ಲೋಕಸಭಾ ಚುನಾವಣೆ 2024 ನಿಮಿತ್ತ ವಿವಿಧ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪಗಳು ಭಾರಿ ಸದ್ದು ಮಾಡುತ್ತಿವೆ. ಅಕ್ರಮ ಮಧ್ಯ ಹಗರಣ ನೀತಿ ಪ್ರಕರಣದಲ್ಲಿ ಜೈಲುಪಾಲಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾಮೀನಿನ ಮೇರೆಗೆ ತಿಹಾರ್ ಜೈಲಿನಿಂದ ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಕೇಜ್ರಿವಾಲ್ ಬಿಜೆಪಿ (BJP) ಹಾಗೂ ಮೋದಿ ವಿರುದ್ದ ಕಿಡಿಕಾರಿದ್ದು, ಈ ಬಾರಿ ನರೇಂದ್ರ ಮೋದಿ ಪಿಎಂ ಆಗೊಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh)ಕೌಂಟರ್ ಕೊಟ್ಟಿದ್ದು, ಮೂರನೇ ಬಾರಿಯೂ ಮೋದಿಯವರು ಪ್ರಧಾನಿಯಾಗೋದು ಪಕ್ಕಾ ಎಂದು ಹೇಳಿದ್ದಾರೆ.
ಅಕ್ರಮ ಮದ್ಯ ಹಗರಣ ನೀತಿ ಪ್ರಕರಣದ ನಿಮಿತ್ತ ಜೈಲಿಗೆ ಹೋಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Aravind Kejriwal)ಸದ್ಯ ಜಾಮೀನಿನ ಮೇರೆಗೆ ಹೊರಬಂದಿದ್ದಾರೆ. ಹೊರಬಂದ ಕೂಡಲೇ ಬಿಜೆಪಿ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ. ಬಿಜೆಪಿ ಪಕ್ಷದಲ್ಲಿ 75 ವರ್ಷ ದಾಟಿದವರನ್ನು ರಾಜಕೀಯದಿಂದ ದೂರ ಇಡುತ್ತಾರೆ. ಅವರಿಗೆ ನಿವೃತ್ತಿ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮೋದಿಯವರು ಸೆಪ್ಟೆಂಬರ್ ಮಾಹೆಯಲ್ಲಿ ನಿವೃತ್ತಿಯಾಗಲಿದ್ದಾರೆ. ಯೋಗಿ ಆದಿತ್ಯನಾಥ್ ರವರನ್ನು ಮೂಲೆ ಗುಂಪು ಮಾಡುತ್ತಾರೆ. ಮುಂದಿನ ಪ್ರಧಾನಿಯಾಗಿ ಅಮಿತ್ ಶಾ (Amit Shah)ರವರು ಆಯ್ಕೆ ಯಾಗಲಿದ್ದಾರೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ನರೇಂದ್ರ ಮೋದಿಯವರು (Narendra Modi) ಮೂರನೇ ಬಾರಿಗೂ ಪ್ರಧಾನಿಯಾಗುತ್ತಾರೆ, ಅವರ ಅವಧಿಯನ್ನು ಸಹ ಪೂರ್ಣಗೊಳಿಸುತ್ತಾರೆ. ಇದು ಬಿಜೆಪಿಯವರಿಗಾಗಲೀ, ಎನ್.ಡಿ.ಎ ಕೂಟದಲ್ಲಾಗಲಿ ಅಥವಾ ದೇಶದ ಜನರಲ್ಲಾಗಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.
आम आदमी पार्टी के नेता अरविंद केजरीवाल जी ने जेल से अंतरिम जमानत पर छूटने के बाद, आज भाजपा के बारे में जिस तरह की अनर्गल बातें की हैं उससे यह साफ़ दिखने लगा है कि इस चुनाव में भाजपा और एनडीए गठबंधन प्रधानमंत्री श्री @narendramodi के नेतृत्व में शानदार विजय प्राप्त करने जा रहा है।…
— Rajnath Singh (मोदी का परिवार) (@rajnathsingh) May 11, 2024
ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಮಧ್ಯಂತರ ಜಾಮೀನು ಮೇಲೆ ಜೈಲಿನಿಂದ ಬಂದ ಬಳಿಕ ಅಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಬಿಜೆಪಿ ಪಕ್ಷದ ಬಗ್ಗೆ ಆಧಾರರಹಿತ ಹೇಳಿಕೆಗಳನ್ನು ಯಾವ ರೀತಿ ಹೇಳಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರ ಉದ್ದೇಶ ಏನು ಎಂಬುದು ಈ ಚುನಾವಣೆಯಲ್ಲಿ ಸ್ಪಷ್ಟವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಅದ್ಬುತವಾದ ಗೆಲುವು ಸಾಧಿಸಲಿದೆ. ನರೇಂದ್ರ ಮೋದಿಯವರು ಮೂರನೇ ಭಾರಿ ಪ್ರಧಾನಿಯಾಗುತ್ತಾರೆ, ಇದು ಬಿಜೆಪಿಯೊಳಗಾಗಲೀ, ಎನ್.ಡಿ.ಎ ಕೂಟದ ಒಳಗಾಗಲೀ ಈ ಬಗ್ಗೆ ಯಾವುದೇ ಅನುಮಾನವಿಲ್ಲ ಜೊತೆಗೆ ದೇಶವಾಸಿಗಳ ಮನಸ್ಸಿನಲ್ಲೂ ಅನುಮಾನವಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.
ಮುಂದುವರೆದು ಪ್ರಧಾನಿ ಮೋದಿ ರಾಜಕೀಯದಲ್ಲಿ ವಿಶ್ವಾರ್ಹತೆಯ ಸಂಕೇತವಾಗಿದ್ದಾರೆ. ಆದರೆ ಕೇಜ್ರಿವಾಲ್ ರಾಜಕೀಯದಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟಿನ ಸಂಕೇತವಾಗಿದ್ದಾರೆ. ಬಿಜೆಯ ಮನಸ್ಸಿನಲ್ಲಿ ಮೋದಿ ಇದ್ದಾರೆ, ದೇಶದಲ್ಲಿ ಮೋದಿಯವರ ನಾಯಕತ್ವ ಇರಲಿದೆ. ಮೂರನೇ ಭಾರಿ ಮೋದಿ ಪ್ರಧಾನಿಯಾಗುವ ಮೂಲಕ ಅಭಿವೃದ್ದಿ ಹೊಂದಿದ ಭಾರತವನ್ನು ನಿರ್ಮಾಣ ಮಾಡುವ ಹಾಗೂ ಭಾರತವನ್ನು ಮತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ಇನಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸ ಭಾರತ ದೇಶ ಹೊಂದಿದೆ ಎಂದು ರಾಜನಾಥ್ ಸಿಂಗ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.