BSNL 5G – ಕಳೆದ ಹಲವಾರು ವರ್ಷಗಳಿಂದ 4G ಗಾಗಿಯೇ ಕಾದು, ಕೊನೆಗೂ ಈಗ 5G ಸೇವೆಯನ್ನು ತನ್ನ ಗ್ರಾಹಕರಿಗೆ ತರಲು BSNL ಸಜ್ಜಾಗಿದೆ! ಹೌದು, ಕೇಂದ್ರ ಸರ್ಕಾರದ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL), ಈಗಾಗಲೇ ಒಂದು ಲಕ್ಷ ಟವರ್‌ಗಳನ್ನು ಸ್ಥಾಪಿಸಿ, ಇನ್ನೊಂದು ಲಕ್ಷ ಟವರ್‌ಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಕೈಹಾಕಿದೆ.
ಈ ಬಾರಿ BSNL ತನ್ನ ವೇಗದ ಇಂಟರ್‌ನೆಟ್ ಸೇವೆಯನ್ನು ದೇಶದ ಮೂಲೆ ಮೂಲೆಗೂ ತಲುಪಿಸುವ ಗುರಿ ಹೊಂದಿದೆ. ವಿಶೇಷವಾಗಿ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ BSNL 5G ಸೇವೆ ಮೊದಲು ಆರಂಭವಾಗಲಿದೆ ಎಂಬ ಸಿಹಿ ಸುದ್ದಿ ಹೊರಬಿದ್ದಿದೆ. ಹಾಗಾದರೆ, ಈ ಅತಿ ವೇಗದ ಸೇವೆ ಯಾವಾಗ ನಮ್ಮ ಕೈ ಸೇರಲಿದೆ? ಯಾವ ರಾಜ್ಯಗಳಿಗೆ ಮೊದಲ ಆದ್ಯತೆ ಸಿಗುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ತಪ್ಪದೇ ಓದಿ.
BSNL 5G – ವೇಗವಾಗಿ ಸಾಗುತ್ತಿದೆ 5G ಯೋಜನೆ: ಯಾವಾಗ ನಿರೀಕ್ಷಿಸಬಹುದು?
BSNL ಈ ವರ್ಷದ ಆರಂಭದಲ್ಲಿ ತನ್ನ 3G ಇಂಟರ್ನೆಟ್ ಸೇವೆಯಿಂದ 4G ಗೆ ಅಪ್‌ಗ್ರೇಡ್ ಆಗಿತ್ತು. ಅಲ್ಲಿ ಎದುರಾದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿದ ನಂತರ, ಈಗ ನೇರವಾಗಿ 5G ಗೆ ಅಪ್‌ಗ್ರೇಡ್ ಆಗಲು ಭಾರಿ ಸಿದ್ಧತೆ ನಡೆಸುತ್ತಿದೆ. ಈ ವರ್ಷದ ಸೆಪ್ಟೆಂಬರ್ ವೇಳೆಗೆ ದೆಹಲಿ ಸೇರಿದಂತೆ ದೇಶದ ಪ್ರಮುಖ ರಾಜ್ಯ ರಾಜಧಾನಿಗಳಲ್ಲಿ (ನಗರಗಳಲ್ಲಿ) ವೇಗದ ಇಂಟರ್ನೆಟ್ ಸೇವೆ ನೀಡಲು BSNL ಸಜ್ಜಾಗಿದೆ. ಇದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದ್ದು, 5G ಯ ಪ್ರಾಯೋಗಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
BSNL 5G – ಟ್ರಯಲ್ ರನ್ ಯಶಸ್ವಿ
ಹೌದು, ಈ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಆರಂಭದ ಹೊತ್ತಿಗೆ ದೇಶದ ಪ್ರಮುಖ ನಗರಗಳಲ್ಲಿ 5G ಸೇವೆಯನ್ನು ಆರಂಭಿಸುವ ನಿರೀಕ್ಷೆಯಿದೆ. ಈಗಾಗಲೇ ಇರುವ 4G ಟವರ್‌ಗಳಲ್ಲಿ (ಸೈಟ್) 5G ತಂತ್ರಜ್ಞಾನದ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಇದು BSNL ಗ್ರಾಹಕರಿಗೆ ಅತ್ಯಂತ ವೇಗದ ಮತ್ತು ತಡೆರಹಿತ ಇಂಟರ್‌ನೆಟ್ ಅನುಭವ ನೀಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಯಾವೆಲ್ಲಾ ರಾಜ್ಯಗಳಲ್ಲಿ ಮೊದಲು BSNL 5G ಲಭ್ಯ?
ಮೊದಲ ಹಂತದಲ್ಲಿ BSNL 5G ಸೇವೆ ಭಾರತದ ರಾಜಧಾನಿ ದೆಹಲಿ, ಹೈದರಾಬಾದ್, ಚೆನ್ನೈ, ಜೈಪುರ, ಭೋಪಾಲ್, ಕೋಲ್ಕತ್ತಾ, ಲಕ್ನೋ, ಚಂಡೀಗಢ ಮತ್ತು ಪಾಟ್ನಾ ಸೇರಿದಂತೆ ಹಲವು ರಾಜ್ಯ ರಾಜಧಾನಿಗಳಲ್ಲಿ ಸಕ್ರಿಯಗೊಳ್ಳಲಿದೆ. ಈಗಾಗಲೇ ಸ್ಥಾಪಿಸಲಾದ ಒಂದು ಲಕ್ಷ 4G ಸೈಟ್‌ಗಳಲ್ಲಿಯೇ 5G ಅಪ್‌ಗ್ರೇಡ್ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಇವುಗಳ ಪರೀಕ್ಷೆ ಪೂರ್ಣಗೊಂಡ ನಂತರ, ಹೊಸ ಟವರ್‌ಗಳಿಗೂ ನೂತನ 5G ನೆಟ್‌ವರ್ಕ್ ತಂತ್ರಜ್ಞಾನವನ್ನು ವಿಸ್ತರಿಸುವ ಮೂಲಕ ಆರಂಭಿಕ ಹಂತದ ವೇಗದ ಇಂಟರ್ನೆಟ್ ಸೇವೆ ನೀಡಲು BSNL ಪಣ ತೊಟ್ಟಿದೆ.
ಹೆಚ್ಚುವರಿ ಟವರ್‌ಗಳು, ಉತ್ತಮ ನಿರ್ವಹಣೆ: BSNL ಭರವಸೆ!
ಒಂದೆಡೆ ಹೆಚ್ಚುವರಿ ಟವರ್‌ಗಳ ಸ್ಥಾಪನೆ, ಮತ್ತೊಂದೆಡೆ 4G ನೆಟ್‌ವರ್ಕ್ ಅನ್ನು ಸರಿಯಾಗಿ ನಿರ್ವಹಿಸುವ ಜವಾಬ್ದಾರಿ ಜೊತೆಗೆ 5G ಗೆ ಅಪ್‌ಗ್ರೇಡ್ ಮಾಡುವ ಸವಾಲನ್ನು BSNL ಯಶಸ್ವಿಯಾಗಿ ಎದುರಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಇತರ ಖಾಸಗಿ ಕಂಪನಿಗಳ ವೇಗಕ್ಕೆ ಸರಿಸಮಾನವಾಗಿ, ಆದರೆ ಕಡಿಮೆ ಬೆಲೆಯಲ್ಲಿ BSNL ಅತ್ಯುತ್ತಮ ಸೇವೆ ನೀಡುವ ಭರವಸೆ ಮೂಡಿಸಿದೆ.
70,000 ಟವರ್‌ಗಳಲ್ಲಿ ಸೂಪರ್ ಫಾಸ್ಟ್ ಸೇವೆ ಈಗಲೇ ಲಭ್ಯ!
ಕಳೆದ ವರ್ಷ 2024 ಡಿಸೆಂಬರ್‌ನಲ್ಲಿ ಹಂತ ಹಂತವಾಗಿ ನಾಲ್ಕು ಮೆಟ್ರೋ ನಗರಗಳಲ್ಲಿ 4G ಜಾರಿಗೆ ತರಲಾಗಿತ್ತು. ನಂತರ ಎಲ್ಲ ಸೈಟ್‌ಗಳಿಗೆ (ಜೂನ್ 2025 ವೇಳೆಗೆ) ವಿಸ್ತರಣೆ ಮಾಡಲಾಯಿತು. ಕಳೆದ ಮೇ ತಿಂಗಳಲ್ಲಿ BSNL 93,000 ಕ್ಕೂ ಹೆಚ್ಚು 4G ಟವರ್‌ಗಳನ್ನು ಹೊಂದಿದೆ. ಅವುಗಳಲ್ಲಿ 70,000 ಕ್ಕೂ ಹೆಚ್ಚು ಟವರ್‌ಗಳಲ್ಲಿ ಸಮರ್ಪಕ ಕಾರ್ಯ ನಿರ್ವಹಣೆ ಆಗುತ್ತಿದೆ ಎಂದು BSNL ಹೇಳಿಕೊಂಡಿದೆ. ಇದರ ಬೆನ್ನಲ್ಲೇ ಹೆಚ್ಚುವರಿ ಟವರ್ ನಿರ್ಮಾಣಕ್ಕೆ ಅನುಮತಿ ಪಡೆಯಲಾಗಿದೆ ಎಂದು ರಾಜ್ಯ ಸಂವಹನ ಸಚಿವ ಪೆಮ್ಮಸಾನಿ ಚಂದ್ರಶೇಖರ್ ತಿಳಿಸಿದ್ದಾರೆ.
Read this also :ಸಾಲದ ಇತಿಹಾಸವೇ ಇಲ್ವಾ? ಚಿಂತೆ ಬೇಡ, ಹೀಗೆ ಮಾಡಿ ಉತ್ತಮ ಕ್ರೆಡಿಟ್ ಸ್ಕೋರ್ ಗಳಿಸಿ…!
BSNL ನೆಟ್‌ವರ್ಕ್ ಸಮಸ್ಯೆ: ಪರಿಹಾರದ ನಿರೀಕ್ಷೆಯಲ್ಲಿ ಗ್ರಾಹಕರು
ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್+ಐಡಿಯಾ ವರ್ಷಗಳ ನಂತರ BSNL 4G ಸೇವೆ ಆರಂಭಗೊಂಡಿದ್ದರಿಂದ ಗ್ರಾಹಕರಿಂದ ಕೊಂಚ ಅಸಮಾಧಾನ ವ್ಯಕ್ತವಾಗಿತ್ತು. ಧ್ವನಿ ಕರೆಗಳಲ್ಲಿ ಸಮಸ್ಯೆ, ಕರೆಗಳು ಸಮರ್ಪಕವಾಗಿಲ್ಲ, ನೆಟ್‌ವರ್ಕ್ ಸಿಗುತ್ತಿಲ್ಲ, 4G ಗಿಂತ 3G ನೆಟ್‌ವರ್ಕ್ ಎಷ್ಟೋ ಪಾಲು ಉತ್ತಮ ಎಂಬಂತಹ ಮಾತುಗಳು ಗ್ರಾಹಕರಿಂದ ಕೇಳಿಬಂದಿದ್ದವು. ಕೆಲವು ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು BSNL ಹೇಳಿಕೊಂಡಿದ್ದರೂ, ಎಲ್ಲ ಸಮಸ್ಯೆಗಳು ಪರಿಹಾರವಾಗಿಲ್ಲ ಎಂಬುದು ಸತ್ಯ. ಮುಂದಿನ 5G ಸೇವೆ ವೇಳೆ ಇಂತಹ ತಪ್ಪುಗಳನ್ನು ಮಾಡದಂತೆ ಗ್ರಾಹಕರು ಮನವಿ ಮಾಡಿಕೊಂಡಿದ್ದಾರೆ.