Crime News: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನಿಗೆ ಚಟ್ಟ ಕಟ್ಟಿದ ಪತ್ನಿ….!

ಇತ್ತೀಚಿಗೆ ವಿವಾಹೇತರ ಸಂಬಂಧಗಳು, ಅಕ್ರಮ ಸಂಬಂಧಗಳ ಕಾರಣದಿಂದ ಅನೇಕ ಅನಾಹುತಗಳು ನಡೆದ ಕುರಿತು ಕೆಲವೊಂದು ಸುದ್ದಿಗಳನ್ನು ಸಹ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣದಿಂದ ಪತಿಯನ್ನೆ ಕೊಲೆ (Crime News) ಮಾಡಿದ್ದಾಳೆ ಪತ್ನಿ. ಈ ಘಟನೆ ನಡೆದು ಒಂದು ವರ್ಷವಾಗಿದ್ದು, ಒಂದು ವರ್ಷದ ಬಳಿಕ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ಈ ಘಟನೆ ನಡೆದಿತ್ತು. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಪ್ರಿಯಕರನ ಜೊತೆ ಸೇರಿ ಗಂಡನನ್ನೆ ಪತ್ನಿ ಕೊಲೆ ಮಾಡಿದ್ದರು. ಕಳೆದ 2023 ಫೆಬ್ರವರಿಯಲ್ಲಿ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಮೃತದೇಹವೊಂದು ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು. ಕಾಣೆಯಾದ ಇಲಿಯಾಸ್ ಅಹಮ್ಮದ್ ಎಂದು ಅನುಮಾನಗೊಂಡಿದ್ದ ಪೊಲೀಸರು, ಕೂಡಲೇ‌ ಮೃತನ ಮಕ್ಕಳ ಹಾಗೂ ಮೃತದೇಹದ ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ಆ ಮೃತ ದೇಹ ಇಲಿಯಾಸ್ ಅಹಮ್ಮದ್ ನದ್ದೇ ಎಂದು ಖಚಿತವಾಗಿತ್ತು. ಈ ಸಾವಿನ ಬಗ್ಗೆ ಇಲಿಯಾಸ್ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಈ ಕುರಿತು ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.

wife killed husband case craked

ಬಳಿಕ ಪೊಲೀಸರು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದರು. ಇಲಿಯಾಸ್ ಪತ್ನಿ ಆಯೇಷಾ ರನ್ನು ವಿಚಾರಣೆಗೆ ಒಳಪಡಿಸಿದಾಗ ಅಸಲೀ ಸತ್ಯ ಹೊರಬಂದಿದೆ. ಆಕೆ ತನ್ನ ಪ್ರಿಯಕರ ಮಂಜುನಾಥ್ ಜೊತೆ ಸೇರಿ ಇಲಿಯಾಸ್ ನನ್ನು ಕೊಲೆ ಮಾಡಿರುವುದು ಖಚಿತವಾಗಿದೆ. ಇಲಿಯಾಸ್ ಕೊಲೆಯಾಗುವುದಕ್ಕೂ ಮುಂಚೆ ಪತಿಗೆ ನಿದ್ದೆ ಮಾತ್ರೆ ಹಾಕಿ ಮಂಜುನಾಥ್ ಹಾಗೂ ಆಯೇಷಾ ಲೈಂಗಿಕ ಸಂಪರ್ಕ ಹೊಂದುತ್ತಿದ್ದರಂತೆ. ಬಳಿಕ ಇಲಿಯಾಸ್ ನನ್ನು ಮುಗಿಸಿಬಿಟ್ಟರೇ ತಮ್ಮ ಅಕ್ರಮ ಸಂಬಂಧಕ್ಕೆ ಯಾವುದೇ ಅಡ್ಡಿಯಿರಲ್ಲ ಅಂತಾ ಆತನನ್ನು ಮುಗಿಸಲು ಪ್ಲಾನ್ ಮಾಡಿದ್ದಾರೆ.

ಇಲಿಯಾಸ್ ನನ್ನು ಕೊಲೆ ಮಾಡಲು ಆಯೇಷಾ ಹಾಗೂ ಮಂಜುನಾಥ್ ಪ್ಲಾನ್ ಮಾಡಿ ಸಾಗರ ಪೇಟೆಯ ಬಳಿಯ ಡಾಬಾ ಗೆ ಪಾರ್ಟಿ ಮಾಡುವ ನೆಪದಲ್ಲಿ ಇಲಿಯಾಸ್ ನನ್ನು ಕರೆದುಕೊಂಡು ಹೋಗಿದ್ದರು. ಮದ್ಯದಲ್ಲಿ ನಿದ್ದೆ ಮಾತ್ರ ಹಾಕಿ ಇಲಿಯಾಸ್ ಗೆ ಕುಡಿಸಲಾಗಿದೆ. ಬಳಿಕ ಬಲವಂತಾವಿ ಈಜಾಡಲು ಚಾನಲ್ ನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಪ್ರಕರಣ ನಡೆದು ಒಂದು ವರ್ಷದ ಬಳಿಕ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದು, ಸದ್ಯ ಆರೋಪಿಗಳಾದ ಆಯೇಷಾ ಹಾಗೂ ಆಕೆಯ ಪ್ರಿಯಕರ ಮಂಜುನಾಥ್ ನನ್ನು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *

Scroll to Top