Crime – ಬೆಳಗಾವಿಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದ ಘಟನೆಯೊಂದು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಬಾಲ್ಯದ ಗೆಳೆತನವೊಂದು ದುರಂತ ಅಂತ್ಯ ಕಂಡಿದ್ದು, ಅಕ್ರಮ ಸಂಬಂಧಕ್ಕೆ ನಿರಾಕರಿಸಿದ ಕಾರಣಕ್ಕೆ ಯುವಕನೊಬ್ಬ ತನ್ನ ಮಾಜಿ ಗೆಳತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಅದೇ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Crime – ಬಾಲ್ಯದ ಗೆಳೆತನ, ಪ್ರೀತಿ ಮತ್ತು ದುರಂತ
ಮೃತರನ್ನು ರೇಷ್ಮಾ ತಿರವಿರ (30) ಮತ್ತು ಆನಂದ ಸುತಾರ್ (31) ಎಂದು ಗುರುತಿಸಲಾಗಿದೆ. ಒಂದೇ ಗ್ರಾಮದವರಾದ ಇಬ್ಬರೂ ಬಾಲ್ಯದಿಂದಲೂ ಸ್ನೇಹಿತರು. ಈ ಗೆಳೆತನ ನಂತರ ಪ್ರೀತಿಗೆ ತಿರುಗಿತ್ತು. ಆದರೆ, ಕುಟುಂಬದವರ ಇಚ್ಛೆಯಂತೆ ರೇಷ್ಮಾ ಶಿವಾನಂದ್ ಎಂಬುವರೊಂದಿಗೆ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇದೇ ರೀತಿ ಆನಂದ ಕೂಡ ಬೇರೊಬ್ಬ ಯುವತಿಯನ್ನು ಮದುವೆಯಾಗಿ, ಮೂವರು ಮಕ್ಕಳನ್ನು ಪಡೆದಿದ್ದನು.
Crime – ಹಲವು ವರ್ಷಗಳ ನಂತರ ಮತ್ತೆ ಪ್ರೀತಿ, ಅಕ್ರಮ ಸಂಬಂಧಕ್ಕೆ ತಿರುವು
ಮದುವೆಯಾದ ಬಳಿಕವೂ ಆನಂದ ಮತ್ತು ರೇಷ್ಮಾ ನಡುವಿನ ಗೆಳೆತನ ಮುಂದುವರೆದಿತ್ತು. ಆದರೆ, ಕಳೆದ ಎರಡು ವರ್ಷಗಳಲ್ಲಿ ಅವರ ಸಂಬಂಧದ ಸ್ವರೂಪ ಬದಲಾಗಿತ್ತು. ಇದು ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತ್ತು. ಕಳೆದ ತಿಂಗಳು ರೇಷ್ಮಾ ಪತಿ ಶಿವಾನಂದ್, ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಇದರ ನಂತರ ಶಿವಾನಂದ್ ನಂದಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ಆನಂದನಿಗೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದರು. ಇದರಿಂದ ರೇಷ್ಮಾ ಆನಂದನಿಂದ ದೂರವಿರಲು ನಿರ್ಧರಿಸಿದ್ದರು. ಆದರೆ ಆನಂದ ಇದನ್ನು ಒಪ್ಪದೇ, ರೇಷ್ಮಾಳನ್ನು ಮತ್ತೆ ಭೇಟಿಯಾಗುವಂತೆ ಒತ್ತಾಯಿಸುತ್ತಿದ್ದನು. ಆಗ ರೇಷ್ಮಾ, “ಇದೆಲ್ಲ ಬೇಡ, ಇದನ್ನು ಇಲ್ಲಿಗೆ ಬಿಡೋಣ” ಎಂದು ಬುದ್ಧಿವಾದ ಹೇಳಿದ್ದರು. ಆದರೂ ಆನಂದ ತನ್ನ ಹಠ ಬಿಡಲಿಲ್ಲ.
Crime – ಕೊಲೆ ಮತ್ತು ಆತ್ಮಹತ್ಯೆ
ಶುಕ್ರವಾರ ಮುಂಜಾನೆ ರೇಷ್ಮಾ ಪತಿ ಶಿವಾನಂದ್ ಹಾಲು ಹಾಕಲು ಡೇರಿಗೆ ಹೋಗಿದ್ದರು. ಇದೇ ಸಮಯವನ್ನು ಸಾಧಿಸಿ ಆನಂದ ಹಿಂಬಾಗಿಲಿನಿಂದ ಮನೆಯೊಳಗೆ ನುಗ್ಗಿದ್ದಾನೆ. ಮಾತಿಗೆ ಮಾತು ಬೆಳೆದು ಕೋಪಗೊಂಡ ಆನಂದ, ರೇಷ್ಮಾಳ ಹೊಟ್ಟೆಗೆ 9 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತಾಯಿಯನ್ನು ಕೊಂದ ದೃಶ್ಯವನ್ನು ರೇಷ್ಮಾಳ ಮಗಳು ಕಣ್ಣಾರೆ ಕಂಡಿದ್ದಾಳೆ. ತೀವ್ರ ರಕ್ತಸ್ರಾವದಿಂದ ರೇಷ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೇಷ್ಮಾ ಮೃತಪಟ್ಟ ನಂತರ ಭಯಗೊಂಡ ಆನಂದ, ಅದೇ ಚಾಕುವಿನಿಂದ ತನ್ನ ಹೊಟ್ಟೆಗೆ ಐದಾರು ಬಾರಿ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. Read this also : ದೊಡ್ಡಬಳ್ಳಾಪುರ: ವಿದ್ಯಾರ್ಥಿನಿಯ ಜೊತೆ ಪಾರಾರಿಯಾಗಿದ್ದ ಕಾಲೇಜು ಪ್ರಾಧ್ಯಾಪಕ ಅರೆಸ್ಟ್…!
ವೈದ್ಯಕೀಯ ನೆರವು ಸಿಗದೇ ಇಬ್ಬರೂ ಸಾವು
ಚೀರಾಟದ ಶಬ್ದ ಕೇಳಿ ನೆರೆಹೊರೆಯವರು ಮನೆಯತ್ತ ಓಡಿ ಬಂದಿದ್ದಾರೆ. ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಆನಂದನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ದಾರಿ ಮಧ್ಯೆಯೇ ಆನಂದ ಸಾವನ್ನಪ್ಪಿದ್ದಾನೆ. ಬಳಿಕ ಇಬ್ಬರ ಶವವನ್ನು ಒಂದೇ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಈ ದುರಂತದಿಂದಾಗಿ ಎರಡು ಕುಟುಂಬಗಳಲ್ಲಿ ನೀರವ ಮೌನ ಮತ್ತು ದುಃಖ ಆವರಿಸಿದೆ.