Siddaramaiah – ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವಂತಹ ಮುಡಾ ಹಗರಣದ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದು, ಈ ವೇಳೆ ಕಾಂಗ್ರೇಸ್ ಹೈಕಮಾಂಡ್ (Siddaramaiah) ಸಿಎಂ ಸಿದ್ದರಾಮಯ್ಯನವರಿಗೆ ಅಭಯ ನೀಡಿದೆ. ಕಾನೂನು ಹೋರಾಟದ ಮೂಲಕವೇ ಉತ್ತರ ನೀಡಿ ಎಂದು ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ಕಾಂಗ್ರೇಸ್ ಹೈಕಮಾಂಡ್ ಸಲಹೆ ನೀಡಿ ಅಭಯ ನೀಡಿದೆ.
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಮುಡಾ ಸೈಟು ಹಂಚಿಕೆ ಹಗರಣ (MUDA Scam) ಸದ್ಯ ದೆಹಲಿಯ ಅಂಗಳಕ್ಕೆ ತಲುಪಿದೆ. ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ (Siddaramaiah) ವಿರುದ್ದ ನೀಡಿದ್ದ ಪ್ರಾಸಿಕ್ಯೂಷನ್ ಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಸಿಎಂ ಹಾಗೂ ಡಿಸಿಎಂ ಜಂಟಿಯಾಗಿ ಹೈಕಮಾಂಡ್ ಗೆ ವಿವರಿಸಿದ್ದಾರೆ. ಸಂಪುಟ ಸಭೆಯ ನಿರ್ಣಯ, ಶಾಸಕಾಂಗ ಪಕ್ಷದ ಸಭೆ, ಮುಡಾ (MUDA Scam) ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ 100 ಪುಟಗಳ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ. (Siddaramaiah) ಸಿಎಂ ಹಾಗೂ ಡಿಸಿಎಂ (D K Shivakumar) ವರದಿ ಸೇರಿದಂತೆ ಎಲ್ಲವನ್ನೂ ಆಲಿಸಿದ ಹೈಕಮಾಂಡ್, ಸಿಎಂ ಸಿದ್ದು ಬೆಂಬಲಕ್ಕೆ ನಿಂತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಿದೆ, ನಾವು ನಿಮ್ಮೊಂದಿಎಗೆ ಇದ್ದೇವೆ. (Siddaramaiah) ಗ್ಯಾರಂಟಿಗಳನ್ನು ನೋಡಿ ಬಿಜೆಪಿ ದೋಸ್ತಿ ಭಯಪಟ್ಟಿದೆ. ರಾಜ್ಯಪಾಲರನ್ನು ಬಳಸಿಕೊಂಡು ಹಿಂದುಳಿದ ನಾಯಕನ ಮೇಲೆ ದಾಳಿ ನಡೆಸುವ ಪ್ರಯತ್ನ ಮಾಡುತ್ತಿದೆ ಎಂದು ಕಾಂಗ್ರೇಸ್ ಹೈಕಮಾಂಡ್ ಆರೋಪಿಸಿದೆ.
ಇನ್ನೂ ಈ ಸಂಬಂಧ ಬಿಜೆಪಿ ಏನೇ ಆರೋಪ ಮಾಡಿದರೂ ನೀವು ತಲೆಗೆಡಿಸಿಕೊಳ್ಳಬೇಡಿ. (Siddaramaiah) ಹೈಕೋರ್ಟ್ ಆಗಲಿ, ಸುಪ್ರೀಂ ಕೋರ್ಟ್ ಆಗಲಿ ಕಾನೂನು ಹೋರಾಟ ಮುಂದುವರೆಸಿ ಎಂದು ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕಾಂಗ್ರೇಸ್ ನ ಗ್ಯಾರಂಟಿಗಳನ್ನು(Siddaramaiah) ಸಹಿಸಿಕೊಳ್ಳಲಾಗದೇ ಬಿಜೆಪಿ-ಜೆಡಿಎಸ್ ಸಿಎಂ ವಿರುದ್ದ ಆರೋಪ ಮಾಡುತ್ತಿದೆ. ಅಗತ್ಯ ಎನ್ನಿಸಿದ ಪ್ರಕರಣಗಳನ್ನು ತನಿಖೆಗೆ ನೀಡಿ. (Siddaramaiah) ಸಿಎಂ ಬೆನ್ನಿಗೆ ಎಲ್ಲರೂ ನಿಲ್ಲಬೇಕು, ಗೊಂದಲವಿಲ್ಲದೇ ಒಗ್ಗಟ್ಟಾಗಿ ಹೋರಾಟ ಮಾಡಿ ಎಂದು ರಾಜ್ಯ ನಾಯಕರಿಗೆ ಸಲಹೆ ನೀಡಿದ್ದಾರೆ.