ರಾಜ್ಯ ಕಾಂಗ್ರೇಸ್ ಮುಸ್ಲಿಂ ತುಷ್ಠಿಕರಣವನ್ನು ವಿರೋಧಿಸಲು ಎಲ್ಲರೂ ಒಂದಾಗಬೇಕು.

ಈ ನಿಟ್ಟಿನಲ್ಲಿ ಆರ್.ಎಸ್.ಎಸ್. ವಿಶ್ವ ಹಿಂದೂ ಪರಿಷತ್, ಭಜರಂಗದಳ ಸಂಘಟನೆಗಳು ಮನೆ ಮನೆಗೆ ತೆರಳಿ ಹಿಂದುತ್ವದ ಮಹತ್ವ ಸಾರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಮತಷ್ಟು ವಿಜೃಂಭಣೆಯಿಂದ ಆಚರಿಸೋಣ ಎಂದರು. Read this also : ಅಮೂಲ್ಯ ಜೀವ ಉಳಿಸಲು ಹೆಲ್ಮೆಟ್ ಧರಿಸುವ ಅಭ್ಯಾಸ ರೂಢಿಸಿಕೊಳ್ಳಿ : ಸಿ. ಮುನಿರಾಜು
ಮೆರವಣಿಗೆ ಮತ್ತು ಸಮಾಜಮುಖಿ ಕಾರ್ಯ
ಇನ್ನೂ ಕಾರ್ಯಕ್ರಮದ ಅಂಗವಾಗಿ ಡೊಳ್ಳು ಕುಣಿತದ ವಾದ್ಯಗಳೊಂದಿಗೆ (Dr Shyama Prasad Mukherjee) ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ರವರ ಭಾವಚಿತ್ರವುಳ್ಳ ಪಲ್ಲಕಿಯೊಂದಿಗೆ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಅಂಬೇಡ್ಕರ್ ವೃತ್ತದ ಬಳಿ ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ಗಳನ್ನು ವಿತರಣೆ ಮಾಡಲಾಯಿತು. ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಗಂಗಿರೆಡ್ಡಿ, ಬಾಗೇಪಲ್ಲಿ ಅಧ್ಯಕ್ಷ ಪ್ರತಾಪ್, ಭಜರಂಗದಳದ ಜಿಲ್ಲಾ ಸಂಚಾಲಕ ಅಂಬರೀಶ್, ಮುಖಂಡರಾದ ಗಜನಾಣ್ಯ ನಾಗರಾಜ್, ಮಧುಸೂಧನ್, ನಾಗಭೂಷಣ್, ಸಿ.ಆರ್.ಮಂಜುನಾಥ್ ಸೇರಿದಂತೆ ಹಲವರು ಇದ್ದರು.
