Thursday, July 31, 2025
HomeStateCrime : ಜಮೀನು ವಿವಾದ : ಅಕ್ಕಪಕ್ಕದ ಜಮೀನು ಮಾಲೀಕರ ನಡುವೆ ಜಗಳ, ಓರ್ವಅನುಮಾನಾಸ್ಪದ ಸಾವು?

Crime : ಜಮೀನು ವಿವಾದ : ಅಕ್ಕಪಕ್ಕದ ಜಮೀನು ಮಾಲೀಕರ ನಡುವೆ ಜಗಳ, ಓರ್ವಅನುಮಾನಾಸ್ಪದ ಸಾವು?

Crime – ಜಮೀನು ವಿಚಾರದಲ್ಲಿ ಅಕ್ಕ-ಪಕ್ಕದ ಜಮೀನು ಮಾಲೀಕರ ನಡುವೆ ನಡೆದ ಗಲಾಟೆಯಲ್ಲಿ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೃತ ದುರ್ದೈವಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿಲುಗುಂಬ ಗ್ರಾಮದ ಅಶ್ವತ್ಥಪ್ಪ (45) ಎಂದು ಗುರುತಿಸಲಾಗಿದೆ.

Crime - Land Dispute Turns Tragic in Gudibande – Man Dies in Nuligumba Village, Gudibande Taluk

Crime – ನುಲಿಗುಂಬ ಗ್ರಾಮದಲ್ಲಿ ನಡೆದಿದ್ದೇನು?

ಶುಕ್ರವಾರ ಬೆಳಿಗ್ಗೆ ಕಾಡೇನಹಳ್ಳಿದಿನ್ನೆ ಸರ್ವೆ ನಂಬರ್ ನಲ್ಲಿರುವ ಜಮೀನಿನ ಬಳಿ ನುಲಿಗುಂಬ ಗ್ರಾಮದ ಅಶ್ವತ್ಥಪ್ಪ ಮತ್ತು ನಾಗರಾಜಾಚಾರಿ ರವರ ಎರಡು ಕುಟುಂಬಗಳ ನಡುವೆ ಜಮೀನಿನ ವಿಚಾರದಲ್ಲಿ ಗಲಾಟೆ ನಡೆದಿದೆ. ಗಲಾಟೆ ವೇಳೆ ಎರಡು ಕುಟುಂಬಸ್ಥರ ನಡುವೆ ನೂಗುನುಗ್ಗಲು ನಡೆದಿದ್ದು, ಈ ವೇಳೆ ಅಶ್ವತ್ಥಪ್ಪಎಂಬುವರು ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಬಳಿಕ ಕುಟುಂಬಸ್ಥರು ಭಾಗ್ಯನಗರ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ ಸಹ ಪ್ರಯೋಜನೆ ಆಗದೇ ಸಾವನ್ನಪ್ಪಿದ್ದಾರೆಂದು ಕುಟುಂಬಸ್ಥರು ತಿಳಿಸಿದ್ದಾರೆ. Read this also : ಉತ್ತರ ಪ್ರದೇಶದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ, ದೇಹದ ಮೇಲೆ ಡೆತ್‌ನೋಟ್ ಬರೆದು ಆತ್ಮಹತ್ಯೆ…!

Crime - Land Dispute Turns Tragic in Gudibande – Man Dies in Nuligumba Village, Gudibande Taluk

Crime – ಗುಡಿಬಂಡೆ ಪೊಲೀಸರಿಂದ ತನಿಖೆ ಆರಂಭ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಗುಡಿಬಂಡೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗಣೇಶ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಲಾಗಿದೆ. ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಅಶ್ವತ್ಥಪ್ಪ ಅವರ ಸಾವು ಸಹಜ ಸಾವೇ ಅಥವಾ ಕೊಲೆಯೇ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸ್ಪಷ್ಟವಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular