ಭಾರತಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ದಲಿತರು, ಮಹಿಳೆಯರು ಹಾಗೂ ದುರ್ಬಲ ವರ್ಗದ ಜನಾಂಗವನ್ನು ಅಭಿವೃದ್ದಿಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತೀವ್ರ ವಾಗ್ದಾಳಿ ನಡೆಸಿದರು.
ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸಿಪಿಎಂ (CPIM) ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ 18ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಮಹಿಳೆ, ದಲಿತ ಶೋಷಿತ ಸಮುದಾಯಗಳ ಸಬಲೀಕರಣದ ಪ್ರಶ್ನೆಗಳು ಮತ್ತು ಸರ್ಕಾರದ ಧೋರಣೆಗಳು ಕುರಿತ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಾತಿ ನಿರ್ಮೂಲನೆ, ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರಗಳು, ದಲಿತರ ಮೇಲಿನ ಶೋಷಣೆ ಜೀವಂತವಾಗಿದೆ. ಇದನ್ನು ನಿರ್ಮೂಲನೆ ಮಾಡಲು ಕೇವಲ ಅದು ಸಿಪಿಐಎಂ (CPIM) ಪಕ್ಷದಿಂದ ಮಾತ್ರ ಸಾಧ್ಯ. ಆದ್ದರಿಂದ ದೇಶದಲ್ಲಿ ಸಿಪಿಐಎಂ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ದಲಿತರು, ಬಡವರು, ಕೃಷಿ, ಕೂಲಿ ಕಾರ್ಮಿಕರು ವಿದ್ಯಾರ್ಥಿ ಯುವಜನರು, ಮಹಿಳೆಯರು, ಶೋಷಿತ ಸಮುದಾಯಗಳು ಒಂದಾಗಬೇಕು, ರಾಜ್ಯದಲ್ಲಿ ಪ.ಜಾತಿ, ಪ.ಪಂಗಡದ ಎಸ್.ಸಿ.ಪಿ-ಟಿ.ಎಸ್.ಪಿ.ಅನುಧಾನ ದುರ್ಬಳಕೆಯಾಗಿದೆ. (CPIM) ನಾವು ಸಂಘಟನಾತ್ಮಕ,ವಾಗಿ ಭಾವನಾತ್ಮಕವಾಗಿ ಒಂದಾಗಿ ಹೋರಾಟ ಮಾಡಬೇಕು ಎಂದರು.
ಬಳಿಕ ಸಿಪಿಎಂ ಮುಖಂಡ ಡಾ.ಅನೀಲ್ ಕುಮಾರ್ ಮಾತನಾಡಿ, ದಲಿತರಿಗೆ ಮೀಸಲಾತಿ ನೀಡುತ್ತಿರುವುದು ತಾತ್ಕಲಿಕ ಪರಿಹಾರವೇ ವಿನಃ ಶಾಶ್ವತ ಪರಿಹಾರವಲ್ಲ. (CPIM) ಸಿಪಿಎಂ ಪಕ್ಷ ಜನರ ಹಸಿವು ನೀಗಿಸುವಂತಹ ಪಕ್ಷವಾಗಿದೆ. ಇನ್ನೂ ಜನರಿಗೆ ಹಸಿವಾಗಿಲ್ಲ. ಹಸಿವಾದಾಗ ಸಿಪಿಎಂ ಪಕ್ಷವನ್ನು ತಡೆಯುವ ಶಕ್ತಿ ಯಾರಿಗೂ ಇರೊಲ್ಲ. ಅದಕ್ಕೆ ನಮ್ಮ ಪಕ್ಕದ ಶ್ರೀಲಂಕಾ ದೇಶ ಉತ್ತಮ ಉದಾಹರಣೆ ಎನ್ನಬಹುದು. (CPIM) ಸರ್ಕಾರ ಉಚಿತ ಯೋಜನೆಗಳನ್ನು ನೀಡುತ್ತಿದೆ. ನಾವು ಅದನ್ನು ಬೆಂಬಲಿಸುತ್ತೇವೆ. ಆದರೆ ಆ ಉಚಿತ ಯೋಜನೆಗಳಿಗೆ ತಗಲುವ ವೆಚ್ಚ ನಾವೇ ಕಟ್ಟಿದ ತೆರಿಗೆಯಿಂದ ಎಂದು ಮರೆಯಬಾರದು. ಇನ್ನೂ ಬಾಗೇಪಲ್ಲಿಯಲ್ಲಿ (CPIM) ನವೆಂಬರ್ ಮಾಹೆಯಲ್ಲಿ 18ನೇ ಜಿಲ್ಲಾ ಸಮ್ಮೇಳನವನ್ನು ಹಮ್ಮಿಕೊಂಡಿದ್ದು, ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಗಳ ಜಾರಿ, ಕೃಷ್ಣ ನದಿ ನೀರು ಸೇರಿದಂತೆ ನಿವೇಶನ, ವಸತಿ, ಕೈಗಾರಿಕೆಗಳ ಸ್ಥಾಪನೆ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುತ್ತದೆ. ಹೆಚ್ಚು ಜನರು ಈ ಸಮ್ಮೇಳನದಲ್ಲಿ ಭಾಗಿಯಾಗಬೇಕು ಎಂದರು.
ಬಳಿಕ ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ (CPIM) ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ ಜಿಲ್ಲಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ಪ್ರತಿಯೋಬ್ಬರು ತಾಲ್ಲೂಕಿನಲ್ಲಿ ಗ್ರಾಮ ಘಟಕಗಳನ್ನು ರಚಿಸಿ ಆ ಮೂಲಕ ಮಹಿಳೆಯರಲ್ಲಿ ಬಹಳ ಮುಖ್ಯವಾಗಿ ಜಾಗೃತಿ ಮೂಡಿಸಬೇಕೆಂದರು. ಕಾರ್ಯಕ್ರಮದಲ್ಲಿ (CPIM) ರಾಜ್ಯ ಜನವಾದಿ ಮಹಿಳಾ ಸಂಘಟನೆ ಕಾರ್ಯದರ್ಶಿ ಕಾಂ.ದೇವಿ ಮಾತನಾಡಿ ಮಹಿಳೆಯರ ಆಸ್ತಿ ಹಕ್ಕು ಮತ್ತಿತರೆ ಮಹಿಳೆಯರ ಸಬಲೀಕರಣ ಮಹಿಳೆಯರ ಹಕ್ಕುಗಳ ಬಗ್ಗೆ ತಿಳಿಸಿದರು.
ಈ ವೇಳೆ ತಾಲ್ಲೂಕು (CPIM) ಕಾರ್ಯದರ್ಶಿ ಜಯರಾಮರೆಡ್ಡಿ, ರಘುರಾಮರೆಡ್ಡಿ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಸಾವಿತ್ರಮ್ಮ, ಸದಸ್ಯರಾದ ಸಿದ್ದಗಂಗಪ್ಪ, ನಾಗರಾಜು, ಚನ್ನರಾಯಪ್ಪ, ರಾಮಲಿಂಗಪ್ಪ, ಡಿ.ಸಿ.ಶ್ರೀನಿವಾಸ್, ಅಶ್ವತ್ಥಪ್ಪ ರಾಮಾಂಜಿ ಕೆ.ವೆಂಕಟರಮಣ, ದೇವರಾಜು, ಶ್ರೀನಿವಾಸ್, ಕಾರ್ಯದರ್ಶಿ, ಆದಿನಾರಾಯಣ ಸ್ವಾಮಿ , ರಾಜಪ್ಪ, ಶಿವಪ್ಪ ಸೇರಿದಂತೆ ಹಲವರು ಇದ್ದರು.