ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಪ್ರಾಣಿ ಪ್ರಪಂಚದ ಹೋರಾಟಗಳಂತೂ ಯಾವಾಗಲೂ ಕುತೂಹಲಕಾರಿಯಾಗಿರುತ್ತವೆ. ಆದರೆ ಈಗ ವೈರಲ್ ಆಗುತ್ತಿರೋ ಈ ವಿಡಿಯೋ ಮಾತ್ರ ನಿಜಕ್ಕೂ ಎದೆ ನಡುಗಿಸುವಂತಿದೆ. ಕೇವಲ ಒಂದು ಇಲಿಗಾಗಿ ಶುರುವಾದ ಜಗಳ, ಸಾವು-ಬದುಕಿನ ಹೋರಾಟಕ್ಕೆ ತಿರುಗಿದ (Viral Video) ರೋಚಕ ಘಟನೆ ಇದು!

Viral Video – ನಡೆದಿದ್ದೇನು?
ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯ ಲಾಲ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಮಧ್ಯಾಹ್ನ ಸುಮಾರು 3 ಗಂಟೆಯ ಸಮಯವದು. ರಸ್ತೆಯ ಮಧ್ಯೆ ಹಾವೊಂದು ಕಾಣಿಸಿಕೊಂಡಿದೆ. ಅಷ್ಟರಲ್ಲೇ ಅಲ್ಲಿಗೆ ಬಂದ ಬೆಕ್ಕು ಆ ಹಾವಿನ ಜೊತೆ ಕುಸ್ತಿಗಿಳಿದಿದೆ. ಅಸಲಿಗೆ ಈ ಕಿತ್ತಾಟ ಶುರುವಾಗಿದ್ದು ಒಂದು ಇಲಿಗಾಗಿ! ಹಾವಿಗೂ ಆ ಇಲಿ ಬೇಕು, ಬೆಕ್ಕಿಗೂ ಇಲಿ ಬೇಕು. ಎರಡೂ ಬಿಟ್ಟುಕೊಡಲು ತಯಾರಿರಲಿಲ್ಲ. Read this also : ಒಂದು ಹಾವು ಇನ್ನೊಂದು ಹಾವನ್ನೇ ನುಂಗುತ್ತಿರುವ ದೃಶ್ಯ ನೋಡಿ ನೆಟ್ಟಿಗರು ಶಾಕ್…!
10 ನಿಮಿಷಗಳ ಕಾಲ ನಡೆದ ಭೀಕರ ಕಾಳಗ!
ಸುಮಾರು 10 ನಿಮಿಷಗಳ ಕಾಲ ಈ ಭೀಕರ ಕಾಳಗ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಡಿಯೋದಲ್ಲಿ ನೀವು ನೋಡುವಂತೆ, ಹಾವು ಮೊದಲು ಬೆಕ್ಕಿನ ಮೇಲೆರಗಲು ಪ್ರಯತ್ನಿಸುತ್ತದೆ. ಆದರೆ ಬೆಕ್ಕು ಮಾತ್ರ ಸಖತ್ ಅಲರ್ಟ್ ಆಗಿತ್ತು. ಹಾವು ಕಚ್ಚಲು ಬರುವಷ್ಟರಲ್ಲಿ ಬೆಕ್ಕು ಮಿಂಚಿನ ವೇಗದಲ್ಲಿ ತಪ್ಪಿಸಿಕೊಂಡು ಹಾವಿನ ಮೇಲೆ ತನ್ನ ಪಂಜದಿಂದ ‘ಪಂಚ್’ ಹಾಕಿದೆ. ಹಾವು ಎಷ್ಟೇ ಬುಸುಗುಟ್ಟುತ್ತಾ ಅಟ್ಯಾಕ್ ಮಾಡಿದರೂ, ಬೆಕ್ಕು ತನ್ನ ಚಾಕಚಕ್ಯತೆಯಿಂದ ಹಾವನ್ನು ಮಣಿಸಿದೆ. ಕೊನೆಗೆ ಬೆಕ್ಕು ಹಾವನ್ನೇ ಕಚ್ಚಿ (Viral Video) ಸಾಯಿಸುವ ಮೂಲಕ ಈ ಕಾಳಗಕ್ಕೆ ಅಂತ್ಯ ಹಾಡಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಫುಲ್ ವೈರಲ್
ಸ್ಥಳೀಯರು ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದು ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋಗೆ ಲಕ್ಷಾಂತರ ವ್ಯೂಸ್ ಹಾಗೂ ಸಾವಿರಾರು ಲೈಕ್‌ಗಳು ಹರಿದುಬರುತ್ತಿವೆ. ಈ (Viral Video) ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. “ಬೆಕ್ಕಿನ ಧೈರ್ಯ ಮೆಚ್ಚಲೇಬೇಕು” ಎಂದು ಒಬ್ಬರು ಬರೆದರೆ, “ಇಲಿಗಾಗಿ ಇಷ್ಟೊಂದು ದೊಡ್ಡ ಯುದ್ಧನಾ?” ಎಂದು ಇನ್ನೊಬ್ಬರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
