ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿನ ಗ್ರಾಮ ದೇವತೆಗಳಾದ ಒಡ್ಡೆಮ್ಮ, ಮುತ್ಯಾಲಮ್ಮ ಹಾಗೂ ಸಪ್ಪಲಮ್ಮ ದೇವರಿಗೆ ಉತ್ತಮ ಬೆಳೆಗಾಗಿ ಹರಿಸಿ ತಂಬಿಟ್ಟು ದೀಪಗಳ ಜಾತ್ರಾ ಮಹೋತ್ಸವವನ್ನು (Devotional Events) ಅದ್ದೂರಿಯಾಗಿ ನರವೇರಿಸಲಾಯಿತು.
ಪ್ರತೀ ವರ್ಷದಂತೆ ಈ ಬಾರಿಯೂ ಸಹ (Devotional Events) ಗ್ರಾಮದೇವತೆಗಳ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತ್ತು. ಈ ಬಾರಿ ಉತ್ತಮ ಮಳೆ ಬಂದು ಉತ್ತಮ ಬೆಳೆಗಳು ಬಂದು ರೈತರು ಸೇರಿದಂತೆ ಎಲ್ಲರೂ ಸುಖ ಸಮೃದ್ದಿ ಹಾಗು ಆರೋಗ್ಯಕರವಾದ ಜೀವನ ಸಾಗಿಸಲಿ ಎಂದು ಗ್ರಾಮ ದೇವತೆಯಲ್ಲಿ (Devotional Events) ಪ್ರಾರ್ಥನೆ ಮಾಡಿಕೊಂಡರು. ಮಹಿಳೆಯರು ಬೆಳಿಗಿನಿಂದಲೇ ತಂಬಿಟ್ಟು ದೀಪಗಳನ್ನು ತಯಾರಿಸಿ, ಶ್ರದ್ದಾ ಭಕ್ತಿಯಿಂದ ಹಾಗೂ ವೈಭವದಿಂದ ದೇವರಲ್ಲಿ ಹರಕೆ ತೀರಿಸಿಕೊಂಡರು. (Devotional Events) ವಿವಿಧ ಹೂವುಗಳಿಂದ ಸಿಂಗರಿಸಿದ ತಂಬಿಟ್ಟು ದೀಪಗಳನ್ನು ಹೊತ್ತು ಗುಡಿಬಂಡೆ ಪಟ್ಟಣದಲ್ಲಿ ಮೆರವಣಿಗೆ ಹೊರಟ್ಟಿದ್ದು ಎಲ್ಲರ ಗಮನ ಸೆಳೆಯಿತು.
ಪಟ್ಟಣದ ಹೊರವಲಯದ (Devotional Events) ಅಮಾನಿಬೈರಸಾಗರ ಕೆರೆಯ ಬಳಿಯಿರುವ ಒಡ್ಡೆಮ್ಮ, ಬಾಪೂಜಿನಗರದಲ್ಲಿರುವ ಸಪ್ಪಲಮ್ಮ ಹಾಗೂ 9ನೇ ವಾರ್ಡಿನ ಮುತ್ಯಾಲಮ್ಮ ದೇವರಿಗೆ ತಂಬಿಟ್ಟು ದೀಪಗಳನ್ನು ಬೆಳಗಿ ಈ ಬಾರಿ ಉತ್ತಮ ಮಳೆ ಬೆಳೆ ಆಗಲಿ ಎಂದು ಶ್ರದ್ದಾ ಭಕ್ತಿಯಿಂದ ದೇವರಲ್ಲಿ ಪ್ರಾರ್ಥಿಸಿದರು. ಈ ಜಾತ್ರಾ (Devotional Events) ಮಹೋತ್ಸವದ ನೇತೃತ್ವವನ್ನು ವಾರ್ಡ್‌ಗಳ ಮುಖಂಡರಾದ ವೆಂಕಟೇಶ್, ಕೃಷ್ಣಮೂರ್ತಿ, ಶ್ರೀಕಾಂತ್, ಸಂಜಯ್, ರಾಮಾಂಜಿ, ಮಂಜುನಾಥ್, ಗಿರೀಶ್, ಅಜಯ್ ಸೇರಿದಂತೆ ಅನೇಕರು ವಹಿಸಿಕೊಂಡಿದ್ದರು.