Crime News – ಇಂದಿನ ಆಧುನಿಕ ಕಾಲದಲ್ಲೂ ಸಹ ಜಾತಿ, ಧರ್ಮ ಕಾರಣದಿಂದ ಅನೇಕ ಗಲಾಟೆಗಳು, ದೌರ್ಜನ್ಯಗಳು ನಡೆಯುತ್ತಲೇ ಇರುತ್ತದೆ. ಪ್ರೀತಿಗೆ ಕಣ್ಣಿಲ್ಲ, ಜಾತಿ, ಗಡಿಯ ಅಡ್ಡಿ ಬರೊಲ್ಲ ಎಂದು ಹೇಳಬಹುದಾಗಿದ್ದು, ಇದೀಗ ಅನ್ಯ ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸಿದ್ದಕ್ಕಾಗಿ ಯುವಕನ ಮೇಲೆ ಯುವತಿಯ ಕುಟುಂಬಸ್ಥರು (Crime News) ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಯಾದಗಿರಿಯ ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಮೂರು ವರ್ಷಗಳಿಂದ ನಿಂಗಪ್ಪ ಹಾಗೂ ಯುವತಿ ಪ್ರೀತಿಸುತ್ತಿದ್ದರಂತೆ. ಇಬ್ಬರೂ ಪ್ರೀತಿಸಿಕೊಳ್ಳುತ್ತಿದ್ದು, ಹಲವು ಕಡೆ ಇಬ್ಬರೂ ಓಡಾಡಿದ್ದಾರೆ. ಇದನ್ನು ಯುವತಿಯ ಕುಟುಂಬಸ್ಥರು ಗಮನಿಸಿದ್ದಾರೆ. ಮೊದಲಿಗೆ ನಿಂಗಪ್ಪನನ್ನು ಯುವತಿಯ ಪೋಷಕರು ಕರೆದು ಆಕೆಯ ಸಹವಾಸ ಬಿಡುವಂತೆ ತಾಕೀತು ಮಾಡಿದ್ದರಂತೆ. ಇದಾದ ಬಳಿಕ ನಿಂಗಪ್ಪ ಸಹ ಯುವತಿಯ ಜೊತೆಗೆ ಅಂತರ ಕಾಯ್ದುಕೊಂಡಿದ್ದನಂತೆ. ಆದರೆ ಯುವತಿ ನೀನು ನನ್ನ ಬಿಟ್ಟರೇ ನಾನು ಸಾಯುತ್ತೇನೆಂದು ಹೇಳಿದ್ದಾಳೆ. ಬಳಿಕ ಇಬ್ಬರೂ ಓಡಿಹೋಗಿದ್ದರಂತೆ.

ಇಬ್ಬರೂ ಓಡಿ ಹೋಗಿ ಗುಜರಾತ್ ನಲ್ಲಿ ವಾಸವಾಗಿದ್ದರು. ಬಳಿಕ ಇಬ್ಬರನ್ನೂ ಕರೆತಂದು ಗ್ರಾಮದಲ್ಲಿ ನ್ಯಾಯಪಂಚಾಯತಿ ಮಾಡಿ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿದ್ದಾರೆ. ಇದಾದ ಬಳಿಕ ನಿಂಗಪ್ಪ ಕೆಲಸಕ್ಕಾಗಿ ಚಿತ್ತಾಪುರಕ್ಕೆ ಹೋಗಿದ್ದಾನೆ. ಕೆಲವು ದಿನಗಳ ಬಳಿಕ ಯುವತಿ ನಿಂಗಪ್ಪನಿಗೆ ಕರೆಮಾಡಿ ಮತ್ತೆ ಆತನೊಂದಿಗೆ ಪರಾರಿಯಾಗಿದ್ದಾಳೆ. ಇದರಿಂದ ಯುವತಿಯ ಕುಟುಂಬಸ್ಥರು ಕೋಪಗೊಂಡು ನಿಂಗಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಿಗ್ಗಾಮುಗ್ಗಾ ಥಳಿಸಿ ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಕುರಿತು ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.