Crime – ವಿದ್ಯುತ್ ಕೆಲಸಕ್ಕೆ ಹೋಗಿದ್ದ ಕಾರ್ಮಿಕನೋರ್ವ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಹರಿದು ಸಾವನ್ನಪ್ಪಿದ್ದಾನೆ. ಆದರೆ ಬೀಚಗಾನಹಳ್ಳಿ ವ್ಯಾಪ್ತಿಯ ಲೈನ್ ಮೆನ್ ಚಂದ್ರಕುಮಾರ್ ಎಂಬಾತ ಈ ವಿಚಾರ ಯಾರಿಗೂ ತಿಳಿಯದೇ ಮುಚ್ಚಿಹಾಕಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Crime – ಕೆಲಸದ ವೇಳೆ ನಡೆದ ದುರಂತ
ಮೃತ ದುರ್ದೈವಿಯನ್ನು ವಿದ್ಯುತ್ ಕಾರ್ಮಿಕ ರವಿ (33) ಎಂದು ಗುರ್ತಿಸಲಾಗಿದೆ. ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನ ಮೇಡಿಮಾಕಲಹಳ್ಳಿ ಕ್ರಾಸ್ ಬಳಿಯ ಕೋಳಿಪಾರಂ ಬಳಿ ಭಾನುವಾರ ಮತ್ತು ಸೋಮವಾರ ವಿದ್ಯುತ್ ಕಾಮಗಾರಿ ಮಾಡಲು ಬೀಚಗಾನಹಳ್ಳಿ ಗ್ರಾಮದ ಲೈನ್ ಮೆನ್ ಚಂದ್ರಕುಮಾರ್ ಮೃತ ರವಿಯನ್ನು ಕರೆದುಕೊಂಡು ಹೋಗಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಹರಿದು ಕಂಬದಲ್ಲಿ ಸುಟ್ಟು ಕರಲಕಲಾಗಿದ್ದಾನೆ. ಈ ವಿಚಾರ ಯಾರಿಗೂ ತಿಳಿಸದೇ, ತನಗೆ ಏನು ತಿಳಿದಿಲ್ಲ ಎಂಬಂತೆ ಮನೆಗೆ ಬಂದಿದ್ದನಂತೆ. ಇನ್ನೂ ಮೃತ ರವಿ ಎರಡು ದಿನವಾದರೂ ಮನೆಗೆ ಬಾರದ ಕಾರಣ ಅವರ ಸಂಬಂಧಿಕರು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
Read this also : ನಂಬರ್ ಬ್ಲಾಕ್ ಮಾಡಿದ ಪ್ರೇಯಸಿ, ಮನನೊಂದ ಪ್ರಿಯಕರ ಸೂ**ಸೈಡ್, ಡೆತ್ ನೋಟ್ ನಲ್ಲಿ ಏನಿದೆ?
Crime – ಸತ್ಯ ಮುಚ್ಚಿಹಾಕಲು ಯತ್ನಿಸಿದ ಆರೋಪ
ಇನ್ನೂ ದೂರು ನೀಡಿರುವ ವಿಚಾರ ಲೈನ್ ಮೆನ್ ಚಂದ್ರ ಕುಮಾರ್ ಗೆ ತಿಳಿಯುತ್ತಿದ್ದಂತೆ ಪೋನ್ ಮನೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಗುಡಿಬಂಡೆ ಪೊಲೀಸರು ಸ್ಥಳಕ್ಕೆ ತನಿಖೆ ಕೈಗೊಂಡು ಆರೋಪಿ ಲೈನ್ ಮೆನ್ ಚಂದ್ರಕುಮಾರ್ ನನ್ನು ಪತ್ತೆ ಹಚ್ಚಿದ್ದಾರೆ. ವಿಚಾರಣೆ ನಡೆಸಿದಾಗ ಮೃತ ರವಿ ದೇಹವನ್ನು ಬಂದಾರ್ಲಹಳ್ಳಿ ಕೆರೆಯಲ್ಲಿ ಹಾಕಿರುವುದಾಗಿ ಬಾಯ್ಬಿಟ್ಟಿದ್ದಾನೆ. ಈ ಸಂಬಂಧ ಗುಡಿಬಂಡೆ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

