ಬಿಜೆಪಿಯವರು ನನ್ನ ಹಾಗೂ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ದ ಶತ್ರು ಭೈರವಿ ಯಾಗ ಮಾಡಿಸುತ್ತಿದ್ದಾರೆ. ನಮ್ಮ ಸರ್ಕಾರವನ್ನು ನಾಶ ಮಾಡಬೇಕೆಂದು ಅಘೋರಿಗಳ ಮೊರೆಹೋಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ರಾಜರಾಜೇಶ್ವರಿ ದೇಗುಲದಲ್ಲಿ ಯಾಗ ನಡೀತಿದೆ. 21 ಮೇಕೆ, 3 ಎಮ್ಮೆ, 21 ಕುರಿಗಳು ಸೇರಿದಂತೆ ಪಂಚ ಬಲಿ ಕೊಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಶಿವಕುಮಾರ್ ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರು ನನ್ನ ಹಾಗೂ ಸಿದ್ದರಾಮಯ್ಯ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ಮಾಡಿಸುತ್ತಿದ್ದಾರೆ. ಇದಕ್ಕಾಗಿ ಕುರಿ, ಹಂದಿ ಬಲಿ ಕೊಡುವ ಕಾರ್ಯ ಕೂಡ ನಡೆದಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಕೇರಳದ ರಾಜರಾಜೇವರಿ ದೇವಸ್ಥಾನದ ಆಸುಪಾಸಿನಲ್ಲಿ ಈ ಶತ್ರು ಭೈರವಿಯಾಗ ನಡೆಯುತ್ತಿದೆ. ಸರ್ಕಾರ ನಾಶ ಮಾಡಬೇಕು ಅಂತಾ ಅಘೋರಿಗಳ ಮೊರೆ ಹೋಗಿದ್ದಾರೆ. ಅದಕ್ಕಾಗಿ ಹಂಚಿ, ಕುರಿಗಳನ್ನು ಬಲಿ ಕೊಡುತ್ತಿದ್ದಾರೆ. ಇದನ್ನೆಲ್ಲಾ ಯಾರು ಮಾಡಿಸುತ್ತಿದ್ದಾರೆ ಅಂತಾನೂ ಗೊತ್ತಿದೆ. ಅವರ ನಂಬಿಕೆ ಅವರು ಮಾಡಲಿ. ನಾವು ನಂಬಿದ ದೇವರು ನಮ್ಮನ್ನು ಕಾಪಾಡುತ್ತದೆ ಎಂದು ಡಿ.ಕೆ.ಶಿ ಶಿವಕುಮಾರ್ ಹೇಳಿದ್ದಾರೆ.
ಇನ್ನೂ ಈ ಶತ್ರು ಸಂಹಾರ ಯಾಗವನ್ನು ರಾಜ್ಯದ ಪ್ರಭಾವಿ ರಾಜಕಾರಣಿಯೊಬ್ಬರು ಮಾಡಿಸಿದ್ದಾರೆ ಎಂದು ಡಿಕೆಶೀ ಆರೋಪಿಸಿದ್ದಾರೆ. ಕೇರಳದಲ್ಲಿ ಭಾಗಿಯಾಗಿದ್ದವರೊಬ್ಬರು ನಮಗೆ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ. ಆದರೆ ಅವರು ಜೆಡಿಎಸ್ ನವರೇ ಅಥವಾ ಬಿಜೆಪಿಯವರೇ ಎಂಬ ಪ್ರಶ್ನೆಗೆ ಉತ್ತರ ನೀಡಲು ಡಿಕೆಶಿ ನಿರಾಕರಿಸಿದ್ದಾರೆ. ಬಳಿಕ ಮಾದ್ಯಮದವರು ನೀವು ಇದನ್ನೆಲ್ಲಾ ನಂಬ್ತೀರಾ ಎಂದು ಪ್ರಶ್ನೆ ಮಾಡಿದರೇ ಅದಕ್ಕೆ ಉತ್ತರಿಸಿದ ಡಿಕೆಶಿ ನಂಬಿಕೆ ಅವರಿಗಿದೆ. ಅದನ್ನು ಮಾಡಬೇಡಿ ಅಂತಾ ನಾವ್ಯಾಕೆ ಹೇಳಬೇಕು. ಅವರು ಏನೇ ಮಾಡಲಿ ನಾವು ನಂಬುವ ಶಕ್ತಿ ನಮ್ಮನ್ನು ಕಾಪಾಡುತ್ತದೆ ಎಂದರು. ಇನ್ನೂ ರಾಜ ಕಂಟಕ, ಮಾರಣ ಮೋಹನ ಸ್ತಂಭನ ಕುರಿತ ಯಾಗದ ಬಗ್ಗೆ ಸಹ ಡಿಕೆಶಿ ರವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಲಾಗಿದೆ. ಕೇರಳದ ನಿರ್ಜ ಸ್ಥಳದಲ್ಲಿ ಮಹಾಯಾಗ ನಡೆಯುತ್ತಿದೆ. ಅಘೋರಿಗಳಿಂದ ಯಾಗ ನಡೆಯುತ್ತಿದ್ದು, ಇದರಿಂದ ರಾಜಕಂಟಕವಾಗುವ ಸಾಧ್ಯತೆಯಿದೆ ಎಂದು ಡಿ.ಕೆ.ಶಿವಕುಮಾರ್ ರವರಿಗೆ ಎಚ್ಚರಿಕೆಯಿಂದ ಇರಲು ಸಹ ಕೇರಳದ ಕೆಲ ತಂತ್ರವಾದಿಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.