Thailand – ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಸಣ್ಣಪುಟ್ಟ ಕಾರಣಗಳಿಗೂ ಸಂಬಂಧಗಳು ಮುರಿದುಬೀಳುತ್ತಿವೆ. ಇದರಿಂದ ಜೀವನ ಹಾಳು ಮಾಡಿಕೊಂಡವರ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಆದರೆ ಇಲ್ಲೊಂದು ಘಟನೆ ಸ್ವಲ್ಪ ವಿಚಿತ್ರ. ವಿಚ್ಛೇದನದ ನೋವಿನಲ್ಲಿ ಒಬ್ಬ ವ್ಯಕ್ತಿ ಅನ್ನ-ನೀರು ಬಿಟ್ಟು ಕೇವಲ ಬಿಯರ್ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಥೈಲ್ಯಾಂಡ್‌ನ ಬಾನ್ ಚಾಂಗ್ ಜಿಲ್ಲೆಯಲ್ಲಿ ನಡೆದಿದೆ.
Thailand – ಥೈಲ್ಯಾಂಡ್‌ನಲ್ಲಿ ದುರಂತ: ಒಂದು ತಿಂಗಳು ಬಿಯರ್ ಮಾತ್ರ ಸೇವಿಸಿ ಸಾವು
ಥವೀಸಕ್ ನಮ್ವೊಂಗ್ಸಾ ಎಂಬ 44 ವರ್ಷದ ವ್ಯಕ್ತಿ, ವಿಚ್ಛೇದನದ ನೋವಿನಲ್ಲಿ ಒಂದು ತಿಂಗಳ ಕಾಲ ಅನ್ನ-ನೀರು ತ್ಯಜಿಸಿ ಕೇವಲ ಬಿಯರ್ ಮಾತ್ರ ಕುಡಿದು ತನ್ನ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ನಿಜಕ್ಕೂ ಹೃದಯ ವಿದ್ರಾವಕ. ನಮ್ವೊಂಗ್ಸಾ, ತನ್ನ ಪತ್ನಿಯಿಂದ ಬೇರ್ಪಟ್ಟ ನಂತರ ತನ್ನ 16 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದರು. ಮಗ ಪ್ರತಿದಿನ ಬಿಸಿಬಿಸಿಯಾದ ಊಟ ಸಿದ್ಧಪಡಿಸುತ್ತಿದ್ದರೂ, ನಮ್ವೊಂಗ್ಸಾ ಊಟ ಮುಟ್ಟುತ್ತಿರಲಿಲ್ಲವಂತೆ. ಬದಲಿಗೆ, ಪ್ರತಿದಿನ ಬಿಯರ್ ಬೇಕೆಂದು ಮಗನಿಗೆ ತಿಳಿಸುತ್ತಿದ್ದರು ಎಂದು ಮಗ ಪೊಲೀಸರಿಗೆ ತಿಳಿಸಿದ್ದಾನೆ.
ಒಂದು ದಿನ ಮಗ ಶಾಲೆಗೆ ಹೋಗಿ ಬಂದಾಗ ನಮ್ವೊಂಗ್ಸಾ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣ ಸಿಯಾಮ್ ರೇಯಾಂಗ್ ಫೌಂಡೇಶನ್‌ನ ಅರೆವೈದ್ಯಕೀಯ ಸಿಬ್ಬಂದಿಯನ್ನು ಕರೆಸಲಾಯಿತು. ಆದರೆ ಅವರು ಬರುವಷ್ಟರಲ್ಲಿ ನಮ್ವೊಂಗ್ಸಾ ಈಗಾಗಲೇ ಸಾವನ್ನಪ್ಪಿದ್ದರು.
Read this also : ಉತ್ತರ ಪ್ರದೇಶದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ, ದೇಹದ ಮೇಲೆ ಡೆತ್‌ನೋಟ್ ಬರೆದು ಆತ್ಮಹತ್ಯೆ…!
Thailand – ಕೋಣೆಯಲ್ಲಿ ನೂರಕ್ಕೂ ಹೆಚ್ಚು ಖಾಲಿ ಬಿಯರ್ ಬಾಟಲಿಗಳು!
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ನಮ್ವೊಂಗ್ಸಾ ಅವರ ಕೋಣೆಯಲ್ಲೆಲ್ಲಾ ನೂರಕ್ಕೂ ಹೆಚ್ಚು ಖಾಲಿ ಬಿಯರ್ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೋಣೆಯಲ್ಲಿ ಕಾಲಿಡಲು ಸಹ ಸ್ಥಳವಿರಲಿಲ್ಲ, ಅಷ್ಟೊಂದು ಬಾಟಲಿಗಳು ತುಂಬಿದ್ದವು. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅತಿಯಾದ ಮದ್ಯ ಸೇವನೆಯಿಂದಲೇ ನಮ್ವೊಂಗ್ಸಾ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೂ, ಸಾವಿಗೆ ಅಧಿಕೃತ ಕಾರಣವನ್ನು ಇನ್ನೂ ದೃಢಪಡಿಸಿಲ್ಲ. ಈ ವಾರದ ಕೊನೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.