Tuesday, June 24, 2025
HomeSpecialAadhaar ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಲಿಂಕ್ ಆಗಿದೆಯಾ ಇಲ್ವಾ ಎಂಬುದನ್ನು ಹೀಗೆ ಚೆಕ್ ಮಾಡಿ…!

Aadhaar ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಲಿಂಕ್ ಆಗಿದೆಯಾ ಇಲ್ವಾ ಎಂಬುದನ್ನು ಹೀಗೆ ಚೆಕ್ ಮಾಡಿ…!

Aadhaar ಕಾರ್ಡ್ ಎಂಬುದು ಸದ್ಯ ಭಾರತದಲ್ಲಿ ತುಂಬಾನೆ ಪ್ರಾಮುಖ್ಯತೆ ವಹಿಸುತ್ತಿದೆ ಎಂದೇ ಹೇಳಬಹುದು. ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಸೇರಿದಂತೆ ಅನೇಕ ಕೆಲಸ ಕಾರ್ಯಗಳಿಗೆ ಆಧಾರ್‍ ನಂಬರ್‍ ತುಂಬಾನೆ ಮುಖ್ಯವಾಗಿದೆ. ಆಧಾರ್‍ ಕಾರ್ಡ್ ಅಪ್ಡೇಟ್ ಗಾಗಿ, ಹೊಸ ಆಧಾರ್‍ ಕಾರ್ಡ್ ಗಾಗಿ ಈಗಲೂ ಸಹ ಅನೇಕರು ಪರದಾಡುವಂತಾಗಿದೆ ಎಂದು ಹೇಳಬಹುದು. ಸದ್ಯ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಮೊಬೈಲ್ ನಂಬರ್‍ ಲಿಂಕ್ ಆಗಿದೆ ಎಂಬುದನ್ನು (Aadhaar) ತಿಳಿಯಲು ನೀವು ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಬಹುದು.

Adhaar card mobile number link chekking 1

ಆಧಾರ್‌ನಲ್ಲಿ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಅನ್ನು ಚೆಕ್ ಮಾಡಲು ನೀವು UIDAI ವೆಬ್‌ಸೈಟ್ ಅಥವಾ mAadhaar ಅಪ್ಲಿಕೇಶನ್ ಬಳಸಬಹುದು. ಈ ಕೆಳಗೆ ತಿಳಿಸಲಾದ ಹಂತಗಳನ್ನು ಫಾಲೋ ಮಾಡಬಹುದು.

  1. UIDAI ವೆಬ್‌ಸೈಟ್ ಮೂಲಕ:
  • UIDAI ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ.
  • “My Aadhaar” ಸೆಕ್ಷನ್ ಆಯ್ಕೆ ಮಾಡಿ.
  • “Verify Email/Mobile Number” ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆ ಮತ್ತು ಇಮೇಲ್ ಅಥವಾ ಮೊಬೈಲ್ ನಂಬರ್ ನಮೂದಿಸಿ.
  • Captcha ಭರ್ತಿ ಮಾಡಿ ಮತ್ತು “Send OTP” ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್ ಅಥವಾ ಇಮೇಲ್‌ಗೆ ಬಂದ OTP ನಮೂದಿಸಿ.
  • ನಂಬರ್ ಅಥವಾ ಇಮೇಲ್ ಚಲಿಸುವ/ಸಮರ್ಪಕವಿದೆಯೇ ಎಂದು ನೀವು ತಕ್ಷಣ ತಿಳಿಯಬಹುದು.
  1. mAadhaar ಅಪ್ಲಿಕೇಶನ್ ಮೂಲಕ:
  • ನಿಮ್ಮ ಮೊಬೈಲ್‌ನಲ್ಲಿ mAadhaar ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
  • ನಿಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿ.
  • App ನಲ್ಲಿ “Verify Email/Mobile Number” ಆಯ್ಕೆ ಮಾಡಿ.
  • ಕೋರಿದ ಮಾಹಿತಿಯನ್ನು ನೀಡಿದ ಮೇಲೆ ನೀವು ನೋಂದಾಯಿತ ಮಾಹಿತಿಯನ್ನು ಪರಿಶೀಲಿಸಬಹುದು.

ಗಮನಿಸಿ: ನಿಮ್ಮ ಇಮೇಲ್ ಅಥವಾ ಮೊಬೈಲ್ ನಂಬರ್ ನೋಂದಾಯಿಸದಿದ್ದರೆ, ನಿಮ್ಮ ಆಧಾರ್ ನೋಂದಣಿ ಕೇಂದ್ರವನ್ನು ಭೇಟಿ ಮಾಡಿ. ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ UIDAI ಕಸ್ಟಮರ್ ಕೇರ್: 1947 ಸಂಖ್ಯೆಯನ್ನು ಸಂಪರ್ಕಿಸಬಹುದು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular