ನಮ್ಮ ಜೀವನದ ಕೆಲವು ಪ್ರಯಾಣಗಳು ಕೇವಲ ಸ್ಥಳಗಳನ್ನು ನೋಡುವುದಕ್ಕೆ ಸೀಮಿತವಾಗಿರುವುದಿಲ್ಲ, ಅವು ನೆನಪಿನ ಬುತ್ತಿಯಲ್ಲಿ ಶಾಶ್ವತವಾಗಿ ಉಳಿದುಬಿಡುತ್ತವೆ. ಅಂತಹದ್ದೇ ಒಂದು ಮನಮುಟ್ಟುವ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ದೆಹಲಿಯ ಆಟೋ ಚಾಲಕ (Auto Driver) ಮತ್ತು ವಿದೇಶಿ ಪ್ರವಾಸಿಗರ ನಡುವೆ ನಡೆದ ಈ ಸುಂದರ ಸಂಭಾಷಣೆ ಮತ್ತು ಅವರ ಸ್ನೇಹದ ವಿಡಿಯೋ ಈಗ ಪ್ರತಿಯೊಬ್ಬರ ಮುಖದಲ್ಲೂ ನಗು ಮೂಡಿಸುತ್ತಿದೆ.

Auto Driver – ಯಾರೀ ಆಟೋ ಚಾಲಕ? ಏನಿದು ಸ್ಟೋರಿ?
ಇತ್ತೀಚೆಗೆ ಪ್ರಸಿದ್ಧ ಟ್ರಾವೆಲ್ ವ್ಲಾಗರ್ ಕುರ್ ಕೆಲಿಯಾಜಾ ಉಗ್ನೆ ಅವರು ತಮ್ಮ ತಂಡದೊಂದಿಗೆ ದೆಹಲಿಗೆ ಭೇಟಿ ನೀಡಿದ್ದರು. ಇಂಡಿಯಾ ಗೇಟ್ ಸಮೀಪ ಅವರಿಗೆ ಮಿಷ್ಟರ್ ಮೂಲ್‌ಚಂದ್ ಎಂಬ ಆಟೋ ಚಾಲಕ ಪರಿಚಯವಾದರು. ಸಾಮಾನ್ಯವಾಗಿ ಪ್ರವಾಸಿಗರನ್ನು ಕಂಡರೆ ಮುಗಿಬೀಳುವವರ ನಡುವೆ, ಮೂಲ್‌ಚಂದ್ ಅವರ ವಿನಯವಂತಿಕೆ ಮತ್ತು ಮೃದು ಸ್ವಭಾವ ಈ ಪ್ರವಾಸಿಗರ ಮನಗೆದ್ದಿದೆ. “ಅವರು ನಮ್ಮನ್ನು ಬಲವಂತ ಮಾಡಲಿಲ್ಲ, ಅವರ ಮಾತು ತುಂಬಾ ಗೌರವಯುತವಾಗಿತ್ತು” ಎಂದು ವ್ಲಾಗರ್ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಚಾಲಕನನ್ನೇ ಅತಿಥಿಯನ್ನಾಗಿ ಮಾಡಿಕೊಂಡ ಪ್ರವಾಸಿಗರು!
ಪ್ರಯಾಣದ ಅವಧಿಯಲ್ಲಿ ಈ ವಿದೇಶಿ ತಂಡ ಮತ್ತು ಮೂಲ್‌ಚಂದ್ ನಡುವೆ ಸಾಕಷ್ಟು ಮಾತುಕತೆ ನಡೆಯಿತು. ಹರಟೆ, ನಗು ಮತ್ತು ಕಥೆಗಳ ನಡುವೆ ಒಂದು ವಿಚಾರ ಪ್ರವಾಸಿಗರಿಗೆ ತಿಳಿಯಿತು. ಅದೇನೆಂದರೆ, ದೆಹಲಿಯಲ್ಲೇ ಆಟೋ ಓಡಿಸುತ್ತಿದ್ದರೂ (Auto Driver) ಮೂಲ್ ಚಂದ್ ಅವರು ಅಲ್ಲಿನ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳನ್ನು (ಉದಾಹರಣೆಗೆ ಲೋಟಸ್ ಟೆಂಪಲ್) ಹತ್ತಿರದಿಂದ ನೋಡಿಯೇ ಇರಲಿಲ್ಲ!
ತಕ್ಷಣವೇ ದೊಡ್ಡ ಮನಸ್ಸು ಮಾಡಿದ ವ್ಲಾಗರ್ ತಂಡ, “ದಯವಿಟ್ಟು ನಮ್ಮೊಂದಿಗೆ ಬನ್ನಿ, ಇವತ್ತು ನೀವು ನಮ್ಮ ಅತಿಥಿ” ಎಂದು ಆಹ್ವಾನಿಸಿದರು. ಆ ದಿನ ಆಟೋ ಚಾಲಕ ಮೂಲ್‌ಚಂದ್ ಅವರು ಕೇವಲ ಚಾಲಕನಾಗಿ ಉಳಿಯಲಿಲ್ಲ, ಬದಲಿಗೆ ಆ ತಂಡದ ಒಬ್ಬ ಸದಸ್ಯನಾಗಿ ಲೋಟಸ್ ಟೆಂಪಲ್ ಸೇರಿದಂತೆ ಹಲವು ಉದ್ಯಾನವನಗಳನ್ನು ಸುತ್ತಾಡಿದರು. Read this also : ಬೆಂಗಳೂರಲ್ಲಿ ಹೊಸ ವರ್ಷದ ಪಾರ್ಟಿ ಮಾಡೋ ಪ್ಲಾನ್ ಇದೆಯಾ? ಪೊಲೀಸರ ಈ ‘ಡೆಡ್ಲಿ’ ರೂಲ್ಸ್ ಮಿಸ್ ಮಾಡ್ಬೇಡಿ!
ಮನೆಗೆ ಕರೆದೊಯ್ದು ಆತಿಥ್ಯ ನೀಡಿದ ಚಾಲಕ
ಈ ಸ್ನೇಹ ಕೇವಲ (Auto Driver) ಸುತ್ತಾಟಕ್ಕೆ ನಿಲ್ಲಲಿಲ್ಲ. ಮೂಲ್‌ಚಂದ್ ಅವರು ಈ ವಿದೇಶಿ ಪ್ರವಾಸಿಗರನ್ನು ಪ್ರೀತಿಯಿಂದ ತಮ್ಮ ಮನೆಗೆ ಕರೆದೊಯ್ದು ತಮ್ಮ ಕುಟುಂಬವನ್ನು ಪರಿಚಯಿಸಿದರು. ಭಾರತೀಯರ ‘ಅತಿಥಿ ದೇವೋ ಭವ’ ಸಂಸ್ಕೃತಿಯನ್ನು ಅವರು ನಿಜವಾದ ಅರ್ಥದಲ್ಲಿ ತೋರಿಸಿಕೊಟ್ಟರು.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಸದ್ಯ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು (Auto Driver) ಮಾಡುತ್ತಿದ್ದು, ಸಾವಿರಾರು ಜನರು ಲೈಕ್ ಮಾಡಿದ್ದಾರೆ. “ಇಂತಹ ಮಾನವೀಯತೆ ಇಂದಿನ ಕಾಲದಲ್ಲಿ ತುಂಬಾ ಅಪರೂಪ” ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಮತ್ತೊಬ್ಬರು “ನಮ್ಮ ಭಾರತದ ಆತಿಥ್ಯಕ್ಕೆ ಇವರೇ ಸಾಕ್ಷಿ” ಎಂದು ಬಣ್ಣಿಸಿದ್ದಾರೆ.
