HomeNationalChandrashila Temple Video : ಚಂದ್ರಶಿಲಾ ದೇವಾಲಯದ ಬಳಿ ಶೂ ಧರಿಸಿದ ಪ್ರವಾಸಿಗರು: ಧಾರ್ಮಿಕ ಭಾವನೆಗೆ...

Chandrashila Temple Video : ಚಂದ್ರಶಿಲಾ ದೇವಾಲಯದ ಬಳಿ ಶೂ ಧರಿಸಿದ ಪ್ರವಾಸಿಗರು: ಧಾರ್ಮಿಕ ಭಾವನೆಗೆ ಧಕ್ಕೆ ತಂದವರ ಬೆವರಿಳಿಸಿದ ಯುವಕನ ವಿಡಿಯೋ ವೈರಲ್!

ದೇವಸ್ಥಾನಗಳಿಗೆ ಭೇಟಿ ನೀಡುವಾಗ ನಾವು ಪಾಲಿಸಬೇಕಾದ ಕೆಲವು ಕನಿಷ್ಠ ನಿಯಮಗಳು ಮತ್ತು ಭಕ್ತಿಯ ಗೌರವಗಳಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವರು ಸಾರ್ವಜನಿಕ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಈ ಕನಿಷ್ಠ ನಾಗರಿಕ ಪ್ರಜ್ಞೆಯನ್ನೇ ಮರೆತು ವರ್ತಿಸುತ್ತಿರುವುದು ಬೇಸರದ ಸಂಗತಿ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಉತ್ತರಾಖಂಡದ ಪವಿತ್ರ ಚಂದ್ರಶಿಲಾ ದೇವಾಲಯದ (Chandrashila Temple Video) ಬಳಿ ಪ್ರವಾಸಿಗರು ಶೂ ಧರಿಸಿ ಕುಳಿತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Chandrashila Temple video showing tourists wearing shoes inside temple premises in Uttarakhand

Chandrashila Temple Video – ಏನಿದು ಘಟನೆ? ಕ್ಯಾಮೆರಾ ಕಣ್ಣಲ್ಲಿ ಸೆರೆಯಾಯ್ತು ದೃಶ್ಯ

ಉತ್ತರಾಖಂಡದ ಸುಂದರ ಹಾಗೂ ಪವಿತ್ರ ಚಂದ್ರಶಿಲಾ ಶಿಖರದ ಮೇಲಿರುವ ದೇವಾಲಯದ ಆವರಣದಲ್ಲಿ ಇಬ್ಬರು ಪ್ರವಾಸಿಗರು ಶೂ ಧರಿಸಿ ಆರಾಮಾಗಿ ಕುಳಿತಿದ್ದರು. ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಈ ವರ್ತನೆಯನ್ನು ಗಮನಿಸಿದ ಸ್ಥಳೀಯ ಯುವಕನೊಬ್ಬ ತಕ್ಷಣವೇ ತನ್ನ ಮೊಬೈಲ್‌ನಲ್ಲಿ ವಿಡಿಯೋ (Viral Video Here) ರೆಕಾರ್ಡ್ ಮಾಡಲು ಮುಂದಾಗಿದ್ದಾನೆ. ಆರಂಭದಲ್ಲಿ ಕ್ಯಾಮೆರಾ ನೋಡಿ ನಗು ಬೀರುತ್ತಾ ಕೈ ಬೀಸಿದ ಪ್ರವಾಸಿಗರಿಗೆ, ಆ ಯುವಕ ತಾವು ಶೂ ಧರಿಸಿ ಕುಳಿತಿರುವ ದೃಶ್ಯವನ್ನು ಎತ್ತಿ ತೋರಿಸಿದಾಗ ಅವರ ಮುಖಭಾವವೇ ಬದಲಾಗಿದೆ.

“ದುಡ್ಡಿಗಾಗಿ ವಿಡಿಯೋ ಮಾಡ್ತಿದ್ದೀಯಾ?” – ಪ್ರವಾಸಿಗರ ಉದ್ಧಟತನ

ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಬದಲು ಆ ಪ್ರವಾಸಿಗರು ವಿಡಿಯೋ ಮಾಡುತ್ತಿದ್ದ ಯುವಕನ ಮೇಲೆಯೇ ಹರಿಹಾಯ್ದಿದ್ದಾರೆ. ಹಣ ಗಳಿಸಲು, ವೀವ್ಸ್ ಪಡೆಯಲು ನೀವು ಹೀಗೆಲ್ಲಾ ಮಾಡುತ್ತೀರಾ? ವಿಡಿಯೋ ಮಾಡುವ ಬದಲು ನೇರವಾಗಿ ನಮಗೆ ವಿಷಯ ತಿಳಿಸಬಹುದಿತ್ತಲ್ಲವೇ ಎಂದು ಪ್ರವಾಸಿ ಮಹಿಳೆಯೊಬ್ಬಳು ವಾದಕ್ಕಿಳಿದಿದ್ದಾಳೆ. Read this also : ವಿದೇಶಿ ದಂಪತಿಗಳು ಜೀರ್ಣೋದ್ಧಾರ ಮಾಡಿದ ಭಾರತದ ಏಕೈಕ ಶಿವ ದೇವಾಲಯದ ಬಗ್ಗೆ ನಿಮಗೆ ಗೊತ್ತೇ?

ಇದಕ್ಕೆ ಕಿಂಚಿತ್ತೂ ವಿಚಲಿತನಾಗದ ಯುವಕ ಖಡಕ್ ಆಗಿಯೇ ತಿರುಗೇಟು ನೀಡಿದ್ದಾನೆ. “ನಾನು ಈ ಹಿಂದೆಯೇ ನಿಮಗೆ ಇಲ್ಲಿ ಶೂ ಧರಿಸುವಂತಿಲ್ಲ ಎಂದು ಹೇಳಿದ್ದೆ. ನೀವು ನನ್ನ ಮಾತನ್ನು ಕೇಳದಿದ್ದರೆ ಅದು ನಿಮ್ಮ ಸಮಸ್ಯೆ. ನಿಮ್ಮನ್ನು ವಿಡಿಯೋದಲ್ಲಿ ತೋರಿಸಿದರೆ ನನಗೇನೂ ವೀವ್ಸ್ ಬರುವುದಿಲ್ಲ, ಹಣವೂ ಬರುವುದಿಲ್ಲ!” ಪ್ರವಾಸಿಗರು ವಿಡಿಯೋ (Chandrashila Temple Video) ಡಿಲೀಟ್ ಮಾಡುವಂತೆ ಪಟ್ಟು ಹಿಡಿದರೂ, ಯುವಕ ಮಾತ್ರ ಜಪ್ಪಯ್ಯ ಎಂದಿಲ್ಲ.

ಬಾದಾಮಿ ಗುಹಾಲಯದ ಘಟನೆಯ ನೆನಪು

ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ನಮ್ಮ ರಾಜ್ಯದ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಬಾದಾಮಿ ಗುಹಾಂತರ ದೇವಾಲಯದಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಅಲ್ಲಿನ ಮುಸ್ಲಿಂ ಸಿಬ್ಬಂದಿಯೊಬ್ಬಳು ದೇವಾಲಯದ ಆವರಣದಲ್ಲಿ ಶೂ ಧರಿಸಿ ಕುಳಿತಿದ್ದ ದೃಶ್ಯ ವೈರಲ್ ಆಗಿ, ಹಿಂದೂ ಭಕ್ತರ ತೀವ್ರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಚಂದ್ರಶಿಲಾ ದೇವಾಲಯದ (Chandrashila Temple Video) ಘಟನೆ ಆ ಕಹಿ ನೆನಪನ್ನು ಮರುಕಳಿಸುವಂತೆ ಮಾಡಿದೆ.

Chandrashila Temple video showing tourists wearing shoes inside temple premises in Uttarakhand

ನೆಟ್ಟಿಗರ ಪ್ರತಿಕ್ರಿಯೆ: ಪರ ಮತ್ತು ವಿರೋಧದ ಚರ್ಚೆ

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಆದ ಕೇವಲ 24 ಗಂಟೆಗಳಲ್ಲಿ 2.18 ಲಕ್ಷಕ್ಕೂ ಹೆಚ್ಚು ವೀಕ್ಷಣೆ (Views) ಪಡೆದುಕೊಂಡು ವೈರಲ್ (Viral News) ಆಗಿದೆ. ಕಾಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರು ಪರ ಮತ್ತು ವಿರೋಧದ ಚರ್ಚೆಗಿಳಿದಿದ್ದಾರೆ.

ಇಂತಹ ಜನರು ಭಕ್ತಿಗಾಗಿ ಬರುವುದಿಲ್ಲ, ಕೇವಲ ಎಂಜಾಯ್ ಮಾಡಲು ಬರುತ್ತಾರೆ. ಇವರಿಗೆ ಧಾರ್ಮಿಕ ಕ್ಷೇತ್ರಗಳ ಬಗ್ಗೆ ಗೌರವವಿಲ್ಲ, ಇವರನ್ನು ಅಲ್ಲಿಂದ ಓಡಿಸಬೇಕು ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಕೆಲವರು, ಅಲ್ಲಿ ವಿಪರೀತ ಹಿಮ ಆವರಿಸಿದೆ, ಚಳಿಯಿಂದ ರಕ್ಷಿಸಿಕೊಳ್ಳಲು ಶೂ ಧರಿಸಿರಬಹುದು, ವಿಡಿಯೋ ಮಾಡಿ (Chandrashila Temple Video) ಜಗಳವಾಡಿದ್ದು ತಪ್ಪು ಎಂದು ಪ್ರವಾಸಿಗರನ್ನು ಸಮರ್ಥಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಪ್ರವಾಸಿಗರು ಅಲ್ಲಿನ ನಿಯಮ ಹಾಗೂ ಸ್ಥಳೀಯರ ಭಾವನೆಗಳನ್ನು ಗೌರವಿಸುವುದು ಅತ್ಯಂತ ಅವಶ್ಯಕ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular