ಸಿನಿಮಾಗಳಲ್ಲಿ ಸೂಪರ್ ಹೀರೋಗಳು ವಿಭಿನ್ನ ಉಡುಪು ತೊಟ್ಟು ಬಂದು ಜನರ ಪ್ರಾಣ ಉಳಿಸುವುದನ್ನು ನಾವು ನೋಡಿದ್ದೇವೆ. ಆದರೆ ನಿಜ ಜೀವನದ ಹೀರೋಗಳು ಸಾಮಾನ್ಯ ಉಡುಪಿನಲ್ಲಿ, ನಮ್ಮ ನಡುವೆಯೇ ಇರುತ್ತಾರೆ ಎಂಬುದಕ್ಕೆ ತಮಿಳುನಾಡಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಒಬ್ಬ ಡೆಲಿವರಿ ಬಾಯ್ ತೋರಿದ (Blinkit delivery boy) ಸಮಯಪ್ರಜ್ಞೆ ಇಂದು ಒಬ್ಬ ಮಹಿಳೆಯ ಜೀವ ಉಳಿಸಿದೆ.

Blinkit delivery boy – ನಡೆದಿದ್ದೇನು? ಕುತೂಹಲ ಕೆರಳಿಸಿದ ಆ ಒಂದು ಆರ್ಡರ್!
ತಡರಾತ್ರಿ ವೇಳೆ ತಮಿಳುನಾಡಿನ ಮಹಿಳೆಯೊಬ್ಬರು ಬ್ಲಿಂಕಿಟ್ (Blinkit) ಆ್ಯಪ್ ಮೂಲಕ ಮೂರು ಪ್ಯಾಕೆಟ್ ಇಲಿ ಪಾಷಾಣವನ್ನು (Rat Poison) ಆರ್ಡರ್ ಮಾಡಿದ್ದರು. ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಇಂತಹ ವಸ್ತುಗಳನ್ನು ಆರ್ಡರ್ ಮಾಡುವುದು ಸಹಜ. ಆದರೆ, ಮಧ್ಯರಾತ್ರಿಯಲ್ಲಿ ಮೂರು ಪ್ಯಾಕೆಟ್ ವಿಷದ (Blinkit delivery boy) ಅವಶ್ಯಕತೆ ಏನಿರಬಹುದು? ಎಂಬ ಪ್ರಶ್ನೆ ಆರ್ಡರ್ ತಲುಪಿಸಬೇಕಿದ್ದ ಡೆಲಿವರಿ ಬಾಯ್ ಮನಸ್ಸಿನಲ್ಲಿ ಮೂಡಿತು.
ಅನುಮಾನವೇ ಜೀವ ಉಳಿಸುವ ಸಂಜೀವಿನಿಯಾಯಿತು
ಆರ್ಡರ್ ಹಿಡಿದು ಮಹಿಳೆಯ ಮನೆಗೆ ಹೋದ ಡೆಲಿವರಿ ಬಾಯ್‌ಗೆ ಅಲ್ಲಿನ ಪರಿಸ್ಥಿತಿ ಕಂಡು ಏನೋ ಅಹಿತಕರ ಘಟನೆ ನಡೆಯಲಿದೆ ಎಂಬ ಮುನ್ಸೂಚನೆ ಸಿಕ್ಕಿತು. ಮಹಿಳೆ ಅತಿಯಾಗಿ ಅಳುತ್ತಿರುವುದನ್ನು ಗಮನಿಸಿದ ಅವರು, ಆಕೆಗೆ ವಿಷವನ್ನು ಹಸ್ತಾಂತರಿಸದೆ ಪ್ರಶ್ನಿಸಲು ನಿರ್ಧರಿಸಿದರು. “ನೀವು ಆತ್ಮಹತ್ಯೆ ಮಾಡಿಕೊಳ್ಳಲು ಇದನ್ನು ಆರ್ಡರ್ ಮಾಡಿದ್ದೀರಾ?” ಎಂದು ನೇರವಾಗಿಯೇ ಕೇಳಿದಾಗ, ಆ ಮಹಿಳೆ ತಡಬಡಾಯಿಸಿ “ಇಲ್ಲ ಬ್ರದರ್” ಎಂದು ಸುಳ್ಳು ಹೇಳಲು ಪ್ರಯತ್ನಿಸಿದರು. Read this also : ಪ್ರಾಣ ಉಳಿಸಲು ಪ್ರಾಣವನ್ನೇ ಪಣಕ್ಕಿಟ್ಟ ‘ರಿಯಲ್ ಹೀರೋ’: ವೈರಲ್ ಆದ ಪಂಜಾಬ್ ವ್ಯಕ್ತಿಯ ಸಾಹಸಕ್ಕೆ ನೆಟ್ಟಿಗರು ಫಿದಾ!
ಮನವೊಲಿಸಿ ದುರಂತ ತಪ್ಪಿಸಿದ ‘ರಿಯಲ್ ಹೀರೋ’
ಡೆಲಿವರಿ ಬಾಯ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. “ನಿಮಗೆ ನಿಜವಾಗಿಯೂ ಇಲಿ ಕಾಟವಿದ್ದರೆ ಸಂಜೆ ಅಥವಾ ನಾಳೆ ಬೆಳಗ್ಗೆ ಆರ್ಡರ್ ಮಾಡಬಹುದಿತ್ತು. ಇಷ್ಟು ತಡರಾತ್ರಿ 3 ಪ್ಯಾಕೆಟ್ (Blinkit delivery boy) ಆರ್ಡರ್ ಮಾಡುವ ಅಗತ್ಯವೇನಿತ್ತು? ದಯವಿಟ್ಟು ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ” ಎಂದು ಬುದ್ಧಿಮಾತು ಹೇಳಿದರು. ಅಂತಿಮವಾಗಿ ಆಕೆಯ ಮನವೊಲಿಸಿ, ಆರ್ಡರ್ ಕ್ಯಾನ್ಸಲ್ ಮಾಡಿಸಿ ಅಲ್ಲಿಂದ ವಾಪಸ್ ಬಂದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಸಾಮಾಜಿಕ ಜಾಲತಾಣದಲ್ಲಿ ಹರಿದುಬಂದ ಮೆಚ್ಚುಗೆಯ ಮಹಾಪೂರ
ಈ ಹೃದಯಸ್ಪರ್ಶಿ ಘಟನೆಯನ್ನು ಡೆಲಿವರಿ ಬಾಯ್ (Blinkit delivery boy) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಆಕೆಯ ಪ್ರಾಣ ಉಳಿಸಿದ ತೃಪ್ತಿ ನನಗಿದೆ” ಎಂದು ಅವರು ಹೇಳಿಕೊಂಡಿದ್ದು, ನೆಟ್ಟಿಗರು ಇವರ ಕಾರ್ಯಕ್ಕೆ ಭೇಷ್ ಎನ್ನುತ್ತಿದ್ದಾರೆ.
ಗಮನಿಸಿ: ಜೀವನದಲ್ಲಿ ಏನೇ ಕಷ್ಟ ಬಂದರೂ ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಮಾನಸಿಕವಾಗಿ ಕುಗ್ಗಿದಾಗ ಸಹಾಯಕ್ಕಾಗಿ ಆಪ್ತರನ್ನು ಅಥವಾ ಸಹಾಯವಾಣಿಗಳನ್ನು ಸಂಪರ್ಕಿಸಿ.
