Cyber Scam – ಇಂದಿನ ಇಂಟರ್ ನೆಟ್ ಕಾಲದಲ್ಲಿ ಕೆಲ ಸೈಬರ್ ಕಳ್ಳರು ವಿವಿಧ ರೀತಿಯಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ. ತಮ್ಮ ಮೊಬೈಲ್ ಸಂಖ್ಯೆಗಳಿಗೆ ಹಾಗೂ ಇ-ಮೇಲ್ ಗಳಿಗೆ ಆಫರ್ ಗಳ ಹೆಸರಿನಲ್ಲಿ ಜನರ ಬಳಿ ಹಣ ಲಪಟಾಯಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ಇದೀಗ IT ಇಲಾಖೆಯ ಹೆಸರಿನಲ್ಲಿ ಮೋಸ ಮಾಡಲು ಸೈಬರ್ ಕಳ್ಳರು (Cyber Scam) ಮುಂದಾಗಿದ್ದಾರೆ. ಎನ್ ಕ್ರಿಪ್ಟ್ ಆಗಿರುವಂತಹ ಲಿಂಕ್ ಒಂದನ್ನು ಮೊಬೈಲ್ ಸಂಖ್ಯೆಗಳಿಗೆ ಕಳುಹಿಸಲಾಗುತ್ತದೆ. ಆ ಮೂಲಕ ಹಣ ಎಗರಿಸುವ ಪ್ಲಾನ್ ಮಾಡಿದ್ದಾರೆ. (Cyber Scam) ಈ ಸಂಬಂಧ ಕೇಂದ್ರ ಸರ್ಕಾರದ ಸೈಬರ್ ದೋಸ್ತ್ ಎಂಬ ವಿಭಾಗ ಅಲರ್ಟ್ ಸಂದೇಶವನ್ನು ಹಂಚಿಕೊಂಡಿದೆ.
ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ (Cyber Scam) ಮಾಡಿರುವವರಲ್ಲಿ ಅನೇಕರಿಗೆ ಈಗಾಗಲೇ ರೀಫಂಡ್ ಸಂದಾಯವಾಗಿದೆ. ಮತಷ್ಟು ಮಂದಿ ರೀಫಂಡ್ ಗಾಗಿ ಕಾಯುತ್ತಿದ್ದಾರೆ. ಅನೇಕರು ಬೇಗ ರೀಫಂಡ್ ಸಿಗುತ್ತದೆ ಎಂದು ಕಾಯುತ್ತಿದ್ದಾರೆ. ಇದನ್ನು ಬಂಡವಾಳವನ್ನಾಗಿ ಮಾಡಿಕೊಂಡ ಕೆಲ ಸೈಬರ್ ಕಳ್ಳರು ವಂಚನೆ (Cyber Scam) ಮಾಡಲು ಮುಂದಾಗಿದ್ದಾರೆ. ನಿಮಗೆ ಆಕರ್ಷಕ ಬಹುಮಾನ ಬಂದಿದೆ ಎಂದು ಒಂದು ಲಿಂಕ್ ಕಳುಹಿಸಿ, ಆ ಲಿಂಕ್ ಕ್ಲಿಕ್ ಮಾಡಿದರೇ ತಮ್ಮ ಮೊಬೈಲ್ ಖಾತೆಯಲ್ಲಿನ ಹಣ ಎಗರಿಸುವ ಕೆಲಸ ಮಾಡುತ್ತಿರುತ್ತಾರೆ. ಅದೇ ರೀತಿ ಇದೀಗ ನಿಮಗೆ ಐಟಿ ರೀಫಂಡ್ ಬಂದಿದೆ ಎಂಬ ಸಂದೇಶವೊಂದು ಹರಿಬಿಟ್ಟು ಆ ಮೂಲಕ ಹಣ ಎಗರಿಸುವ ಪ್ಲಾನ್ (Cyber Scam) ಸೈಬರ್ ಕಳ್ಳರು ಮಾಡಿದ್ದಾರೆ. ಈ ವಂಚನೆಯ ಬಗ್ಗೆ ಕೇಂದ್ರ ಸರ್ಕಾರದ ಸೈಬರ್ ದೋಸ್ತ್ ಎಂಬ ವಿಭಾಗವೊಂದು ಸೋಷಿಯಲ್ ಮೀಡಿಯಾದಲ್ಲಿ ಈ ಸ್ಕ್ಯಾಮ್ ಬಗ್ಗೆ ಅಲರ್ಟ್ ಸಂದೇಶವನ್ನು ಹಂಚಿಕೊಂಡಿದೆ.
https://x.com/Cyberdost/status/1817434455851577423
ಇನ್ನೂ ಸ್ಕಾಮ್ ಅಲರ್ಟ್ ಸಂದೇಶದಲ್ಲಿರುವಂತೆ (Cyber Scam) ಇನ್ಕಮ್ ಟ್ಯಾಕ್ಸ್ ರೀಫಂಡ್ ಸ್ಕ್ಯಾಮ್ ಬಗ್ಗೆ ನೀವು ಎಚ್ಚರಿಕೆಯಿಂದಿರಿ, ನೀವು ರೀಫಂಡ್ ಪಡೆದಿದ್ದೀರಿ ಎನ್ನುವ ಇಂಥಹ ಸಂದೇಶಗಳನ್ನು ವಂಚಕರು ಕಳುಹಿಸುತ್ತಿದ್ದಾರೆ. ಆ ಮೂಲಕ ನಿಮ್ಮನ್ನು ಮೋಸ ಮಾಡಲು ಪ್ಲಾನ್ ಮಾಡಿದ್ದಾರೆ. ಅಧಿಕೃತ ವೆಬ್ ಸೈಟ್ ಗಳ ಮೂಲಕ (Cyber Scam) ಪರಿಶೀಲನೆ ಮಾಡಿ ನಿಮ್ಮ ಮಾಹಿತಿಯನ್ನು ರಕ್ಷಿಸಿಕೊಳ್ಳಿ ಎಚ್ಚರಿಕೆಯಿಂದ ಇರಬೇಕು ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಇನ್ನೂ ವಂಚಕರು ಕಳುಹಿಸುವ ಸಂದೇಶ ಹೇಗಿರುತ್ತದೆ ಎಂದರೇ, ಡಿಯರ್ ಸರ್, ನಿಮ್ಮ xxxxx ಮೊತ್ತದ ಇನ್ಕಮ್ ಟ್ಯಾಕ್ಸ್ ರೀಫಂಡ್ ಗೆ ಅನುಮೋದನೆಯಾಗಿದೆ. ಈ ಹಣ ನಿಮ್ಮ ಖಾತೆಗೆ ಶೀಘ್ರ ಸೇರಲಿದೆ. ನಿಮ್ಮ ಖಾತೆಯ ಸಂಖ್ಯೆ xxxxxxxxxx ಅನ್ನು ದಯವಿಟ್ಟು ಪರಿಶೀಲನೆ ಮಾಡಿ. ಇದರು ಸರಿಯಿಲ್ಲವಾದರೇ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅಪ್ಡೇಟ್ ಮಾಡಿ ಎಂದು ಸಂದೇಶ ಬರುತ್ತದೆ. ಈ ಸಂದೇಶವನ್ನು ನೀವು ನಿಜ ಎಂದು ನಂಬಿ ಆ ಲಿಂಕ್ ಒಪೆನ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿದ್ದೇ ಆದ್ದಲ್ಲಿ ಕೂಡಲೇ ನಿಮ್ಮ ಖಾತೆಯಿಂದ ಹಣವನ್ನು ವಂಚಕರು ಲಪಟಾಯಿಸಿಬಿಡುತ್ತಾರೆ. ಆದ್ದರಿಂದ ಈ ಕುರಿತು ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ.