ಕರ್ನಾಟಕದ ಕಾಂಗ್ರೇಸ್ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ರವರಿಗೆ ಕೆಪಿಸಿಸಿ ಘಟಕದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಡಿಕೆಶಿ ಸರ್ಕಾರ ಒಂದು ಪೂರೈಸಿದ್ದು ಮುಖ್ಯವಲ್ಲ, ನಾಲ್ಕು ವರ್ಷಗಳಲ್ಲಿ ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿರುವುದು ಮುಖ್ಯ ಎಂದು ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದು ಒಂದು ವರ್ಷವಾಗಿದೆ. ಸರ್ಕಾರ ಒಂದು ವರ್ಷ ಪೂರೈಸಿದ್ದು ಮುಖ್ಯವಲ್ಲ ಬದಲಿಗೆ ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿರುವುದು ಮುಖ್ಯ. ಸದ್ಯ ಬಿಬಿಎಂಪಿ ಎಲೆಕ್ಷನ್ ಬಗ್ಗೆ ಚರ್ಚೆ ಬೇಡ. ಅದಕ್ಕಿನ್ನು ಟೈಮ್ ಇದೆ. ದಿವಂಗತ ರಾಜೀವ್ ಗಾಂಧಿ ರವರು ತಂದತಹ ತಿದ್ದುಪಡಿಯಿಂದಲೇ ಸ್ಥಳೀಯ ಸಂಸ್ಥೆಗಳಿಗೆ ಚುನಾವನೆ ನಡೆಯುತ್ತಿದೆ. ಅದಕ್ಕೆಲ್ಲಾ ತಯಾರಿ ಮಾಡಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದೇವಾ ಅಥವಾ ಸೋತಿದ್ದೇವಾ ಎಂಬುದು ಮುಖ್ಯವಲ್ಲ ಎಲ್ಲಾ ಲೀಡರ ಗಳು ಕ್ರೀಯಾಶೀಲವಾಗಿರಬೇಕು. ನಿಷ್ಕ್ರಿಯರಾದರೇ ಎಲ್ಲಾ ಸೆಲ್ ಗಳ ಲೀಡರ್ ಗಳನ್ನು ಡಿಸಾಲ್ಟ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದರು.
ನಮಗೆ ಬೂತ್ ಮಟ್ಟದಿಂದಲೇ ಲೀಡ್ ಕೊಡಬೇಕು, ಇಲ್ಲಾ ಯಾರೂ ಅಧಿಕಾರ ಬೇಕು ಅಂತಾ ಕೇಳಬಾರದು. ಖಾದಿ ಬಟ್ಟೆ, ಒಂದು ಖಾರ್ ಇಟ್ಕೊಂಡು ಎಂ.ಎಲ್.ಎ ಮಾಡಿ, ಎಂ.ಎಲ್.ಸಿ ಮಾಡಿ ಅಂದರೇ ಆಗೊಲ್ಲ, ತಮ್ಮ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಲೀಡ್ ಕೊಡಬೇಕು. ನೀವು ವಿಫಲರಾದರೇ ಹೊಸಬರನ್ನು ತಯಾರು ಮಾಡುತ್ತೇವೆ. ಮೊದಲು ನಿಮ್ಮ ಬೂತ್ ನಲ್ಲಿ ಪಕ್ಷದ ಸಂಘಟನೆ ಮಾಡಿ, ಬೂತ್ ಲೀಡ್ ಕೊಡಿಸಿ ಬಳಿಕ ನಾಯಕತ್ವ ಕೇಳಿ. ಬಿಳಿ ಜುಬ್ಬಾ, ಬಿಳಿ ಕಾರು ತೆಗೆದುಕೊಂಡು ಬಂದು ಅಧಿಕಾರ ಕೇಳೊದಲ್ಲ. ಮೊದಲು ಸಂಘಟನೆ ಮಾಡಿ ಇಲ್ಲಾ ಜಾಗ ಖಾಲಿ ಮಾಡಿ. ನಾವು ಹೊಸಬರನ್ನು ಬೆಳೆಸುತ್ತೇವೆ. ಇದೀಗ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೇನೆ. ಆದರೆ ಎಷ್ಟು ದಿನ ಇರ್ತೀನಿ ಅಂತಾ ಗೊತ್ತಿಲ್ಲ. ನಮ್ಮ ಪಕ್ಷದ ಅಡಿಪಾಯ ಮತಷ್ಟು ಗಟ್ಟಿ ಮಾಡಬೇಕು. ಬೂತ್ ಮಟ್ಟದಿಂದ ಪಕ್ಷವನ್ನು ಸ್ಟ್ರಾಂಗ್ ಮಾಡಬೇಕೆಂದು ಮುಖಂಡರಿಗೆ ತಿಳಿಸಿದರು.