Dog Attack in Indore – ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಜನಸಾಮಾನ್ಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬೀದಿಯಲ್ಲಿ ಓಡಾಡಲು ಹೆದರುವಂತಹ ವಾತಾವರಣ ಸೃಷ್ಟಿಯಾಗಿದೆ. ದೇಶದಲ್ಲಿ ಇದು ಗಂಭೀರ ಸಮಸ್ಯೆಯಾಗಿ ಬೆಳೆಯುತ್ತಿದ್ದು, ಇದಕ್ಕೆ ಪರಿಹಾರ ಹುಡುಕುವುದು ಅನಿವಾರ್ಯವಾಗಿದೆ.
Dog Attack in Indore – ಮಧ್ಯಪ್ರದೇಶದಲ್ಲಿ ನಾಯಿಗಳ ಡೆಡ್ಲಿ ಅಟ್ಯಾಕ್!
ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಇಂತಹದ್ದೇ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬೆಳಗಿನ ಜಾವ ಕಾಲೇಜಿಗೆ ತೆರಳುತ್ತಿದ್ದ ಯುವತಿಯೊಬ್ಬರ ಮೇಲೆ ನಾಲ್ಕೈದು ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಅದೃಷ್ಟವಶಾತ್, ತನ್ನ ಸ್ನೇಹಿತೆಯ ಸಹಾಯದಿಂದ ಆ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಘಟನೆಯ ಭಯಾನಕ ದೃಶ್ಯ ವೈರಲ್ ಆಗಿದ್ದು, ನಾಯಿಗಳ ಹಾವಳಿಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.
Dog Attack in Indore – ನಾಯಿಗಳ ಹಿಂಡಿನಿಂದ ವಿದ್ಯಾರ್ಥಿನಿಗೆ ಗಂಭೀರ ಗಾಯ
ಇಂದೋರ್‌ನ ರಸ್ತೆಯೊಂದರಲ್ಲಿ ಬೆಳಗ್ಗೆ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಾಯಿಗಳ ಗುಂಪೊಂದು ದಾಳಿ ನಡೆಸಿದೆ. ಪರೀಕ್ಷೆ ಇದ್ದ ಕಾರಣ ಆಕೆ ಬೇಗನೆ ಕಾಲೇಜಿಗೆ ಹೊರಟಿದ್ದಳು. ಈ ವೇಳೆ ನಾಯಿಗಳು ಆಕೆಯ ಮೇಲೆ ಎರಗಿವೆ. ಒಮ್ಮೆ ದಾಳಿ ಮಾಡಿ ಬಿಟ್ಟರೂ, ಮತ್ತೆರಡು ಬಾರಿ ಆಕೆಯ ಮೇಲೆ ಎರಗಲು ಯತ್ನಿಸಿವೆ. ನಾಯಿಗಳ ದಾಳಿಯಿಂದ ಆಕೆ ಕೆಳಗೆ ಬಿದ್ದು ಕಿರುಚಿದ್ದಾಳೆ. ಅದೃಷ್ಟವಶಾತ್, ಆಕೆಯ ಸ್ನೇಹಿತೆ ಸಮಯಕ್ಕೆ ಸರಿಯಾಗಿ ಬಂದು ಆಕೆಯನ್ನು ರಕ್ಷಿಸಿದ್ದಾಳೆ. ಈ ದಾಳಿಯಿಂದ ಯುವತಿಗೆ ತೀವ್ರ ಗಾಯಗಳಾಗಿವೆ. ಕೂಡಲೇ ಸ್ಥಳೀಯರ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Read this also : Viral Video : ಪವಾಡಸದೃಶ: ಕಾರಿನಡಿ ಸಿಲುಕಿದರೂ ಜೀವಂತವಾಗಿ ಹೊರಬಂದ ಪುಟ್ಟ ಕಂದಮ್ಮ..!
ವೈರಲ್ ಆದ ವಿಡಿಯೋ: ಜನರ ಆತಂಕ ಹೆಚ್ಚಿಸಿದ ಘಟನೆ
ಈ ದಾಳಿಯ ವಿಡಿಯೋವನ್ನು ‘Incognito’ ಎಂಬ ಎಕ್ಸ್ (X) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಗಳು ಯುವತಿಯ ಮೇಲೆ ದಾಳಿ ಮಾಡುವ ದೃಶ್ಯವನ್ನು ಸ್ಪಷ್ಟವಾಗಿ ಕಾಣಬಹುದು. ಯುವತಿ ಅಪಾಯದಿಂದ ಪಾರಾಗಿದ್ದಾರೆ ಎಂದುಕೊಳ್ಳುವಷ್ಟರಲ್ಲಿ ಮತ್ತೆ ನಾಯಿಗಳು ದಾಳಿ ಮಾಡಲು ಬಂದಿದ್ದು, ಆ ಸಮಯದಲ್ಲಿ ಇನ್ನೊಬ್ಬ ಕಾಲೇಜು ಯುವತಿ ಆಕೆಯ ರಕ್ಷಣೆಗೆ ಧಾವಿಸಿದ್ದಾಳೆ.
Viral Video : Click here
ಈ ವಿಡಿಯೋವನ್ನು ಜುಲೈ 15 ರಂದು ಹಂಚಿಕೊಳ್ಳಲಾಗಿದ್ದು, ಈಗಾಗಲೇ 7.8 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಮತ್ತು ನೂರಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಈ ಘಟನೆ ಕುರಿತು ಹಲವರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, “ಈ ಸ್ಥಳದಲ್ಲಿ ಚಿಕ್ಕ ಮಕ್ಕಳಿದ್ದರೆ ಈ ನಾಯಿಗಳು ಪ್ರಾಣವನ್ನೇ ಕಸಿದುಕೊಳ್ಳುತ್ತಿದ್ದವು” ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಬೆಂಗಳೂರಿನಲ್ಲಿಯೂ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಬಿಬಿಎಂಪಿ ಲಸಿಕೆ ಮತ್ತು ಸಂತಾನ ಹರಣ ಶಸ್ತ್ರಚಿಕಿತ್ಸೆ ಬದಲು ನಾಯಿಗಳಿಗೆ ಚಿಕನ್ ಊಟ ನೀಡುವ ಯೋಜನೆ ಆರಂಭಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.