ಇಂದಿನ ಆನ್ ಲೈನ್ ಯುಗದಲ್ಲಿ ಸೈಬರ್ ಕ್ರೈಂ (Cyber Crime) ಗಳು ಹೆಚ್ಚಾಗುತ್ತಿದೆ. ಸೈಬರ್ ವಂಚನೆಯ ಬಗ್ಗೆ ಅಧಿಕಾರಿಗಳು ಎಚ್ಚರಿಕೆ, ಅರಿವು ಮೂಡಿಸುತ್ತಿದ್ದರೂ ಸಹ ಜನರು ಮೋಸ ಹೋಗುತ್ತಲೇ ಇದ್ದಾರೆ. ಅದರಲ್ಲೂ ವಿದ್ಯಾವಂತರೇ ಹೆಚ್ಚಾಗಿ ಸೈಬರ್ ವಂಚಕರ ವಂಚನೆಗೆ ಒಳಗಾಗುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರ ಆಧಾರ್ ಲಿಂಕ್ ಆಗಿರುವ ಸಿಮ್ ಕಾರ್ಡ್ ಮೂಲಕ ಹಣ ವರ್ಗಾವಣೆ ಆಗಿದೆ ಎಂದು ಸೈಬರ್ ಕಳ್ಳರು (Cyber Crime) ಆ ಮಹಿಳೆಯಿಂದ ಬರೊಬ್ಬರಿ 80 ಲಕ್ಷ ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ. ಮಹಿಳೆಯನ್ನು ಚಂಢೀಗಢ ನಗರದ ಸೆಕ್ಟರ್ 11 ರ ನಿವಾಸಿಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಅನೇಕ ಕೆಲಸಗಳು ಮೊಬೈಲ್ ನಲ್ಲಿಯೇ ನಡೆಯುತ್ತವೆ. ಆನ್ ಲೈನ್ ಮೂಲಕವೇ ದಾಖಲಾತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ, ತಿದ್ದುಪಡಿ, ಹೆಸರು ಸೇರ್ಪಡೆ ಈ ರೀತಿಯಾಗಿ ಬಹುತೇಕ ಸರ್ಕಾರಿ ಕೆಲಸಗಳು ಆನ್ ಲೈನ್ ನಲ್ಲಿ ನಡೆಯುತ್ತಿವೆ. ಆದರೆ ಕೆಲ ಸೈಬರ್ ವಂಚಕರು ಇದ್ದನ್ನೆ ಆಸರೆ ಮಾಡಿಕೊಂಡು ಮುಗ್ದರನ್ನು ಮೋಸ ಮಾಡುತ್ತಿದ್ದಾರೆ. ಮುಂಬೈನ ಸೈಬರ್ ಕ್ರೈಂ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿದ್ದಾರೆ. ಆಧಾರ್ ಕಾರ್ಡ್‌ಗೆ ಲಿಂಗ್ ಆಗಿರುವ ಮೊಬೈಲ್ ನಂಬರ್ ನಿಂದ ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆಕೆಯನ್ನು ಹೆದರಿಸಿದ್ದಾರೆ. ನಿಮಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಿಂದ ಇಲ್ಲಿಯವರೆಗೂ ಬರೋಬ್ಬರಿ 24 ಬಾರಿ ಬ್ಲಾಕ್ ಮನಿ ಟ್ರಾನ್ಸಫರ್ ಆಗಿದೆ. ಶೀಘ್ರದಲ್ಲೇ ನಿಮ್ಮ ಬಂಧನವಾಗಲಿದೆ ಎಂದು ಸೈಬರ್ ಕ್ರೈಂ ಪೊಲೀಸರಂತೆ ಮಾತನಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ನಿಮ್ಮ ಪೂರ್ಣ ಹೆಸರು ಹಾಗೂ ದಾಖಲಾತಿಗಳ ವಿವರಗಳು ಬೇಕಾಗಿದ್ದ ಹಿನ್ನೆಲೆ ನಿಮಗೆ ಕರೆ ಮಾಡಲಾಗಿದೆ. ಮಾಹಿತಿ ನೀಡಿ, ಇಲ್ಲವಾದಲ್ಲಿ ನಿಮಗೆ ತೊಂದರೆಯಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಬಂಧನವಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಇದನ್ನೆಲ್ಲಾ ಕೇಳಿದ ಮಹಿಳೆ ಬೆಚ್ಚಿಬಿದ್ದಿದ್ದಾಳೆ. ಸೈಬರ್ ಕಳ್ಳರು ಕೇಳಿದ ಮಾಹಿತಿಯನ್ನು ಮಹಿಳೆ ಹೇಳಿದ್ದಾಳೆ. ಇದೇ ಸಮಯದಲ್ಲಿ ನಾವು ಹೇಳುವ ಬ್ಯಾಂಕ್ ಖಾತೆಗೆ 80 ಲಕ್ಷ ರೂಪಾಯಿ ಜಮೆ ಮಾಡಬೇಕು. ವಿಚಾರಣೆ ಮುಗಿದ ಬಳಿಕ ನಿಮ್ಮ ಹಣ ರೀಫಂಡ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಬಳಿಕ ಆ ಮಹಿಳೆ ಸೈಬರ್ ವಂಚಕರ ಖಾತೆಗೆ ಹಣ ಹಾಕಿದ್ದಾರೆ. ಈ ರೀತಿಯಾಗಿ ಸೈಬರ್ ಕಳ್ಳರ ಮೋಸದ ಜಾಲಕ್ಕೆ ಮಹಿಳೆ 80 ಲಕ್ಷ ಕಳೆದುಕೊಂಡಿದ್ದಾರೆ.