BJP Karnataka – ರಾಜ್ಯ ಬಿಜೆಪಿ ಪಾಳೆಯದಲ್ಲಿ ಸದ್ಯ ವಿಜಯೇಂದ್ರ ಹಾಗೂ ಯತ್ನಾಳ್ ಬಣದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಈ ಕುರಿತು ಹೈಕಮಾಂಡ್ ಸಹ ಬೇಸರ ವ್ಯಕ್ತಪಡಿಸಿದೆ ಎಂದೂ ಹೇಳಲಾಗುತ್ತಿದೆ. ಅದರ ಭಾಗವಾಗಿ ಇದೀಗ ಚಿಕ್ಕಬಳ್ಳಾಪುರದಲ್ಲೂ ಸಹ ನಾಯಕರುಗಳ ನಡುವೆ ವಾರ್ ಶುರುವಾಗಿದೆ. ಇತ್ತಿಚಿಗಷ್ಟೆ ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಿ.ಸಂದೀಪ್ ರೆಡ್ಡಿ ರವರ ಆಯ್ಕೆಯನ್ನು ತಡೆಹಿಡಿಯಲಾಗಿದ್ದು, ಇದರಲ್ಲಿ ಸಂಸದ ಡಾ.ಕೆ.ಸುಧಾಕರ್ ರವರ ಪಾತ್ರವಿದೆ ಎಂದು ಹೇಳಲಾಗುತ್ತಿದೆ.

BJP Karnataka : ಡಾ.ಸುಧಾಕರ್ ವಿರುದ್ದ ಗುಡುಗಿದ ಬಿ.ಸಂದೀಪ್ ರೆಡ್ಡಿ
ಇಂದು (ಫೆ.11) ರಂದು ಚಿಕ್ಕಬಳ್ಳಾಪುರದಲ್ಲಿ ಮುಖಂಡ ಬಿ.ಸಂದೀಪ್ ರೆಡ್ಡಿ ಈ ಕುರಿತು ಪತ್ರಿಕಾ ಗೋಷ್ಟಿಯನ್ನು ನಡೆಸಿದರು. ಈ ಸಮಯದಲ್ಲಿ ಮಾತನಾಡಿದ ಅವರು, ನಾವು ಚುನಾವಣಾ ಪ್ರಕ್ರಿಯೆ ಮೂಲಕವೇ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇವೆ. ಜ.15 ರಂದು ಈ ಚುನಾವಣಾ ಪ್ರಕ್ರಿಯೆ ನಡೆಯಿತು. ಎಲ್ಲವೂ ರೆಕಾರ್ಡ್ ಸಹ ಆಗಿದೆ. ನಾನು ಯಾವುದೇ ಗಾಡ್ ಫಾದರ್ ಇಟ್ಟುಕೊಂಡು ಬಿಜೆಪಿ ಅಧ್ಯಕ್ಷನಾಗಿರಲಿಲ್ಲ. ನಾನು ಯಾರ ಬಾಗಿಲು ತಟ್ಟಿಲ್ಲ. ನನ್ನನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಬ್ಲಾಕ್ ಮೇಲ್ ಮಾಡಿಲ್ಲ. ಆದರೆ ಡಾ.ಕೆ.ಸುಧಾಕರ್ ರವರು ಅಸೂಯೆಯ ಕಾರಣದಿಂದ ಈ ರೀತಿಯ ಕೆಲಸ ಮಾಡಿದ್ದಾರೆ. ಅವರ ಅಣುಅಣುವಿನಲ್ಲೂ ವಿಷ ತುಂಬಿದೆ. ಈ ಹಿಂದೆ ನನ್ನ ಎಂ.ಎಲ್.ಸಿ ಮಾಡ್ತೀನಿ ಅಂತೆಲ್ಲಾ ಹೇಳಿದ್ದರು. ಆದರೆ ನನಗೆ ಪಕ್ಷ ಮುಖ್ಯ, ನನ್ನ ಚಿಕ್ಕಬಳ್ಳಾಪುರದ ಜನತೆ ಮುಖ್ಯ, ನಾನು ಅವರಿಗೋಸ್ಕರ ಕೆಲಸ ಮಾಡುತ್ತೇನೆ. ನಾನು ಬಿಜೆಪಿ ಅಧ್ಯಕ್ಷನಾಗಿದ್ದರೂ ಕೆಲಸ ಮಾಡ್ತೀನಿ, ಕಾರ್ಯಕರ್ತನಾಗಿಯೂ ಕೆಲಸ ಮಾಡ್ತೀನಿ ಎಂದರು.

BJP Karnataka : ಸುಧಾಕರ ನಿನ್ನ ಹಗರಣಗಳನ್ನು ಹೊರತೆಗೆಯುತ್ತೇನೆ ಎಂದ ಸಂದೀಪ್ ರೆಡ್ಡಿ
ಇನ್ನೂ ಪತ್ರಿಕಾಗೋಷ್ಟಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ವಿರುದ್ದ ಸಾಲು ಸಾಲು ಆರೋಪಗಳನ್ನು ಮಾಡಿದರು. ಸುಧಾಕರ್ ರವರು ಮಾಡಿದ ಅನ್ಯಾಯಗಳನ್ನು ಇನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನನಗೂ ಕುಟುಂಬವಿದೆ, ನಾನು ಬದುಕಬೇಕಿದೆ. ನನ್ನ ವಿರುದ್ದ ವೈಯುಕ್ತಿಕ ಟಾರ್ಗೆಟ್ ಮಾಡುತ್ತಿದ್ದಾರೆ. ಕೊವಿಡ್ ಸಮಯದಲ್ಲಿ ಜನ ಸಾಯುತ್ತಿದ್ದರೂ ಸುಧಾಕರ್ ಮಾತ್ರ ಹಣ ದೋಚಿಕೊಂಡು ಚೆನೈ ಮೂಲದ ಮೈಕ್ರೋ ಫೈನಾನ್ಸ್ ಕಂಪನಿಯೊಂದರಲ್ಲಿ ಹಣ ಹಾಕಿದ್ದಾರೆ. ಈ ಕುರಿತು ಎಲ್ಲಾ ದಾಖಲೆಗಳು ನನ್ನ ಬಳಿಯಿದೆ. ಎಲ್ಲವನ್ನೂ ಕೋವಿಡ್ ಹಗರಣ ತನಿಖೆ ನಡೆಸುತ್ತಿರುವ ನ್ಯಾಯಾಧೀಶರಿಗೆ ಒಪ್ಪಿಸುತ್ತೇನೆ. ಕೋವಿಡ್ ಹಗರಣದ ತನಿಖೆ ನಡೆಸುತ್ತಿರುವ ಮೈಕ ಕುನ್ಹಾ ರವರು ಸಮಯ ನೀಡಿದೇ ಈ ದಾಖಲೆಗಳನ್ನು ನೀಡುತ್ತೇನೆ. ತಾವು ಮಾಡಿರುವ ಎಲ್ಲಾ ಅನಾಚರಗಳನ್ನು ಬಯಲಿಗೆ ತರುತ್ತೇನೆ ಎಂದು ಗುಡುಗಿದರು.
ಇನ್ನೂ ಡಾ.ಕೆ.ಸುಧಾಕರ್ ರವರ ಮನಸ್ಸು ತುಂಬಾ ಬಲಹೀನವಾಗಿದೆ, ಅವರಿಗೆ ಸಂದೇಹಗಳು ಮತ್ತು ಭಯ ಜಾಸ್ತಿಯಿದೆ. ಯಾರನ್ನೂ ಕಂಡರೂ ಅಸೂಯೆಪಡವಂತಹ ಇನ್ ಬಿಲ್ಟ್ ಕ್ಯಾರೆಕ್ಟರ್ ಇದೆ. ಇದನ್ನು ಪಾಪ ಎಂದೇ ಕರೆಯುತ್ತೇನೆ. ಎಲ್ಲಿಯವರೆಗೂ ತಲೆಬಾಗಬೇಕು ಅಲ್ಲಿಯವರೆಗೂ ಬಾಗಲು ಸಾಧ್ಯವಾಗಿರುತ್ತದೆ. ಅಸೂಯೆಗೆ, ಹೊಟ್ಟೆಯುರಿಗೆ ಒಂದು ಇತಿ-ಮಿತಿ ಇರಬೇಕು. ಎಷ್ಟು ದಿನ ಅಂತಾ ಈ ಪಾಪದ ಹೊರೆ ಹೊತ್ತುಕೊಳ್ಳುತ್ತೀಯಾ, ನಾಲ್ಕು ದಿನದ ಜೀವನ, ಮನುಷ್ಯನಾಗಿ ಬದುಕಪ್ಪಾ, ಪ್ರಕೃತಿಯ ವಿರುದ್ದವಾಗಿ ಹೋಗಬೇಡಿ. ಇಂದು ನೀವು ಮಾಡಿದಂತಹ ಕೆಲಸದಿಂದ ನನ್ನ ಪರ ಎಷ್ಟು ಮಂದಿ ಬೆಂಬಲವಾಗಿ ನಿಂತಿದ್ದಾರೆ ಎಂಬುದು ತಿಳಿದಿದೆ. ಜಿಲ್ಲಾಧ್ಯಕ್ಷ ಸ್ಥಾನದ ಹೋಲ್ಡ್ ಮಾಡಿದಾಗಿನಿಂದ ಎಷ್ಟು ಮಂದಿ ಕರೆ, ಸಂದೇಶಗಳನ್ನು ಕಳುಹಿಸಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದರು.