Tuesday, November 5, 2024

CPIM: ನಿರುದ್ಯೋಗ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರಗಳು ವಿಫಲ: ಮುನಿವೆಂಕಟಪ್ಪ

CPIM – ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಚುನಾವಣಾ ಸಮಯದಲ್ಲಿ ಅವರು ನೀಡಿರುವ ಎಲ್ಲಾ ಆಶ್ವಾಸನೆಗಳು ಹುಸಿಯಾಗಿದೆ ಎಂದು (CPIM) ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಆರೋಪಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಸಿಪಿಐ(ಎಂ) ಪಕ್ಷದ ವತಿಯಿಂದ ತಾಲೂಕು ಮಟ್ಟದ 9ನೇ ಸಮ್ಮೇಳನದ ಪ್ರತಿನಿಧಿ ಅಧಿವೇಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

CPIM 9th Sammelana 1

ಚುನಾವಣೆ ಸಮಯದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳೆರಡೂ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ ಲಕ್ಷಗಟ್ಟಲೇ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ಎಂದು ಭರವಸೆ (CPIM) ನೀಡಿದ್ದರು. ಆದರೆ ಅವರ ಆಶ್ವಾಸನೆಗಳು ಹುಸಿಯಾಗಿದೆ. ನಿರುದ್ಯೋಗ ಸಮಸ್ಯೆ ಇನ್ನೂ ಹೆಚ್ಚಾಗುತ್ತಿದೆಯೇ ವಿನಃ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತಿಲ್ಲ. (CPIM) ಕಳೆದ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಕೂಟ ಭಾರಿ ಬಹುಮತದ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ವಿರೋಧ ಪಕ್ಷವೇ ಇಲ್ಲದಂತೆ ಮಾಡಿಕೊಂಡು ತಮಗೆ ಅನುಕೂಲವಾಗುವಂತಹ ಕಾಯ್ದೆಗಳನ್ನು ತರಲು ಪ್ಲಾನ್ ಮಾಡಿತ್ತು. (CPIM) ಆದರೆ ಮತದಾರರು ಅವರಿಗೆ ತಕ್ಕಪಾಠ ಕಲಿಸಿದ್ದಾರೆ.

ಇದೀಗ ಒಂದು ದೇಶ ಒಂದು ಚುನಾವಣೆ ಎಂಬುದನ್ನು (CPIM) ಪ್ರಚಾರ ಮಾಡುತ್ತಿದ್ದಾರೆ. ಒಂದು ದೇಶ ಒಂದು ಚುನಾವಣೆ ಮಾಡುವ ಮೂಲಕ ಚುನಾವಣಾ ಖರ್ಚು ಉಳಿಸಬಹುದು ಎಂದು ಜನರಿಗೆ ಯಾಮಾರಿಸುತ್ತಿದ್ದಾರೆ. ಆದರೆ ಒಂದು ದೇಶ ಒಂದು ಚುನಾವಣೆಯ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೆಲಸ ಮಾಡುವ ಹುನ್ನಾರ (CPIM) ಹೂಡಿದೆ. ಇನ್ನೂ ರಾಜ್ಯದ ವಿಚಾರಕ್ಕೆ ಬಂದರೇ, ಚುನಾವಣೆಯ ಸಮಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಗೆದ್ದ ಕಾಂಗ್ರೇಸ್ ಇದೀಗ ಏನು ಮಾಡುತ್ತಿದೆ. ಸರಿಯಾದ ರೀತಿಯ ಗ್ಯಾರಂಟಿಗಳು ಜನರಿಗೆ ತಲುಪುತ್ತಿಲ್ಲ (CPIM) ಎಂದು ಆರೋಪಿಸಿದರು.

CPIM 9th Sammelana 2

ಸಿಪಿಎಂ (CPIM) ಪಕ್ಷದ ನೂತನ ತಾಲೂಕು ಸಮಿತಿ ರಚನೆ:  ನೂತನ ಕಾರ್ಯದರ್ಶಿಯಾಗಿ ಹಂಪಸಂದ್ರ ಗ್ರಾಮದ ವೆಂಕಟರಾಜು ಆಯ್ಕೆಯಾಗಿದರು. ಸದಸ್ಯರಾಗಿ ಜಯರಾಮರೆಡ್ಡಿ, ರಾಜಪ್ಪ, ಮೌಲಾಸಾಬಿ, ಆದಿಣಾರಾಯಣಸ್ವಾಮಿ, ಭಾಗ್ಯಮ್ಮ, ಸೀನಪ್ಪ, ಶ್ರೀನಿವಾಸ್, ದೇವರಾಜ್, ಶಿವಪ್ಪ, ಗಂಗರಾಜು, ಲಕ್ಷ್ಮೀನಾರಾಯಣ, ವೆಂಕಟರಮಣ, ಆದಿನಾರಾಯಣ ರವರುಗಳು ಆಯ್ಕೆಯಾಗಿದ್ದಾರೆ.

CPIM ಸಮ್ಮೇಳನದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು:

  • ತಾಲೂಕಿನಲ್ಲಿ ಕೃಷಿಯಾಧಾರಿತ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವಂತೆ ನಿರ್ಣಯ ಅಂಗೀಕಾರ ಮಾಡಲಾಯಿತು.
  • ತಾಲೂಕಿನ ಎಲ್ಲಾ ಬಡ ಕುಟುಂಬಗಳಿಗೆ ನಿವೇಶನ ಹಾಗೂ ಭೂಮಿ ನೀಡುವಂತೆ ಸಮರ್ಪಕ ಜಾರಿಗಾಗಿ ನಿರ್ಣಯವನ್ನು ಕೈಗೊಳ್ಳಲಾಯಿತು.
  • ತಾಲೂಕಿನಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಾರಿಗೆ ವ್ಯವಸ್ಥೆ ಶೈಕ್ಷಣಿಕ ಹಾಗೂ ಶಿಕ್ಷಕರ ಶಿಕ್ಷಕರ ಕೊರತೆ ಕಟ್ಟಡಗಳ ಸೋರುವಿಕೆ ಸಮರ್ಪಕ ಬಸ್ ಸೌಲಭ್ಯ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ನಿರ್ಣಯವನ್ನು ಕೈಗೊಳ್ಳಲಾಯಿತು
  • ತಾಲೂಕಿನಲ್ಲಿ ಗುಡಿ ಕೈಗಾರಿಕೆಗಳು ಸ್ಥಾಪನೆಕ್ಕಾಗಿ ಹಾಗೂ ತಾಲೂಕಿನ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರದ ಮೇಲೆ ಒತ್ತಡ ತರಲು ನಿರ್ಣಯವನ್ನು ಅಂಗೀಕಾರ ಮಾಡಲಾಯಿತು
  • ತಾಲೂಕಿನಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಅಂಗೀಕಾರ ನಿರ್ಣಯವನ್ನು ಮಾಡಲಾಯಿತು

ಈ ವೇಳೆ ಸಿಪಿಎಂ ಪಕ್ಷದ ಬಾಗೇಪಲ್ಲಿ ತಾಲೂಕು ಕಾರ್ಯದರ್ಶಿ ಸಿದ್ದಗಂಗಪ್ಪ, ಸಿಪಿಎಂ ಮುಖಂಡರಾದ ಚನ್ನರಾಯಪ್ಪ, ಜಯರಾಮರೆಡ್ಡಿ, ಶಿವಪ್ಪ, ಆದಿನಾರಾಯಣಸ್ವಾಮಿ, ಶ್ರೀನಿವಾಸ್, ರಮಣ ಸೇರಿದಂತೆ ಹಲವರು ಇದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!