ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರೂ ಮೊಬೈಲ್ ಬಳಸುತ್ತಿದ್ದಾರೆ. ಮೊಬೈಲ್ ಬಳಸದೇ ಇರೋರು ತುಂಬಾನೆ ವಿರಳ ಎನ್ನಬಹುದು ಆದರೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮೊಬೈಲ್ ಬಳಸೊಲ್ಲವಂತೆ. ಈ ವಿಚಾರವನ್ನು ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಪತ್ರಿಕಾ ದಿನಾಚರಣೆಯ ಅಂಗವಾಗಿ ಮಾದ್ಯಮ ಸಾಮಾಜಿಕ ಜಾಲತಾಣ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಕೂಲಿ ಮಾಡುವ ವ್ಯಕ್ತಿಯಿಂದ ಹಿಡಿದು ಪ್ರತಿಯೊಬ್ಬರು ಇಂದು ಮೊಬೈಲ್ ಬಳಸುತ್ತಾರೆ. ಅದರಲ್ಲೂ ಇಂದಿನ ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಪೋನ್ ಬಳಕೆ ಸಹ ಹೆಚ್ಚಾಗಿದೆ. ಅನೇಕರು ದೊಡ್ಡ ಗಣ್ಯರು, ರಾಜಕೀಯ ವ್ಯಕ್ತಿಗಳು, ಸಿನೆಮಾ ಸೆಲೆಬ್ರೆಟಿಗಳು ಯಾವೇಲ್ಲಾ ಪೋನ್ ಗಳನ್ನು ಬಳಸುತ್ತಾರೆ ಎಂಬ ಕುತೂಹಲ ಇರುತ್ತದೆ. ಸದ್ಯ ಸಿದ್ದರಾಮಯ್ಯ ಯಾವ ಮೊಬೈಲ್ ಬಳಸುತ್ತಾರೆ ಎಂಬ ಕುತೂಹಲ ಹಲವರಲ್ಲಿರುತ್ತದೆ. ಆದರೆ ಸಿಎಂ ಸಿದ್ದು ಯಾವುದೇ ಮೊಬೈಲ್ ಬಳಸೋಲ್ಲವಂತೆ. ಈ ವಿಚಾರವನ್ನು ಬೇರೆ ಯಾರೂ ಹೇಳಿಲ್ಲ, ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಅಂಗವಾಗಿ ಮಾಧ್ಯಮ ಸಾಮಾಜಿಕ ಜಾಲತಾಣ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಈ ವಿಚಾರ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಮಾತನಾಡುತ್ತಾ ಫಸ್ಟಾಫಲ್ ನಾನು ಮೊಬೈಲ್ ಇಟ್ಟುಕೊಂಡಿಲ್ಲ. ಆದರೆ ನ್ನ ಮಗ ಹೇಳ್ತಾ ಇರ್ತಾನೆ ಸರ್ಕಾರದ ಬಗ್ಗೆ ಈ ರೀತಿಯ ಅಭಿಪ್ರಾಯ ಬರ್ತಾ ಇರುತ್ತದೆ ಅಂತಾ, ಆರು ತಿಂಗಳು ನಾನು ಮೊಬೈಲ್ ಪೋನ್ ಇಟ್ಟುಕೊಂಡಿದ್ದೆ. ಆವಾಗ ರಾತ್ರಿ ಸಿಕ್ಕಾಪಟ್ಟೆ ಪೋನ್ ಗಳು ಬರುತ್ತಿದ್ದವು, ನಿದ್ದೆ ಮಾಡೋಕೆ ಆಗ್ತಾ ಇರಲಿಲ್ಲ. ಆದ್ದರಿಂದ ನಾನು ಪೋನ್ ಇಟ್ಟುಕೊಳ್ತಿಲ್ಲ. ಆಪ್ತರ ಮೂಲಕ ನಾನು ಏನಾದರೂ ಇದ್ದರೇ ಮಾಹಿತಿ ಪಡೆಯುತ್ತೇನೆ ಎಂತಾ ಹೇಳಿದರು. ಇನ್ನೂ ಸೋಷಿಯಲ್ ಮಿಡಿಯಾ ಬಹಳ ಬೇಗ ಜನರನ್ನು ಮುಟ್ಟುವಂತಹ ಮಾದ್ಯಮವಾಗಿದೆ. ಈ ಹಿಂದೆ ಎಲೆಕ್ಟ್ರಾನಿಕ್ ಹಾಗೂ ಪ್ರಿಂಟ್ ಮಿಡಿಯಾ, ಟಿವಿ ಚಾನಲ್, ರೇಡಿಯೋಗಳ ಮೂಲಕ ಸುದ್ದಿ ತಿಳಿದುಕೊಳ್ತಾ ಇದ್ದೀವಿ. ಆದರೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಬಹಳ ವೇಗವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದೇ ಎಂದರು.
ಇನ್ನೂ ಇದೇ ಸಮಯದಲ್ಲಿ ಫೇಕ್ ನ್ಯೂಸ್ ಬಗ್ಗೆ ಸಹ ಮಾತನಾಡಿದ್ದಾರೆ. ಸೋಷಿಯಲ್ ಮಿಡಿಯಾ ಎಷ್ಟು ಉಪಯೋಗವೋ ಅಷ್ಟು ಕೆಟ್ಟದು ಸಹ. ಅದನ್ನು ಒಳ್ಳೆಯ ರೀತಿಯಲ್ಲಿ, ಸತ್ಯ ಸಂಗತಿಗಳನ್ನು ಜನರಿಗೆ ತಿಳಿಸಿದರೇ ಚೆನ್ನಾಗಿರುತ್ತದೆ. ಫೇಕ್ ನ್ಯೂಸ್ ಗಳಿಂದ ಸಮಾಜಕ್ಕೆ ತೊಂದರೆಯಾಗುತ್ತದೆ. ಫೇಕ್ ನ್ಯೂಸ್ ಗಳನ್ನು ನಿಯಂತ್ರಣ ಮಾಡಲು ಪ್ರತಿ ಜಿಲ್ಲೆಗಳಲ್ಲೂ ಒಂದೊಂದು ಘಟಕಗಳನ್ನು ಮಾಡಿದ್ದೇವೆ. ಫೆಸಿಫಿಕ್ ಆಗಿ, ಸುದ್ದಿ ಕಲೆಕ್ಟ್ ಮಾಡುವಂತಹವರು, ಸುದ್ದಿ ಎಡಿಟ್ ಮಾಡುವಂತವರು ಇದ್ದಾರೆ. ಇದರಲ್ಲಿ ಯಾರೂ ಬೇಕಾದರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಬಹುದು ಎಂದರು.