CBSE Recruitment 2025 – ಕೇಂದ್ರ ಸರ್ಕಾರದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (Central Board of Secondary Education) ಖಾಲಿ ಇರುವ 212 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸೂಪರಿಟೆಂಡೆಂಟ್ ಹಾಗೂ ಜೂನಿಯರ್ ಅಸಿಸ್ಟಂಟ್ ಸೇರಿ ಒಟ್ಟು 212 ಹುದ್ದೆಗಳು ಖಾಲಿಯಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಜನವರಿ 31 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆಯ ವಿಧಾನ ಹಾಗೂ ಅಧಿಸೂಚನೆ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.

ಈ ಹುದ್ದೆಗಳಲ್ಲಿ ಆಯ್ಕೆಯಾದವರಿಗೆ ಬೆಂಗಳೂರು, ಅಜ್ಮೀರ್, ಅಲಹಾಬಾದ್, ಭುವನೇಶ್ವರ, ಭೋಪಾಲ್, ಚೆನ್ನೈ, ಚಂಡೀಗಢ, ಡೆಹ್ರಾಡೂನ್, ದಿಲ್ಲಿ, ಗುವಾಹಟಿ, ನೋಯ್ಡಾ, ಪಾಟ್ನಾ, ಪುಣೆ, ತಿರುವನಂತಪುರಂ, ವಿಜಯವಾಡ, ರಾಯ್‌ಬರೇಲಿ ಮುಂತಾದ ಕಡೆಗಳಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಪ್ರಿಲಿಮಿನರಿ ಪರೀಕ್ಷೆ ಮತ್ತು ಮೈನ್ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. CBSE Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ. ಹೆಚ್ಚಿನ ವಿವರಗಳಿಗೆ ಸಿಬಿಎಸ್‌ಇ ಅದಿಕೃತ ವೆಬ್‌ಸೈಟ್ ವಿಳಾಸ: cbse.nic.inಗೆ ಭೇಟಿ ನೀಡಿ.
CBSE Recruitment 2025 ರ ಸಂಕ್ಷಿಪ್ತ ವಿವರ:
Post Name | Superintendent and Junior Assistant (Group B & C) |
CBSE Superintendent & Junior Assistant Vacancies | 212 |
CBSE Superintendent & Junior Assistant Notification Date 2025 | 31-Dec-24 |
CBSE Superintendent & Junior Assistant Registration Last Date 2025 | 31-Jan-25 |
CBSE Superintendent Salary 2025 | ₹35,400 to ₹1,12,400/- Per Month |
CBSE Junior Assistant Salary 2025 | ₹19,900/- to ₹63,200/- Per Month |
Application Mode | Online |
Location | All Over India |
Official Website | cbse.gov.in |
CBSE Recruitment 2025 : ವರ್ಗವಾರು ಹುದ್ದೆಗಳ ವಿವರ
Post | UR | OBC | EWS | SC | ST | Total |
Superintendent | 59 | 38 | 14 | 21 | 10 | 142 |
Junior Assistant | 5 | 34 | 13 | 9 | 9 | 70 |
Total | 64 | 72 | 27 | 30 | 19 | 212 |
CBSE Recruitment 2025 : ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ :
- ಸೂಪರಿಟೆಂಡೆಂಟ್ ಪೇ ಲೆವೆಲ್-6 – 142 ಹುದ್ದೆ, ವಿದ್ಯಾರ್ಹತೆ: ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಪದವಿ. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು ಅಗತ್ಯ. ವಿಂಡೋಸ್, ಎಂ.ಎಸ್.ಆಫೀಸ್, ಇಂಟರ್‌ನೆಟ್ ಬಳಕೆ ಚೆನ್ನಾಗಿ ತಿಳಿದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
- ಜೂನಿಯರ್ ಅಸಿಸ್ಟಂಟ್ ಪೇ ಲೆವೆಲ್-2 – 70 ಹುದ್ದೆ, ವಿದ್ಯಾರ್ಹತೆ: ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ. ಜೊತೆಗೆ ಇಂಗ್ಲಿಷ್, ಹಿಂದಿಯಲ್ಲಿ ವೇಗವಾಗಿ ಟೈಪ್ ಮಾಡುವ ಕೌಶಲ್ಯ ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.
CBSE Recruitment 2025 – ವಯೋಮಿತಿ : ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಕಲ್ಪಿಸಲಾಗಿದೆ.

CBSE Recruitment 2025 – ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕಿದೆ. ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್ ಅಭ್ಯರ್ಥಿಗಳು 800 ರೂ. ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ/ಮಾಜಿ ಸೈನಿಕರು/ಮಹಿಳೆಯರು ಅರ್ಜಿ ಶುಲ್ಕ ವಿನಾಯಿತಿ ಕಲ್ಪಿಸಲಾಗಿದೆ.
CBSE Recruitment 2025 – Important Dates:
- Starting Date for Submission of Application: 02.01.2025
- Last date for Submission of Application: 31.01.2025