Crime – ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಂನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗಂಡನ ಮನೆಯವರ ತೀವ್ರ ಕಿರುಕುಳ ತಾಳಲಾರದೆ, ಯುವ ಉಪನ್ಯಾಸಕಿಯೊಬ್ಬರು ಅಣೆಕಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರನ್ನು 28 ವರ್ಷದ ಪುಷ್ಪಾ ಎಂದು ಗುರುತಿಸಲಾಗಿದೆ. ಸಾವಿಗೆ ಶರಣಾಗುವ ಮುನ್ನ ಪುಷ್ಪಾ ಅವರು ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕೆಯ ಸಾವಿನ ಹಿಂದಿನ ಭೀಕರ ಸತ್ಯವನ್ನು ಜಗತ್ತಿನ ಮುಂದೆ ಇಟ್ಟಿದೆ.
Crime – ಮದುವೆಯ ನಂತರ ಶುರುವಾದ ಹಿಂಸೆಯ ನರಕ
ತಪಸೀಹಳ್ಳಿಯ ನಿವಾಸಿ ಪುಷ್ಪಾ ಅವರು ಕಳೆದ ವರ್ಷ ವೇಣು ಎಂಬ ಯುವಕನೊಂದಿಗೆ ವಿವಾಹವಾಗಿದ್ದರು. ಆದರೆ, ಮದುವೆಯಾದ ಆರಂಭದಿಂದಲೇ ಆಕೆಯ ದಾಂಪತ್ಯ ಜೀವನ ಕಷ್ಟಕರವಾಗಿತ್ತು. ಗಂಡನ ಮನೆಯವರು ವರದಕ್ಷಿಣೆ ಮತ್ತು ನಿವೇಶನಕ್ಕಾಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಪುಷ್ಪಾ ವಿಡಿಯೋದಲ್ಲಿ ವಿವರಿಸಿದ್ದಾರೆ ಮತ್ತು ಮೃತಳ ಕುಟುಂಬದವರು ಕೂಡ ಆರೋಪಿಸಿದ್ದಾರೆ.
Crime – ‘ಮಗು ಬೇಕಿದ್ದರೆ ಮೈದುನನ ಜೊತೆ ಮಲಗು’ ಎಂದ್ರಂತೆ
ಆರ್ಥಿಕ ಕಿರುಕುಳದ ಜೊತೆಗೆ ಪುಷ್ಪಾ ಅವರಿಗೆ ಮಾನಸಿಕವಾಗಿ ಮತ್ತು ವೈಯಕ್ತಿಕವಾಗಿ ಭಾರಿ ಹಿಂಸೆ ನೀಡಲಾಗಿತ್ತು. ಗಂಡ ವೇಣು ಅವರು ತಮ್ಮ ಪತ್ನಿಯೊಂದಿಗೆ ಸಹಜ ದಾಂಪತ್ಯ ನಡೆಸದಿರುವುದು ಮಾತ್ರವಲ್ಲದೆ, “ಮಗು ಬೇಕು ಎಂದರೆ ಮೈದುನನ ಜೊತೆ ಮಲಗು” ಎಂದು ಹೇಳಿದ್ದರು ಎಂಬ ಅಮಾನವೀಯ ಸಂಗತಿ ಬೆಳಕಿಗೆ ಬಂದಿದೆ. ಅತ್ತೆ ಮತ್ತು ಇತರ ಕುಟುಂಬ ಸದಸ್ಯರು ಕೂಡ ಈ ರೀತಿಯ ಮಾನಹಾನಿ ಉಂಟು ಮಾಡುವ ಮಾತುಗಳನ್ನು ಹೇಳುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ರೀತಿಯ ಸತತ ಮಾನಸಿಕ ಹಿಂಸೆ ಮತ್ತು ನಿಂದನೆಗಳಿಂದ ಬೇಸತ್ತ ಪುಷ್ಪಾ ಕೊನೆಗೆ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ.

Crime – ವಿಡಿಯೋದಲ್ಲಿ ದಾಖಲಾದ ಕಣ್ಣೀರಿನ ಆಕ್ರಂದನ
ಆತ್ಮಹತ್ಯೆಗೂ ಮುನ್ನ ಚಿತ್ರೀಕರಿಸಿದ ವಿಡಿಯೋದಲ್ಲಿ ಪುಷ್ಪಾ ಅವರು, ತಾನು ಎದುರಿಸುತ್ತಿದ್ದ ನರಕ ಮತ್ತು ಕುಟುಂಬಸ್ಥರ ವರ್ತನೆ ಬಗ್ಗೆ ಕಣ್ಣೀರಿನೊಂದಿಗೆ ಮಾತನಾಡಿದ್ದಾರೆ. Read this also : ರಸ್ತೆಯಲ್ಲಿ ಕಿರುಕುಳ ನೀಡಿದವನಿಗೆ ತಕ್ಕ ಪಾಠ ಕಲಿಸಿದ ಅನಂತಪುರಂ ಯುವತಿ – ವಿಡಿಯೋ ವೈರಲ್
“ನನಗೆ ಕೊಟ್ಟಿರೋ ಹಿಂಸೆ ಒಂದೊಂದಲ್ಲ, ನಾನು ನೋಡಿರೋ ನರಕ ಒಂದೊಂದಲ್ಲ. ನನ್ನನ್ನು ಸಾಯಿಸುವ ಪ್ರಯತ್ನ ಕೂಡ ಮಾಡಿದ್ದರು. ನನ್ನ ಸಾವಿಗೆ ನನ್ನತ್ತೆ ಭಾರತಿ, ಮಾವ ಗೋವಿಂದಪ್ಪ, ಮೈದುನ ನಾರಾಯಣಸ್ವಾಮಿ, ಗಂಡ ವೇಣು, ಮತ್ತು ಗಂಡನ ಚಿಕ್ಕಪ್ಪ-ಚಿಕ್ಕಮ್ಮ ಸೇರಿದಂತೆ ಒಟ್ಟು ಆರು ಜನ ಕಾರಣರು,” ಎಂದು ಪುಷ್ಪಾ ಅವರು ವಿಡಿಯೋದಲ್ಲಿ ನೇರವಾಗಿ ಹೆಸರಿಸಿದ್ದಾರೆ. ಅವರ ಕೊನೆಯ ಆಸೆಯೆಂದರೆ, “ನನ್ನ ಹೆಣನ ಗಂಡನ ಮನೆಯವರ ಊರಲ್ಲೇ, ಅವರ ಮನೆಯಲ್ಲೇ ಹೂಳಬೇಕು. ನನ್ನ ಸಾವಿಗೆ ನ್ಯಾಯ ಒದಗಿಸಬೇಕು,” ಎಂಬುದಾಗಿತ್ತು.
Crime – ಪೊಲೀಸ್ ತನಿಖೆ ಮತ್ತು ನ್ಯಾಯದ ಬೇಡಿಕೆ
ಈ ಘಟನೆ ಸಂಬಂಧ ದೊಡ್ಡಬಳ್ಳಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಪುಷ್ಪಾ ಅವರ ವಿಡಿಯೋ ಮತ್ತು ಕುಟುಂಬಸ್ಥರ ದೂರಿನ ಆಧಾರದ ಮೇಲೆ, ಹೆಸರಿಸಲಾದ ಆರು ಜನರ ವಿರುದ್ಧ ಗೃಹ ಹಿಂಸೆ ಮತ್ತು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪಗಳಡಿ ತನಿಖೆ ಆರಂಭಿಸಲಾಗಿದೆ. ವರದಕ್ಷಿಣೆ, ನಿವೇಶನ ಮತ್ತು ದಾಂಪತ್ಯದ ಹಕ್ಕುಗಳ ವಿಷಯದಲ್ಲಿ ನೀಡಿದ ಕಿರುಕುಳವು ಯುವ ಉಪನ್ಯಾಸಕಿಯ ಅಮೂಲ್ಯ ಜೀವವನ್ನು ಬಲಿ ತೆಗೆದುಕೊಂಡಿದೆ.
