Devotee – ಪುರಾಣಗಳಲ್ಲಿ, ಕೆಲವೊಂದು ಸಿನೆಮಾಗಳಲ್ಲಿ ಭಕ್ತ ಕನ್ನಪ್ಪ ನ ಕಥೆಯನ್ನು ತೋರಿಸಿರುತ್ತಾರೆ. ಅದರ ಬಗ್ಗೆ ಬಹುತೇಕರು ಕೇಳಿಯೇ ಇರುತ್ತಾರೆ. ಶಿವನಿಗೆ ತನ್ನ ಕಣ್ಣುಗಳನ್ನೇ ದಾನ ಮಾಡಿದ ಮಹಾನ್ ಭಕ್ತನೇ ಈ ಭಕ್ತ ಕನ್ನಪ್ಪ. ಅದೇ ರೀತಿಯ ಇಲ್ಲೊಬ್ಬ ಬಾಲಕಿ ಭಕ್ತಿ ಹೆಚ್ಚಾಗಿ ತನ್ನ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಕೊಟ್ಟಿದ್ದಾಳೆ. ಕಳೆದ 2024 ರಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಅಂದಹಾಗೆ ಈ ಘಟನೆ ಛತ್ತಿಸ್ ಘಡ್ ರಾಜ್ಯದ ಶಕ್ತಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ ಎನ್ನಲಾಗಿದೆ.
ಛತ್ತಿಸ್ ಘಡ್ ರಾಜ್ಯದ ಶಕ್ತಿ ಜಿಲ್ಲೆಯ ಗ್ರಾಮವೊಂದರಲ್ಲಿ 11 ನೇ ತರಗತಿಯಲ್ಲಿ ಓದುತ್ತಿರುವ ಓರ್ವ ವಿದ್ಯಾರ್ಥಿನಿ ಯಾರೂ ಊಹಿಸಿದ ಕೆಲಸ ಮಾಡಿದ್ದಾಳೆ. ತನ್ನ ಮೌಡ್ಯತೆಯ ಭಕ್ತಿಯಿಂದ ತನ್ನ ನಾಲಿಗೆಯನ್ನು ಕತ್ತರಿಸಿ ಶಿವನ ಲಿಂಗಕ್ಕೆ ಅರ್ಪಿಸಿದ್ದಾಳೆ. ಬಳಿಕ ಆಕೆ ಧ್ಯಾನದಲ್ಲಿ ಮುಳುಗಿದ್ದಾಳೆ. ಧ್ಯಾನ ಮಾಡೋಕೆ ದೇವಾಲಯದೊಳಗೆ ಹೋದವಳು ಒಳಗಿನಿಂದ ಬಾಗಿಲಿಗೆ ಬೀಗ ಹಾಕಿಕೊಂಡಿದ್ದಾಳೆ. ಎರಡು ದಿನಗಳ ಕಾಲ ತನ್ನ ಧ್ಯಾನಕ್ಕೆ ಯಾರಾದರೂ ಅಡ್ಡಿ ಪಡಿಸಿದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದಳಂತೆ. ಇನ್ನೂ ಏನು ಮಾಡಬೇಕೆಂದು ತಿಳಿಯದೇ ಎಲ್ಲರೂ ದೇವಾಲಯದ ಸುತ್ತಲೂ ಸೇರಿದರು. ಜಿಲ್ಲಾ ಯಂತ್ರಾಂಗದ ಜೊತೆಗೆ ಪೊಲೀಸರೂ ಸಹ ಘಟನಾ ಸ್ಥಳಕ್ಕೆ ದಾವಿಸಿದ್ದಾರೆ. ಆದರೆ ಬಾಲಕಿ ಏನಾದರೂ ಅನಾಹುತ ಮಾಡಿಕೊಳ್ಳಬಹುದು ಎಂಬ ಭಯದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ದೇವಾಲಯದೊಳಗೆ ಬಾರದಂತೆ ತಡೆದಿದ್ದಾರೆ ಎನ್ನಲಾಗಿದೆ.
ಅದೃಷ್ಟವಶಾತ್ ಹೇಗೋ ಬಾಲಕಿಯನ್ನು ಹೊರಗೆ ಕರೆತಂದ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಬಾಲಕಿಯ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದ್ದು, ಸದ್ಯ ಆಕೆ ಊಟ ಸೇವನೆ ಮಾಡುತ್ತಿದ್ದಾಳಂತೆ. ಆಕೆಯ ಆರೋಗ್ಯ ಸುಧಾರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೂ ಅದಾಗಲೇ ಈ ಸುದ್ದಿ ಸೋಷಿಯಲ್ ಮಿಡಿಯಾ ತುಂಭಾ ಹರಿದಾಡ ತೊಡಗಿದೆ. ಅನೇಕರು ತಮ್ಮದೇ ಶೈಲಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಬಾಲಕಿಗೆ ಭಕ್ತಿಯ ಪರಾಕಾಷ್ಟೆ ಮಿತಿಮಿರೀದೆ ಎಂದು ಅನೇಕರು ಕಾಮೆಂಟ್ಸ್ ಹರಿಬಿಡುತ್ತಿದ್ದಾರೆ. ಜತೆಗೆ ಬಾಲಕಿಗೆ ಕೌನ್ಸಲಿಂಗ್ ಕೊಡಿಸಬೇಕೆಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.