CT Ravi – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಎಂ.ಎಲ್.ಸಿ ಸಿ.ಟಿ ರವಿ (CT Ravi) ಅಸಂವಿಧಾನಿಕ ಪದ ಬಳಕೆ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿ ಸುವರ್ಣ ಸೌಧದ ಆವರಣದಲ್ಲಿ ದೊಡ್ಡ ಹೈಡ್ರಾಮ ನಡೆದಿದೆ. ವಿಧಾನಪರಿಷತ್ ನ ಕಾರಿಡಾರ್ ನಲ್ಲಿ ಹೋಗುತ್ತಿದ್ದ ಸಿ.ಟಿ.ರವಿಯನ್ನು ಅಡ್ಡ ಹಾಕಿದ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೇ ಸಮಯದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಘೋಷಣೆ ಕೂಗಿ ಸಿ.ಟಿ.ರವಿ ಮೇಲೆ ಮುಗಿಬಿದ್ದು ಹಲ್ಲೆ ಮಾಡಲು ಸಹ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಪರಿಷತ್ ಸಭಾಂಗಣದ ಒಳಗಿದ್ದ ಮಾರ್ಷಲ್ಗಳು, ಕಾರಿಡಾರ್ ಗೇಟ್ ಬಂದ್ ಮಾಡಿದರು.

ಸಿ.ಟಿ. ರವಿ ಮೇಲೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಮುಗಿಬಿದ್ದು, ಏಕವಚನದಲ್ಲೇ ನಿಂದನೆ ಮಾಡಿದ್ದಾರೆ. ಏನೋ ಸೂ…. ಮಗನೇ ನಮ್ಮ ಅಕ್ಕನಿಗೆ ಹೀಗೆ ಹೇಳಿದ್ಯಾ ಎಂದು ಓರ್ವ ಕೂಗಾಡಿದ್ದಾನೆ. ಏಯ್ ಆಚೆ ಬಾರೋ, ಧೈರ್ಯವಿದ್ದರೇ ಹೊರಗೆ ಬಾರೋ ಎಂದು ಏಕವಚನದಲ್ಲೇ ಅವಾಜ್ ಹಾಕಿದ್ದಾರೆ. ಮತ್ತೆ ಕೆಲವರು ಸಿ.ಟಿ.ರವಿ ಮೇಲೆ ಹಲ್ಲೆ ಮಾಡಲು ಸಹ ಮುಂದಾಗಿದ್ದಾರೆ. ಈ ವೇಳೆ ಆಕ್ರೋಷಗೊಂಡ ಸಿ.ಟಿ. ರವಿ ಬಾ ಬಾ ಹೊಡಿ ಬಾ, ಅದೇನ್ ಮಾಡ್ತಾರೆ ಮಾಡಲಿ ಬಿಡ್ರಿ ಎಂದು ಗುಡುಗಿದ್ದಾರೆ. ಗಲಾಟೆ ದೊಡ್ಡದಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರನ್ನು ಚದುರಿಸಿದ್ದಾರೆ. ಜೊತೆಗೆ ಘಟನೆಯನ್ನು ಖಂಡಿಸಿ ಸಿ.ಟಿ ರವಿ, ಅಶ್ವಥ್ ನಾರಾಯಣ್ ಸ್ಥಳದಲ್ಲೇ ಧರಣಿ ಕುಳಿತರು. ಎಡಿಜಿಪಿ ಮನವೊಲಿಕೆ ಬಳಿಕ ಸಭಾಪತಿಗಳಿಗೆ ದೂರು ನೀಡಲು ಅಲ್ಲಿಂದ ತೆರಳಿದರು. ನಂತರ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನದ ಮುಕ್ತಾಯಕ್ಕೆ ಒಂದು ದಿನ ಬಾಕಿಯಿರುವಾಗಲೇ ಹೈಡ್ರಾಮಾ ಶುರುವಾಗಿತ್ತು. ವಿಧಾನ ಪರಿಷತ್ ಆವರಣದಲ್ಲಿ ಬೆಳಗ್ಗೆ ಬಿಜೆಪಿ ಹಾಗೂ ಕಾಂಗ್ರೇಸ್ ಸದಸ್ಯರು ಅಮಿತ್ ಶಾ ಅವರು ಅಂಬೇಡ್ಕರ್ ವಿಚಾರವಾಗಿ ಮಾತನಾಡಿದ್ದ ಬಗ್ಗೆ ಪರ-ವಿರೋಧವಾಗಿ ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ರವರು, ಸಿ.ಟಿ. ರವಿ ರವರಿಗೆ ನೀನು ಕೊಲೆಗಡುಕ ಎಂದು ಹೇಳಿದ್ದರು, ಅದನ್ನು ಸಹಿಸಿಕೊಳ್ಳದ ಸಿ.ಟಿ. ರವಿ ನೀನೊಬ್ಬ ಪ್ರಾಸ್ಟಿ****ಟ್ ಎಂಬ ಪದವನ್ನು ಬಳಕೆ ಮಾಡಿದ್ದಾರಂತೆ. ಬಳಿಕ ಪರಿಷತ್ ಸಭಾಂಗಣದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅಳುತ್ತಾ ಹೊರ ಹೋಗಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಕೊಠಡಿಗೆ ತೆರಳಿ ದೂರು ನೀಡಿದ್ದಾರೆ.
ಸಂಬಂಧಪಟ್ಟ ಟ್ವೀಟ್ : https://x.com/CTRavi_BJP/status/1869715269528039826
ಆದರೆ ಸಿ.ಟಿ. ರವಿ ನಾನು ಆ ರೀತಿಯ ಪದವನ್ನು ಬಳಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಸಭಾಂಗಣದ ವಿಡಿಯೋ ಹಾಗೂ ಆಡಿಯೋ ಪರಿಶೀಲನೆ ಮಾಡುವಂತೆ ಸಭಾಪತಿ ಸೂಚನೆ ನೀಡಿದ್ದಾರೆ. ನಂತರ ಮದ್ಯಾಹ್ನದ ಊಟಕ್ಕೆ ಹೋಗಿದ್ದಾರೆ. ಊಟ ಮಾಡಿಕೊಂಡು ವಾಪಸ್ ಬರುವಾಗ ಇಷ್ಟೆಲ್ಲಾ ಹೈಡ್ರಾಮಾ ನಡೆದಿದೆ. ಸದ್ಯ ಸುವರ್ಣಸೌಧಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸುವರ್ಣ ಸೌಧದ ಎಲ್ಲಾ ಗೇಟ್ ಗಳನ್ನು ಬಂದ್ ಮಾಡಲಾಗಿದ್ದು, ಸುವರ್ಣಸೌಧದ ಎಲ್ಲಾ ಪ್ಲೋರ್ ಗಳಿಗೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದಬಳಕೆ ಆರೋಪ – ಸಿ.ಟಿ ರವಿ ವಿರುದ್ಧ FIR ಹಾಗೂ ಬಂಧನ
ಇನ್ನೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ವಿಧಾನ ಪರಿಷತ್ನಲ್ಲಿ ಗುರುವಾರ ಅಶ್ಲೀಲ ಪದಬಳಕೆ ಮಾಡಿದ ಆರೋಪ ಮೇಲೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಸಿ.ಟಿ ರವಿಯನ್ನು (CT Ravi) ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ. ಸುವರ್ಣಸೌಧದ ಹಾಗೂ ಹಿರೇಬಾಗೇವಾಡಿ ಠಾಣೆಯ ಸುತ್ತ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.