Crime News: ಚಿಕನ್ ನಲ್ಲಿ ಉಪ್ಪು ಜಾಸ್ತಿ ಎಂದ ಗಂಡ, ಬಳಿಕ ಹೆಂಡ್ತಿ ಮಾಡಿದ್ದಾದರೂ ಏನು ಗೊತ್ತಾ?

ಗಂಡ ಹೆಂಡತಿಯ ನಡುವೆ ಹಲವು ಕಾರಣಗಳಿಂದ ಜಗಳಗಳು ನಡೆಯುವುದು ಸಾಮಾನ್ಯ ಎನ್ನಬಹುದು. ಗಂಡ-ಹೆಂಡತಿ ಜಗಳ ತಿಂದು ಮಲಗುವ ತನ ಎಂದೂ ಹೇಳಲಾಗುತ್ತದೆ. ಆದರೆ ಇಲ್ಲೊಂದು ಘಟನೆ ಅದಕ್ಕೆ ತದ್ವಿರುದ್ದವಾಗಿದೆ. ಪತಿಯೊಬ್ಬ ಹೆಂಡತಿ ಮಾಡಿದ ಚಿಕನ್ ಸಾಂಬರ್‍ ನಲ್ಲಿ ಉಪ್ಪು ಜಾಸ್ತಿ ಇದೆ ಅಂತಾ ಹೇಳಿದ್ದಾನೆ. ಅದಕ್ಕೆ ಪತ್ನಿ ಕೋಪಗೊಂಡು ಕಬ್ಬಿಣದ ರಾಡ್ ನಲ್ಲಿ ಹೊಡೆದು ಕೊ*ಲೆ ಮಾಡಿಬಿಟ್ಟಿದ್ದಾಳಂತೆ. ಅಂದಹಾಗೆ ಈ ಘಟನೆ ಬಿಹಾರದ ಚಂಪಾರಣ್ ಜಿಲ್ಲೆಯ ಚೌತರ್‍ ವದ ಕೊಲ್ಹುವಾ ಎಂಬ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ.

wife killed husband for silly reason 0

ಬಿಹಾರದ ಚಂಪಾರಣ್ ಜಿಲ್ಲೆಯ ಚೌತರ್‍ ವದ ಕೊಲ್ಹುವಾ ಗ್ರಾಮದ ಶಂಶೇರ್‍ ಅಲಂ ಅಲಿಯಾಸ್ ಲಾಲು (35) ಎಂಬಾತನೇ ಮೃತ ದುರ್ದೈವಿಯಾಗಿದ್ದಾನೆ. ಆತನನ್ನು ಕೊ*ಲೆ ಮಾಡಿದ ಶಹನಾಜ್ ಬೇಗಂ ಹಾಗೂ ಆಕೆಯ ಸಹೋಧರಿ ಅಪ್ರಾಪ್ತೆ ಬಾಲಕಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಇನ್ನೂ ಆರೋಪಿ ಶಹನಾಜ್ ಎಂದಿನಂತೆ ಮನೆಯಲ್ಲಿ ಚಿಕನ್ ಸಾಂಬಾರ್‍ ಮಾಡಿದ್ದಳಂತೆ. ಮನೆಗೆ ಬಂದ ಪತಿ ಚಿಕ್ ಊಟ ಮಾಡಿದ್ದಾನೆ. ಊಟ ಮಾಡುವ ಸಮಯದಲ್ಲಿ ಚಿಕನ್ ಗೆ ಉಪ್ಪು ಜಾಸ್ತಿಯಾಗಿದೆ. ಸರಿಯಾಗಿ ಚಿಕನ್ ಸಾಂಬಾರ್‍ ಮಾಡೋಕೆ ಬರೊಲ್ವಾ ಅಂತಾ ಕೇಳಿದ್ದಾನೆ. ಇದೇ ಮಾತಿಗೆ ಹೆಂಡತಿ ಶಹನಾಜ್ ಗೆ ಕೋಪ ಬಂದಿದೆ ಎಂದು ಹೇಳಲಾಗಿದೆ.

wife killed husband for silly reason 2

ಇನ್ನೂ ಚಿಕನ್ ಸಾಂಬರ್‍ ಗೆ ಉಪ್ಪು ಜಾಸ್ತಿಯಾಗಿದೆ ಎಂದು ಪತಿ ಹೇಳಿದ್ದಕ್ಕೆ ಕೋಪಗೊಂಡ ಹೆಂಡತಿ ಅಲ್ಲಿದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಗಂಡನಿಗೆ ಮನಬಂದಂತೆ ಹೊಡೆದಿದ್ದಾಳೆ. ಹೆಂಡತಿ ಪತಿಗೆ ಹೊಡೆಯುವಾಗ ಆಕೆಯ ಅಪ್ರಾಪ್ತ ಸಹೋದರಿ ಸಹ ಕೋಲು ಹಿಡಿದುಕೊಂಡು ಹೊಡೆದಿದ್ದಾಳೆ. ರಾಡ್ ನಿಂದ ಬಲವಾಗಿ ಏಟು ಬಿದ್ದ ಕಾರಣ ರಕ್ತ ಚಿಮ್ಮಿ ಲಾಲು ಕುಸಿದು ಬಿದ್ದಿದ್ದಾನೆ. ಈ ಸಮಯದಲ್ಲಿ ಕೂಗಾಟ, ಚೀರಾಟ ಕೇಳಿ ಅಕ್ಕ-ಪಕ್ಕದ ಮನೆಯವರು ಬಂದು ನೋಡುವಷ್ಟರಲ್ಲಿ ಪತ್ನಿ ಪತಿಯನ್ನು ಕೊಲೆ ಮಾಡಿಬಿಟ್ಟಿದ್ದಳಂತೆ. ಬಳಿಕ ಸ್ಥಳೀಯರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಮೃತನ ಹೆಂಡತಿ ಹಾಗೂ ಹೆಂಡತಿಯ ಸಹೋದರಿ ಅಪ್ರಾಪ್ತೆಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

Scroll to Top