Crime – ಪ್ರೀತಿ ಮತ್ತು ವಿಶ್ವಾಸದ ಮೇಲೆ ಕಟ್ಟಿದ 11 ವರ್ಷಗಳ ದಾಂಪತ್ಯಕ್ಕೆ ಬನ್ನೇರುಘಟ್ಟದ ಮಹಿಳೆಯೊಬ್ಬಳು ಕೊಳ್ಳಿ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂರು ಮಕ್ಕಳ ತಾಯಿಯಾದ ಲೀಲಾವತಿ, ತನ್ನ ಪ್ರಿಯಕರನೊಂದಿಗೆ ಮನೆ ತೊರೆದು ಹೋಗಿದ್ದಾಳೆ. ಇದರಿಂದ ಗಂಡ ಮತ್ತು ಮಕ್ಕಳು ಅನಾಥರಾಗಿ ಕಣ್ಣೀರು ಹಾಕುತ್ತಿದ್ದಾರೆ.

Crime – ಲೀಲಾ-ಮಂಜುನಾಥ್ ಪ್ರೀತಿ ಕಥೆ?
11 ವರ್ಷಗಳ ಹಿಂದೆ ಮಂಜುನಾಥ್ ಮತ್ತು ಲೀಲಾವತಿ ಪ್ರೀತಿಸಿ ಮದುವೆಯಾಗಿದ್ದರು. ಒಬ್ಬ ಕ್ಯಾಬ್ ಡ್ರೈವರ್ ಆಗಿದ್ದ ಮಂಜುನಾಥ್ ತನ್ನ ಕುಟುಂಬವನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಆದರೆ, ಈ ಪ್ರೀತಿಯ ಬಂಧಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಲೀಲಾವತಿಗೆ ಪರಿಚಯವಾದ ಸಂತೋಷ್ ಎಂಬಾತನಿಂದ ಕೊಳ್ಳಿ ಬಿತ್ತು. ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಅಕ್ರಮ ಸಂಬಂಧವಾಗಿ ಬದಲಾಯಿತು.
Crime – ಪತಿಯ ಕಣ್ಣಿಗೆ ಬಿದ್ದ ಲೀಲಾವತಿ ಮೋಸ
ಲೀಲಾವತಿಯ ವರ್ತನೆಯಲ್ಲಿ ಬದಲಾವಣೆ ಗಮನಿಸಿದ ಮಂಜುನಾಥ್, ಒಂದು ದಿನ ಅವಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ನಿರ್ಧರಿಸಿದರು. ಎಂದಿನಂತೆ ಕೆಲಸಕ್ಕೆ ಹೋಗುವುದಾಗಿ ಹೇಳಿ, ಮನೆಯ ಸಮೀಪವೇ ಕಾರಿನಲ್ಲಿ ಕಾಯುತ್ತಿದ್ದರು. ಲೀಲಾವತಿ ಮಂಜುನಾಥ್‌ಗೆ ಫೋನ್ ಮಾಡಿ, “ಎಲ್ಲಿದ್ದೀರಾ?” ಎಂದು ಕೇಳಿದಾಗ, ಅವರು ಕೆಲಸದಲ್ಲಿರುವುದಾಗಿ ಹೇಳಿದರು. ಮಂಜುನಾಥ್ ಮನೆಯಲ್ಲಿ ಇಲ್ಲ ಎಂದು ತಿಳಿದ ಲೀಲಾವತಿ ತಕ್ಷಣವೇ ತನ್ನ ಪ್ರಿಯಕರ ಸಂತೋಷ್‌ನನ್ನು ಮನೆಗೆ ಕರೆಸಿಕೊಂಡಳು. ಸರಿಯಾದ ಸಮಯಕ್ಕೆ ಮನೆಗೆ ಎಂಟ್ರಿ ಕೊಟ್ಟ ಮಂಜುನಾಥ್, ಇಬ್ಬರನ್ನೂ ನೋಡಿ ಆಘಾತಗೊಂಡರು.
Crime – ಪೊಲೀಸ್ ಠಾಣೆಯಲ್ಲಿ ತಾಳಿ ಕಿತ್ತ ಮಹಿಳೆ!
ಘಟನೆ ವಿಕೋಪಕ್ಕೆ ಹೋಗಿ ಬನ್ನೇರುಘಟ್ಟ ಪೊಲೀಸ್ ಠಾಣೆ ಮೆಟ್ಟಿಲೇರಿತು. ಪೊಲೀಸರು ಎಷ್ಟೇ ಸಮಾಧಾನಪಡಿಸಲು ಪ್ರಯತ್ನಿಸಿದರೂ ಲೀಲಾವತಿ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ತನಗೆ ತನ್ನ ಪ್ರಿಯಕರ ಸಂತೋಷ್ ಮಾತ್ರ ಬೇಕು ಎಂದು ಖಡಾಖಂಡಿತವಾಗಿ ಹೇಳಿದಳು. ತನ್ನ ಪತಿ ಮಂಜುನಾಥ್ ಕೈಗೆ ತಾಳಿ ಕೊಟ್ಟು ನೇರವಾಗಿ ಸಂತೋಷ್ ಜೊತೆ ತೆರಳಿದಳು. ಈ ಘಟನೆ ಮೂರು ಮಕ್ಕಳ ಬದುಕನ್ನು ಅಂಧಕಾರಕ್ಕೆ ದೂಡಿದೆ. Read this also : ಗಂಡನ ಕಣ್ಣಿಗೆ ಖಾರದ ಪುಡಿ ಎರಚಿ, ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿದ ಹೆಂಡತಿ…!

Crime – ಮತ್ತೊಬ್ಬನ ಜೊತೆಗೂ ಇತ್ತು ಸಂಪರ್ಕ?
ಲೀಲಾವತಿ ಕೇವಲ ಸಂತೋಷ್‌ನೊಂದಿಗೆ ಮಾತ್ರವಲ್ಲದೆ ಮತ್ತೊಬ್ಬನ ಜೊತೆಗೂ ಸಂಪರ್ಕ ಹೊಂದಿದ್ದಳು ಎಂದು ಮಂಜುನಾಥ್ ಆರೋಪಿಸಿದ್ದಾರೆ. ಅಲ್ಲದೆ, ಮಂಜುನಾಥ್ ಮದುವೆಯಾಗುವುದಕ್ಕಿಂತ ಮೊದಲೇ ಲೀಲಾವತಿಗೆ ಬೇರೊಬ್ಬನ ಜೊತೆ ಮದುವೆಯಾಗಿತ್ತು ಎಂಬ ರಹಸ್ಯವೂ ಈಗ ಬಯಲಾಗಿದೆ. ಈ ಬಗ್ಗೆ ಮಂಜುನಾಥ್ ಕೆಲವು ಫೋಟೋಗಳನ್ನು ಸಾಕ್ಷಿಯಾಗಿ ನೀಡಿದ್ದಾರೆ. ಈ ಘಟನೆ ಬೆಂಗಳೂರಿನಲ್ಲಿ ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
