Saturday, August 30, 2025
HomeEntertainmentUNICEF India ರಾಯಭಾರಿಯಾದ ಸ್ಟಾರ್ ನಟಿ ಕರೀನಾ ಕಪೂರ್, ಸಂತಸ ವ್ಯಕ್ತಪಡಿಸಿದ ನಟಿ….!

UNICEF India ರಾಯಭಾರಿಯಾದ ಸ್ಟಾರ್ ನಟಿ ಕರೀನಾ ಕಪೂರ್, ಸಂತಸ ವ್ಯಕ್ತಪಡಿಸಿದ ನಟಿ….!

ಬಾಲಿವುಡ್ ಸ್ಟಾರ್‍ ನಟಿ ಕರೀನಾ ಕಪೂರ್‍ ರವರಿಗೆ ದೊಡ್ಡ ಮಟ್ಟದಲ್ಲೇ ಅಭಿಮಾನಿ ಬಳಗವಿದೆ. ಬಾಲಿವುಡ್ ನಲ್ಲಿ ವಯಸ್ಸಾದರೂ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ನಟಿಯರಲ್ಲಿ ಕರೀನಾ ಕಪೂರ್‍ ಸಹ ಒಬ್ಬರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕರೀನಾ ಕಪೂರ್‍  UNICEF India ರಾಯಭಾರಿಯಾಗಿ ನೇಮಕಗೊಂಡಿದ್ದು, ಈ ಗೌರವದ ಬಗ್ಗೆ ನಟಿ ಕರೀನಾ ಕಪೂರ್‍ ಸಂತಸ ವ್ಯಕ್ತಪಡಿಸಿದ್ದಾರೆ.

Kareena kapoor UNICEF India National Ambassador 1

ಬಾಲಿವುಡ್ ಸೀನಿಯರ್‍ ನಟಿ ಕರೀನಾ ಕಪೂರ್‍ ಕಳೆದ 2014 ರಿಂದ ಯುನಿಸೆಫ್ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಇದೀಗ ಆಕೆಯನ್ನು UNICEF Indiaದ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ. ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಕರೀನಾ ಕಪೂರ್‍ ಇಂದು ನನಗೆ ಭಾವನಾತ್ಮಕ ದಿನ. ನಾನು UNICEF India ರಾಯಭಾರಿಯಾಗಿ ನೇಮಕಗೊಂಡಿರುವುದಕ್ಕೆ ತುಂಬಾ ಗೌರವವಿದೆ. ಕಳೆದ 10 ವರ್ಷಗಳಲ್ಲಿ UNICEF India ಜೊತೆಗೆ ಕೆಲಸ ಮಾಡಿದ್ದು, ನನಗೆ ಖುಷಿ ಕೊಟ್ಟಿದೆ. ನನಗೆ ಕೆಲಸದ ಬಗ್ಗೆ ಹೆಮ್ಮೆಯಿದೆ. ಮಕ್ಕಳ ಹಕ್ಕುಗಳನ್ನು ಉತ್ತೇಜಿಸಲು ಹಾಗೂ ರಕ್ಷಿಸಲು ಮತ್ತು ಎಲ್ಲಾ ಮಕ್ಕಳಿಗೆ ಸಮಾನ ಭವಿಷ್ಯಕ್ಕಾಗಿ ಧ್ವನಿಯಾಗಲು ಹೆಮ್ಮೆಯಾಗುತ್ತಿದೆ. ದೇಶದಾದ್ಯಂತ ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಇಡೀ ತಂಡಕ್ಕೆ ವಿಶೇಷ ಧನ್ಯವಾದಗಳು ಎಂದು ಸಂತಸ ವ್ಯಕ್ತಪಡಿಸುತ್ತಾ ಪೋಸ್ಟ್ ಮಾಡಿದ್ದಾರೆ.

Kareena kapoor UNICEF India National Ambassador 0

ಬಾಲಿವುಡ್ ಸ್ಟಾರ್‍ ನಟಿ ಕರೀನಾ ಕಪೂರ್‍ ಸುಮಾರು ಎರಡು ದಶಕಗಳ ಕಾಲ ಬಾಲಿವುಡ್ ನಲ್ಲಿ ಸಕ್ರೀಯರಾಗಿದ್ದಾರೆ. ಈಗಲೂ ಸಹ ಆಕೆಗೆ ತುಂಬಾನೆ ಬೇಡಿಕೆಯಿದೆ. ಬಹುತೇಕ ಎಲ್ಲಾ ಸೂಪರ್‍ ಸ್ಟಾರ್‍ ಗಳ ಜೊತೆಗೆ ನಟಿಸಿರುವ ಕರೀನಾ ಕಪೂರ್‍ ಗೆ ಈಗಲೂ ಸಹ ಅವಕಾಶಗಳು ಹರಿದು ಬರುತ್ತಿವೆ. ಆಕೆ ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಮದುವೆಯಾದರು. ಮದುವೆಗೂ ಮುಂಚೆ ಆಕೆ ಶಾಹಿದ್ ಕಪೂರ್‍ ಜೊತೆಗೆ ಡೇಟಿಂಗ್ ನಲ್ಲಿದ್ದರು. ಬಳಿಕ ಸೈಫ್ ಅಲಿ ಖಾನ್ ಜೊತೆಗೆ ಪ್ರೀತಿ ಚಿಗುರಿತ್ತು. ಆದರೆ ಆಗಾಗಲೇ ಸೈಫ್ ಅಮೃತಾ ಸಿಂಗ್ ಎಂಬಾಕೆಯನ್ನು ಮದುವೆಯಾಗಿ ಆಕೆಯೊಂದಿಗೆ ವಿಚ್ಚೇದನ ಸಹ ಪಡೆದುಕೊಂಡಿದ್ದರು. ಬಳಿಕ ಕರೀನಾ ಕಪೂರ್‍ ಸೈಪ್ ಜೊತೆಗೆ ವಿವಾಹವಾಗಿ ಸಂತೋಷದಿಂದ ಜೀವನ ಕಳೆಯುತ್ತಿದ್ದಾರೆ.

Kareena kapoor UNICEF India National Ambassador 3

ಇನ್ನೂ ನಟ ಯಶ್ ರವರ ಟಾಕ್ಸಿಕ್ ಸಿನೆಮಾದಲ್ಲಿ ಕರೀನಾ ಕಪೂರ್‍ ಸ್ಪೇಷಲ್ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಡೇಟ್ಸ್ ಸಮಸ್ಯೆಯಿಂದ ಸಿನೆಮಾದಿಂದ ಕರೀನಾ ಕಪೂರ್‍ ಹೊರಬಂದಿದ್ದಾರೆ ಎನ್ನಲಾಗಿದೆ. ಕರೀನಾ ಕಪೂರ್‍ ಸ್ಥಾನಕ್ಕೆ ಲೇಡಿ ಸೂಪರ್‍ ಸ್ಟಾರ್‍ ನಯನತಾರಾ ಎಂಟ್ರಿ ಕೊಡಲಿದ್ದಾರೆ ಎಂಬ ರೂಮರ್‍ ವೈರಲ್ ಆಗುತ್ತಿದೆ. ಕೊನೆಯದಾಗಿ ಆಕೆ ಕ್ರೂ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಸಿಂಗಂ ಅಗೇನ್ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular