ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ 8ನೇ ವಾರ್ಡ್ ನ ಕುಂಬಾರಪೇಟೆಯ ಮನೆಯೊಂದರಲ್ಲಿ ಯಾರು ಇಲ್ಲದ ಮನೆಗೆ ಬೀಗ ಹಾಕಿದ್ದ ಮನೆಯ ಬೀಗ ಹೊಡೆದು ಮನೆಯ ಬೀರುವುನಲ್ಲಿರುವ ಹಣ ಒಡವೆ ದೋಚಿ ಸಾಕ್ಷಿ ನಾಶ ಪಡಿಸಲಿ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.
ಗುಡಿಬಂಡೆ ಪಟ್ಟಣದ ಕೂಲಿ ಕಾರ್ಮಿಕ ಗೌಸ್ ಪೀರ್ ಎಂಬುವವರ ಬಾಡಿಗೆ ಮಾಡಿಕೊಂಡಿ ವಾಸವಾಗಿದ್ದರು ಕೆಲಸ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿದ ದುಷ್ಕರ್ಮಿಗಳು ಮನೆ ಕಳ್ಳತನ ಮಾಡಿ ಬೆಡ್ ರೂಂನ ಬೀರು ಮತ್ತು ಮಂಚಕ್ಕೆ ಬೆಂಕಿ ಹಚ್ಚಿರುವ ಘಟನೆ ಭಾನುವಾರ ರಾತ್ತಿ ಸುಮಾರು 11.30ಕ್ಕೆ ನಡೆದಿದೆ.
ಮನೆಯ ಬೀಗ ಒಡೆದುಹಾಕಿ ಬೀರುವಿನಲ್ಲಿದ್ದ ಸುಮಾರು 15 ಸಾವಿರ ರೂ. ನಗದು, 35 ಸಾವಿರ ಬೆಲೆಯ ಚಿನ್ನಾಭರಣ ಕಳವಾಗಿದೆ ಎನ್ನಲಾಗಿದೆ. ಕಳವು ಮಾಡಿ ಇವರ ಮನೆಯ ಬೆಡ್ ರೂಂ ನ ಬೀರು, ಟಿ.ವಿ ಹಾಗೂ ಮಂಚಕ್ಕೆ ಬೆಂಕಿ ಇಟ್ಟು ಪರಾರಿ ಆಗಿದ್ದಾರೆ.
ಕಳ್ಳತನದ ಕುರಿತು ಗೌಸ್ ಪೀರ್ ಮಾತನಾಡಿ ನಾವು ನಮ್ಮ ಅತ್ತೆ ಮನೆಗೆ ಹೋಗಿದ್ದಾಗ ಮನೆಯಿಂದ ಹೊಗೆ ಬರುತ್ತಿರುವುದನ್ನು ನೋಡಿ ಅಕ್ಕ ಪಕ್ಕದ ಮನೆಯವರು ನನಗೆ ಪೋನ್ ಮಾಡಿದರು ನಾನು ಊರಲ್ಲಿ ಇಲ್ಲ ಎಂದು ತಿಳಿಸಿದೆ. ನಂತರ ಕೆಲಸ ಹುಡುಗರಿಗೆ ಪೋನ್ ಮಾಡಿ ಬೆಂಕಿ ಹಾರಿಸುವಂತೆ ತಿಳಿಸಿದೆ. ಮನೆಯಲ್ಲಿ ಇದ್ದ ಹಣ ಮತ್ತು ಒಡವೆ ದೀಚಿಕೊಂಡು ಹೋಗಿದ್ದಾರೆ. ಹಣ, ಬಟ್ಟೆ ಮತ್ತು ರೆಕಾರ್ಡ್ ಗಳನ್ನು ಸುಟ್ಟು ಹೋಗಿದೆ. ಗುಡಿಬಂಡೆ ಪಟ್ಟಣದ ಬಾಬಾ, ಜಬಿವುಲ್ಲ, ಉಮೇಶ, ಬಾಬಾಜಾನ್ ಬೆಂಕಿನಂದಿಸುವಲ್ಲಿ ಯಾಶಸ್ವಿಯಾಗಿದ್ದಾರೆ.
ಈ ಹಿಂದೆ ಸಹ ಗುಡಿಬಂಡೆ ಪಟ್ಟಣದ ಶಂಕರಶೆಟ್ಟಿ ಅಂಗಡಿಯಲ್ಲಿ ಸಹ ಇದೇ ತರಹ ನಡೀತಾನೆ ಇರುತ್ತೆ. ಗುಡಿಬಂಡೆ ಪಟ್ಟಣದಲ್ಲಿ ಭದ್ರತೆ ಇಲ್ಲದಂತಾಗಿದೆ ಎಂದು ನೋವನ್ನು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಮತ್ತು ಅಗ್ನಿಶ್ಯಾಮಕ ದಳ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.