ರಾಜ್ಯದಲ್ಲಿ ಅಭಿವೃದ್ದಿ ಕುಂಠಿತಗೊಂಡಿದೆ, ಕಾನೂನು ಸುವ್ಯವಸ್ಥೆ ಹದಗಟ್ಟಿದೆ. ಅವರು ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಆಡಳಿತ ವೈಖರಿ ನೋಡಿದರೇ ಸರ್ಕಾರ ಸರಿಯಿದೆ ಎಂದು ಅನ್ನಿಸುತ್ತಿಲ್ಲ ಎಂದು ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಷ ಹೊರಹಾಕಿದ್ದಾರೆ. ಸರ್ಕಾರ ಇಲ್ಲಿಯವರೆಗೂ ಯಾವುದೇ ಒಂದು ಕ್ಷೇತ್ರದಲ್ಲೂ ಅಭಿವೃದ್ದಿ ಕೆಲಸ ಆಗಿಲ್ಲ, ಒಂದೇ ಒಂದು ಗುದ್ದಲಿ ಪೂಜೆ ಸಹ ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಚುನಾವನೆಯ ಪ್ರಯುಕ್ತ ಬಿಜೆಪಿಯಿಂದ ಮಂಗಳೂರಿನ ಡೊಂಗರಕೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೇಸ್ ಆಡಳಿತಾವಧಿಯಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ. ಅವರ ಅಲ್ಪಸಂಖ್ಯಾತ ತುಷ್ಠೀಕರಣ ನೀತಿಯಿಂದ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ದಾಂದಲೆ ನಡೆದಿದೆ. ಅವರ ದುಸ್ಸಾಹಸಕ್ಕೆ ಕಾಂಗ್ರೇಸ್ ಸರ್ಕಾರ ಅಧಿಕಾರದಲ್ಲಿರೊದೇ ಕಾರಣವಾಗಿದೆ. ಏನೇ ಮಾಡಿದ್ರೂ ಕಾಂಗ್ರೇಸ್ ಸರ್ಕಾರ ರಕ್ಷಣೆ ಕೊಡುತ್ತೆ ಎನ್ನುವ ನಂಬಿಕೆ ಅವರಿಗಿದೆ. ಈ ಕಾರಣದಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆಕ್ರೋಷ ಹೊರಹಾಕಿದರು.
ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಭೋಜೇಗೌಡ ನುರಿತ ರಾಜಕಾರಣಿಯಾಗಿದ್ದಾರೆ. ಅವರ ಮಾತುಗಳು ಕೇಳುತ್ತಿದ್ದರೇ ಅವರು ಬಾಲ್ಯದಲ್ಲಿ ಸ್ವಯಂ ಸೇವಕರಾಗಿರಬೇಕು ಅನ್ನಿಸುತ್ತದೆ. ಡಾ.ಧನಂಜಯ ಸರ್ಜಿ ಹೊಟ್ಟೆಪಾಡಿಗಾಗಿ ರಾಜಕಾರಣಕ್ಕೆ ಬಂದವರಲ್ಲ. ಅವರು ಮಾಡಿರುವ ಸೇವೆಯ ಕಾರಣದಿಂದ ಅವರನ್ನು ಗುರ್ತಿಸಿದ್ದಾರೆ. ವಿಧಾನಪರಿಷತ್ ಚುನಾವಣೆಯ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಅನೇಕ ಹಿರಿಯರು ಸ್ಪರ್ಧೆ ಮಾಡುವ ಆಪೇಕ್ಷೆ ಪಟ್ಟಿದ್ದರು. ಆದರೆ ಪಕ್ಷದ ವರಿಷ್ಟರ ತೀರ್ಮಾನದಂತೆ ಇಬ್ಬರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.
ಇನ್ನೂ ಮಧು ಬಂಗಾರಪ್ಪ ರವರ ಹೇಳಿಕೆಯ ಕುರಿತು ಮಾತನಾಡಿದ ವಿಜಯೇಂದ್ರ ನಾನು ಶಿಕ್ಷಣ ಸಚಿವರ ಬಗ್ಗೆ ಹೇಳಿಕೆ ನೀಡಿರುವ ಉದ್ದೇಶ ಹಾಗೂ ಹಿನ್ನೆಲೆ ಬೇರೆಯದ್ದೆ ಇದೆ. ಕ್ಷೌರ, ಕ್ಷೌರಿಕನಿಂದ ಬೇರೆಡೆ ತಿರುಗಿಸುವ ಪ್ರಯತ್ನ ಮಾಡಿದರು. ಶಿಕ್ಷಣ ಕ್ಷೇತ್ರದ ಸ್ಥಿತಿಯ ಬಗ್ಗೆ ಜನ ಮಾತಾನಾಡಿಕೊಳ್ಳುತ್ತಿರುವುದನ್ನು ನಾನು ಹೇಳಿದ್ದು, ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಕಲುಷಿತಗೊಂಡಿದೆ. ಮಕ್ಕಳ ಹಾಗೂ ಪೋಷಕರ ಜೊತೆಗೆ ಶಿಕ್ಷಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣ ಸಚಿವರು ಈ ಸಮಸ್ಯೆಗಳ ಕಡೆ ಗಮನ ಹರಿಸಬೇಕೆಂದು ನಾನು ಹೇಳಿರೋದು ಅಂತಾ ವಿಜಯೇಂದ್ರ ತಿಳಿಸಿದರು.
ಕಳೆದರಡು ದಿನಗಳ ಹಿಂದೆಯಷ್ಟೆ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರ ಕೇಶ ವಿನ್ಯಾಸದ ಬಗ್ಗೆ ಟೀಕೆ ಮಾಡಿದ್ದರು. ಶಾಲೆಗೆ ತೆರಳುವ ಮಕ್ಕಳ ಪೋಷಕರು ನಮ್ಮ ಮಕ್ಕಳು ತಲೆಬಾಚಿಕೊಂಡು ಶಿಸ್ತಿನಿಂದ ತೆರಳಬೇಕು ಎಂದು ಭಾವಿಸುತ್ತಾರೆ. ಆದರೆ ಶಿಕ್ಷಣ ಸಚಿವರು ವಿಧಾನಸೌಧಕ್ಕೆ ಬರುವಾಗ ತಲೆಯಾದರು ಬಾಚಿಕೊಂಡು ಬರುವಂತೆ ಹೇಳಿದ್ದರು. ಈ ಹೇಳಿಕೆಗೆ ವಿಜಯೇಂದ್ರ ಅವರ ಅಪ್ಪ ಸಿಎಂ ಆಗಿದ್ದರೆಂಬ ಭ್ರಮೆಯಲ್ಲಿದ್ದಾರೆ. ಆ ಭ್ರಮೆಯಿಂದ ಹೊರಬರಬೇಕು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಏನು ಮಾಡಬೇಕೆಂದು ಯೋಚನೆ ಮಾಡಲಿ ಎಂದು ತಿರುಗೇಟು ನೀಡಿದರು. ಜೊತೆಗೆ ನನಗೆ ಕಟ್ಟಿಂಗ್ ಮಾಡುವವರು ಫ್ರೀ ಇಲ್ಲ, ವಿಜಯೇಂದ್ರ ಫ್ರೀ ಇದ್ದರೇ ಬಂದು ಕಟಿಂಗ್ ಮಾಡಲಿ ಎಂದು ಟಾಂಗ್ ಸಹ ಕೊಟ್ಟಿದ್ದಾರೆ.