Saturday, January 24, 2026
HomeStateNSS Camp: ವರ್ಲಕೊಂಡ ಗ್ರಾಮದಲ್ಲಿ ಎನ್.ಎಸ್.ಎಸ್ ಶಿಬಿರದಲ್ಲಿ ಸ್ವಚ್ಚತಾ ಅಭಿಯಾನ….!

NSS Camp: ವರ್ಲಕೊಂಡ ಗ್ರಾಮದಲ್ಲಿ ಎನ್.ಎಸ್.ಎಸ್ ಶಿಬಿರದಲ್ಲಿ ಸ್ವಚ್ಚತಾ ಅಭಿಯಾನ….!

ಪೆರೇಸಂದ್ರ ಪ್ರಕೃತಿ ಪದವಿ ಪೂರ್ವ ಕಾಲೇಜು ವತಿಯಿಂದ ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ ಗ್ರಾಮದಲ್ಲಿ 2024-25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ (NSS Camp) ವಾರ್ಷಿಕ ವಿಶೇಷ 7 ದಿನಗಳ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

NSS Camp in Varlakonda 0

ಈ ಶಿಬಿರದಲ್ಲಿ (NSS Camp)  ವರ್ಲಕೊಂಡ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಎಲ್.ಎ‌. ಬಾಬು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಮತ್ತು ಉತ್ತಮ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕಾದರೆ ಈ ಎನ್ ಎಸ್ ಎಸ್ (NSS Camp)  ಶಿಬಿರವು ಉತ್ತಮವಾದ ದಾರಿದ್ವೀಪವಾಗಿದೆ. ಅದನ್ನು ಉಪಯೋಗಿಸಿಕೊಂಡು ಭಾರತದ ಉತ್ತಮ ಪ್ರಜೆಗಳಾಗಿ ರೂಪಿಸಿಕೊಳ್ಳಿ ಎಂದು ತಿಳಿಸಿದರು.

ನಂತರ ಸೂರ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ  ಶಿವಣ್ಣರವರು ಮಾತನಾಡಿ ಜೀವನದಲ್ಲಿ ಏನಾದರೂ ಕಲಿಯಬೇಕಾದರೆ ಈ ಶಿಬಿರವು (NSS Camp) ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಂಡುತ್ತದೆ. ನಿಮ್ಮ ಜೀವನದ ಉದ್ದಕ್ಕೂ ನಿಮ್ಮನ್ನು ಅತ್ಯಂತ ಗೌರವ ಘನತೆಗಳನ್ನು ರೂಪಿಸಿಕೋಳ್ಳುತ್ತದೆ ಎಂದು ತಿಳಿಸಿದರು.

NSS Camp in Varlakonda 2

ಈ ವೇಳೆ (NSS Camp) ಎನ್.ಎಸ್.ಎಸ್ ವಿದ್ಯಾರ್ಥಿಗಳು ವರ್ಲಕೊಂಡ ಗ್ರಾಮದ ವಿವಿಧ ಬ್ಲಾಕ್ ಗಳಲ್ಲಿ ಸ್ವಚ್ಚತೆ ಮಾಡಿದರು.  ಈ ಕಾರ್ಯಕ್ರಮದಲ್ಲಿ (NSS Camp)  ಗ್ರಾಮ ಪಂಚಾಯಿತಿಯ ಅಧ್ಯಕ್ಷ ಭೀಮಪ್ಪ, ರಾಮಾಂಜಿ, ಪ್ರಕೃತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ವೈ ಮುನಿಕೃಷ್ಣಪ್ಪ. ಆಡಳಿತಾದಿಕಾರಿ ಡಾ.ಶ್ರೀನಿವಾಸ್ ಹಾಗೂ ಕಾಲೇಜಿನ ಸಿಬ್ಬಂದಿ, ಎಲ್ಲಾ ಎನ್ ಎಸ್ ಎಸ್ ಶಿಬಿರಾರ್ಥಿಗಳು ಭಾಗವಹಿಸಿದ್ದರು.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular